ಹೆಚ್ಚಿದ ಕೋತಿಗಳ ಉಪಟಳ : ಮೂರು ಜನರಿಗೆ ಕಡಿತ

ಹಗರಿಬೊಮ್ಮನಹಳ್ಳಿ
     ತಾಲೂಕಿನ ಗದ್ದಿಕರೆ ಗ್ರಾಮದಲ್ಲಿ ಒಂದು ವಾರದಿಂದ ಕರೆಕೋತಿಯ ಉಪಟಳ ಮಿತಿಮೀರಿದ್ದು, ಗ್ರಾಮದ ಮೂರು ಜನರಿಗೆ ಕಡಿದಿದೆ, ಪರಿಣಾಮ ಸಾರ್ವಜನಿಕರು ಭಯಗ್ರಸ್ತರಾಗಿದ್ದಾರೆ. ಇದಕ್ಕೆ ಹುಚ್ಚು ಹಿಡಿದಿದೆ ಎಂದು ಸಾರ್ವಜನಿಕರು ದೂರುತ್ತಾರೆ.ಗ್ರಾಮದ ದೇಗನಳ್ಳಿ ಗಿರಿಯಪ್ಪ(75)ಎನ್ನುವವರಿಗೆ ಶುಕ್ರವಾರ ಕೋತಿ ಕಡಿದಿದೆ. ಶನಿವಾರ ಮಧ್ಯಾಹ್ನ ಬಡಿಗೇರ್ ಚಂದ್ರಮ್ಮ(45) ಎನ್ನುವ ಮಹಿಳೆಗೆ ಕಚ್ಚಿದ್ದು, ಸಂಜೆ ಕೊಳ್ಳಿ ಕರಿಬಸಪ್ಪ(50) ಎನ್ನುವ ವ್ಯಕ್ತಿಗೆ ಕಚ್ಚಿದೆ. ಕಚ್ಚಿಸಿಕೊಂಡವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೀತಿ ಸಾರ್ವಜನಿಕರ ಮೇಲೆ ಎರಗುವ ಕೋತಿಯ ಉಪಟಳ ನಿಯಂತ್ರಿಸಬೇಕಿದೆ.  
     ಕಳೆದ ನಾಲ್ಕಾರು ದಿನಗಳ ಈಚೆಗೆ ಗ್ರಾಮ ಸೇರಿರುವ ಈ ಕೋತಿ ವಿಚಿತ್ರವಾಗಿ ವರ್ತಿಸುತ್ತಿದೆ. ಇದರಿಂದ ಮಕ್ಕಳು, ವಯಸ್ಸಾದವರು ಓಡಾಡುವುದು ಕಷ್ಟಕರ ಸಂಗತಿಯಾಗಿದೆ ಎಂದು ಗ್ರಾಮದ ಯುವಕ ಗುರುಬಸವರಾಜ್ ಪಟ್ಟಣಶೆಟ್ಟಿ ತಿಳಿಸುತ್ತಾರೆ. ಅಲ್ಲದೆ, ಗ್ರಾಮದಲ್ಲಿ ಸಾಕಷ್ಟು ಕೋತಿಗಳಿದ್ದು, ಈ ಹುಚ್ಚು ಹಿಡಿದ ಕೋತಿ, ಬೇರೆ ಕೋತಿಗಳಿಗೆ ಕಚ್ಚಿದ ಹಿನ್ನೆಲೆ ಈಗಾಗಲೇ ಕೋತಿಗಳ ಗುಂಪಿನಲ್ಲಿ ಎರಡ್ಮೂರು ಕೋತಿಗಳಿಗೆ ಹುಚ್ಚು ಹಿಡಿದಿವೆ ಎಂದು ಕೇಳಿಬರುತ್ತಿರುವುದಾಗಿ ಗ್ರಾಮಸ್ಥರು ಇನ್ನಷ್ಟು ಭಯಭೀತರಾಗಿದ್ದಾರೆ.
ಅರಣ್ಯ ಇಲಾಖೆಯವರ ನಿರ್ಲಕ್ಷ್ಯ:
      ಗ್ರಾಮದಲ್ಲಿ ಹೆಚ್ಚುತ್ತಿರುವ ಕೋತಿಗಳ ಕಾಟ ತಪ್ಪಿಸಲು, ಗ್ರಾಮಪಂಚಾಯಿತಿಗೂ ದೂರಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ. ಹೀಗಾದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೆಷ್ಟು ಜನರು ಈ ಹುಚ್ಚುಕೋತಿಯಿಂದ ಕಚ್ಚಿಸಿಕೊಳ್ಳುವ ದುಸ್ಥಿತಿ ಇದೆ ಎಂದು ಗ್ರಾಮದವರು ಆರೋಪಿಸುತ್ತಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link