ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯದ ಕುಸಿದಿದೆ : ಸಂತೋಷ್ ಹೆಗ್ಡೆ

0
32

ಬೆಂಗಳೂರು

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯದ ಕುಸಿತ ವ್ಯಾಪಕವಾಗಿರುವುದೇ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗಿದ್ದು ಸಮಾಜದಲ್ಲಿ ಮಾನವೀಯತೆಯೂ ಕಡಿಮೆ ಯಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಆತಂಕ ವ್ಯಕ್ತಪಡಿಸಿದರು.

     ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ ಏರ್ಪಡಿಸಿದ್ದ, ಕಾರ್ಮಿಕರ ಸಮಾವೇಶ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಭಾರತವು ಬಹುಸಂಸ್ಕೃತಿಯ ದೇಶ.ಆದರೆ, ಸ್ವಾತಂತ್ರ್ಯ ಬಂದ ಮೇಲೆ ಹಲವು ಮೌಲ್ಯಗಳು ಯಕ್ಷ ಪ್ರಶ್ನೆಯಾಗಿವೆ ಎಂದರು,

     ನಮ್ಮಂತ ವಯಸ್ಸಿನವರಿಂದ ಸಮಾಜ ಕೆಟ್ಟಿದೆ ಎಂದು ಹೇಳಿದರೆ, ತಪ್ಪಾಗದು. ಆದರೆ, ಭವಿಷ್ಯದಲ್ಲಿ ಯುವಕರಿಂದ ಸಮಾಜ ಬದಲಾಗಬೇಕು ಮಾನವೀಯ ಮೌಲ್ಯಗಳು ಸುಧಾರಿಸಬೆಕು ಎಂದು ತಿಳಿಸಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಹತ್ತು ಹಲವು ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

      ಆಧುನಿಕ ಭಾರತದ ನಿರ್ಮಾಣಕ್ಕೆ ಕಟ್ಟಡ ಕಾರ್ಮಿಕರ ಕೊಡುಗೆ ಅಪಾರ. ಸರ್ಕಾರಗಳು ಸಹ ಕಾರ್ಮಿಕರ ಪ್ರಗತಿಗಾಗಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಲಾಭ ಪಡೆದು, ಸ್ವಾವಲಂಬಿ ಜೀವನ ಹಾಗೂ ಆರ್ಥಿಕ ವಾಗಿ ಮುಂದಾಗಬೇಕು ಎಂದು ತಿಳಿಸಿದರು.
ಇಂದಿನ ವ್ಯವಸ್ಥೆ ಸರಿಯಿಲ್ಲ ಎಂದು ಎಲ್ಲರೂ ದೂರುತ್ತೇವೆ.ಆದರೆ, ಇದಕ್ಕೆ, ಪಕ್ಷ ,ಸಂಸ್ಥೆ, ಸಂಘಟನೆಗಳು ಕಾರಣರವಲ್ಲ.ಎಲ್ಲಾರ ತಪ್ಪು ಇದೆ ಎಂದ ಅವರು, ಕೆಲಸ ಕಾರ್ಯಗಳನ್ನು ಮಾಡುವಾಗ ಟೀಕೆಗಳು ಕೇಳಿ ಬರುತ್ತದೆ.ಆದರೆ, ನಾವು ಅದನ್ನು ದಾಟಿ ಸಾಗಬೇಕು ಎಂದರು.

ಎಲ್ಲಿ ಕಪ್ಪು ಹಣ?

        ಪ್ರಧಾನಿ ನರೇಂದ್ರ ಮೋದಿ ಅವರು 2014ರ ಲೋಕಾಸಭಾ ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ, ಸುಳ್ಳು ಭರವಸೆ ನೀಡಿದ್ದು, ಮಾತ್ರವಲ್ಲದೆ, ಕಪ್ಪುಹಣ ವಿದೇಶ ದಿಂದ ತರುತ್ತೇವೆ ಎಂದಿದ್ದರು.ಆದರೆ, ಇದುವರೆಗೂ ಒಂದು ಪೈಸೆಯೂ ಬರಲಿಲ್ಲ. ಅಷ್ಟೇ ಅಲ್ಲದೆ, ರಫೇಲ್ ವಿಮಾನ ಖರೀದಿ ಬಹುಕೋಟಿ ಹಗರಣ ಆರೋಪ ಕೇಳಿಬಂದಿದೆ ಎಂದು ದೂರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here