ಜಿಲ್ಲೆಯಲ್ಲಿ ಅಪೌಷ್ಠಿಕತೆ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗುವುದು: ಡಿಸಿ

ಬಳ್ಳಾರಿ

     ಜಿಲ್ಲಾ ಖನಿಜ ಪ್ರತಿಷ್ಠಾನದಡಿ 1400 ಕೋಟಿ ರೂ. ಕ್ರಿಯಾಯೋಜನೆಯನ್ನು ಸಿದ್ದಪಡಿಸಲಾಗಿದ್ದು, ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳು ಮಾರ್ಗದರ್ಶನದಲ್ಲಿ ಆರೋಗ್ಯ, ಅಪೌಷ್ಠಿಕತೆ ನಿವಾರಣೆ,ಕೌಶಲ್ಯ ಅಭಿವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಂತ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.

     64ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶುಕ್ರವಾರದಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
4ಸಾವಿರ ಕೋಟಿ ರೂ.ಗಳು ಕೆಎಂಇಆರ್‍ಸಿಯಿಂದ ಅನುದಾನ ಬರುವ ನಿರೀಕ್ಷೆಯಿದ್ದು, ಜನಪ್ರತಿನಿಧಿಗಳ ಸಲಹೆ,ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಉತ್ತಮರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಬಳ್ಳಾರಿ ಅಭಿವೃದ್ಧಿಪಡಿಲಾಗುವುದು ಎಂದು ಹೇಳಿದ ಅವರು ಬಹುವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲೆಯ ಪ್ರಾಚೀನ ಇತಿಹಾಸ ಪ್ರತಿಬಿಂಬಿಸುವ ನಗರದ ಸಾಂಸ್ಕøತಿಕ ಸಮುಚ್ಛಯದಲ್ಲಿ ಮ್ಯೂಸಿಯಂ ಮಾಡಲಾಗುತ್ತಿದ್ದು,ಅದರಲ್ಲಿ ಸಂಗನಕಲ್ಲಿನ ಪ್ರಾಗೈತಿಹಾಸಿಕ ಪರಿಕರಗಳನ್ನೀಡಲಾಗುವುದು. ಇದರ ಉದ್ಘಾಟನೆ ಜ.26ರಂದು ನಡೆಯಲಿದೆ ಎಂದರು.

    ಕರ್ನಾಟಕ ರಾಜ್ಯವು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ರಾಜ್ಯವಾಗಿದ್ದು, ಈ ರಾಜ್ಯದ ಸಂಪತ್ತು ಮತ್ತು ಸಾಂಸ್ಕøತಿಕೆಯನ್ನು ಉಳಿಸಿ, ಬೆಳೆಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು.
ಅಪಾರ ಸಂಪತ್ತು, ಐತಿಹಾಸಿಕ ಚರಿತ್ರೆ ಮತ್ತು ವಿವಿಧತೆಯಲ್ಲಿ ಏಕತೆಯುಳ್ಳ ಕರ್ನಾಟಕ ರಾಜ್ಯವಾಗಿದೆ ಎಂದು ಹೇಳಿದ ಅವರು ಕರ್ನಾಟಕವೆಂಬುದು ಕೇವಲ ಒಂದು ಭೂ ಪ್ರದೇಶಕಷ್ಟೇ ಸೀಮಿತವಾಗಿಲ್ಲ, ಕರ್ನಾಟಕವೆಂದರೆ ಒಂದು ಸಂಸ್ಕøತಿ, ಒಂದು ಜನ ಸಮುದಾಯ, ಒಂದು ಜೀವನ ಪದ್ಧತಿ ಎಂಬ ವಿಶಾಲಾರ್ಥ ಹೊಂದಿದೆ. ರಾಜ್ಯದ ಪರಂಪರೆಯನ್ನು ಪ್ರತಿನಿಧಿಸುವ ಪ್ರಾಚೀನ ಪದವಾಗಿದೆ. ಕರ್ನಾಟಕ ಇತಿಹಾಸ ಸುದೀರ್ಘವಾಗಿದೆ. ಕರ್ನಾಟಕವು ಸರ್ವಧರ್ಮ ರಕ್ಷಣೆ, ಸತ್ಯಾರಾಧನೆ, ಧರ್ಮನೀತಿ, ಸರ್ವಧರ್ಮ, ಸಹಿಷ್ಣುತೆ, ಧಾರ್ಮಿಕ ಸಮನ್ವಯ, ಸಹಬಾಳ್ವೆ, ಸೌಹರ್ದತೆ ಮತ್ತು ಭಾವೈಕ್ಯತೆಯ ದಿವ್ಯ ಸ್ವರ್ಗವಾಗಿದೆ ಎಂದರು.

   ಇಡೀ ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡೆಗೆ ಅಪಾರವಾಗಿದೆ. ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಆಲೋಚನೆಗಳ ಸಮಗ್ರ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಏಕೀಕರಣಗೊಂಡ ನಮ್ಮ ನಾಡಿನ ಉಜ್ವಲ ಮತ್ತು ಭವ್ಯ ಸಾಂಸ್ಕøತಿಕ ಪರಂಪರೆ, ಕನ್ನಡ ನಾಡು-ನುಡಿಯ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

    ವಿಭಿನ್ನ ಆಹಾರ ಪದ್ದತಿ, ಭಾಷೆಗಳಿಂದ ಕೂಡಿದ್ದರೂ ಕನ್ನಡ ನಾಡು ಏಕೀಕರಣದ ಮೂಲಕ ಭಾಷಾ ಐಕ್ಯತೆ ಮೈಗೂಡಿಸಿ ಕೊಂಡಿದೆ ಎಂದರು.ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಶೇಖರರೆಡ್ಡಿ,ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಜಿಪಂ ಸಿಇಓ ನಿತೀಶ್. ಕೆ, ಎಸ್ಪಿ ಸಿ.ಕೆ.ಬಾಬಾ, ಪ್ರೊಬೆಷನರಿ ಐಎಎಸ್ ಈಶ್ವರ್ ಕಾಂಡೂ ಸೇರಿದಂತೆ ಅನೇಕರು ಇದ್ದರು.

ಇದೇ ವೇಳೆ ಹಂಪಿಯ ಭುವನೇಶ್ವರಿ ದೇವಸ್ಥಾನದಿಂದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಂದ ಜ್ಯೋತಿ ಬರಮಾಡಿಕೊಳ್ಳಲಾಯಿತು.

     ನಂತರ ಸಾರಿಗೆ,ಕೃಷಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ,ಮಹಾನಗರ ಪಾಲಿಕೆಯಿಂದ ಸಿದ್ದಪಡಿಸಲಾದ ಸ್ತಬ್ಧಚಿತ್ರಗಳನ್ನು ಗಣ್ಯರು ವೀಕ್ಷಿಸಿದರು.ನಂತರ ಶಾಲಾ ಮಕ್ಕಳು ನಂದಿಕೋಲು ಕುಣಿತ, ಡೋಳ್ಳುವಾದನ, ತಮಟೆ ವಾದನ ಮೊದಲಾದ ಜನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಜರುಗಿತು. ಈ ಮೆರವಣಿಗೆಯಲ್ಲಿ ನಾಡು ನುಡಿ ಹಾಗೂ ಅಭಿವೃದ್ದಿ ಕುರಿತಾಗಿ ರಚಿಸಿದ್ದ ವಿವಿಧ ಇಲಾಖೆಗಳ ಸ್ಥಬ್ದ ಚಿತ್ರಗಳು ಸಹ ಪಾಲ್ಗೊಂಡಿದ್ದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link