ಪಾವಗಡ :
ಗ್ರಾಹಕನಿಗೆ ನೀಡಿದ ಪ್ಲಾಸ್ಟೀಕ್ ವಶಕ್ಕೆ ಪಡೆದು ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿ ನೂರು ಕೆಜಿಗೂ ಹೆಚ್ಚು ಪ್ಲಾಸ್ಟೀಕ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಪಟ್ಟಣದ ವೊವೇಶ್ವರಿ ಅಂಗಡಿ ಮಾಲೀಕರು ಗ್ರಾಹಕನಿಗೆ ನೀಡಿದ ಪ್ಲಾಸ್ಟೀಕ್ ವಸ್ತುಗಳನ್ನು ವಶಕ್ಕೆ ಪಡೆದ ಪುರಸಭಾ ಸಿಬ್ಬಂದಿ ಹಾಗೂ ಮುಖ್ಯಾಧಿಕಾರಿ ನವೀನ್‍ಚಂದ್ರರವರು ಅಂಗಡಿಗೆ ಗ್ರಾಹಕನನ್ನು ಕರೆತಂದು ಅಂಗಡಿಯಲ್ಲಿನ ಪ್ಲಾಸ್ಟೀಕ್ ಅನ್ನು ವಶಕ್ಕೆ ಪಡೆದು ಸಮೀಪದ ಅಂಗಡಿಯಾದ ಶಿವಸಾಯಿ ಅಂಗಡಿಯನ್ನು ಶೊಧಿಸಿದಾಗ ಅಲ್ಲಿಯೂ ಪ್ಲಾಸ್ಟಿಕ್ ಸಿಕ್ಕಿರುತ್ತದೆ
ಎರಡು ಅಂಗಡಿಗಳಿಂದ ನೂರು ಕೆಜೆಗೂ ಹೆಚ್ಚು ಪ್ಲಾಸ್ಟೀಕ್ ಸಿಕ್ಕಿದ್ದು ಎಷ್ಠು ಭಾರಿ ಹೇಳಿದರು ಪದೇ ಪದೇ ಪ್ಲಾಸ್ಟೀಕ್ ಮಾರಾಟ ಮಾಡುತ್ತಿರುವ ಕಾರಣ ಈ ಎರಡು ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಮುಖ್ಯಾಧಿಕಾರಿ ನವೀನ್‍ಚಂದ್ರರವರು ತಿಳಿಸಿದ್ದಾರೆ.
ಪಟ್ಟಣದಲ್ಲಿ ಯಾವುದೇ ಅಂಗಡಿ ಮಾಲೀಕರು ಮತ್ತೆ ಪ್ಲಾಸ್ಟೀಕ್ ಮಾರಾಟ ಮಾಡುವುದು ಕಂಡು ಬಂದರೆ ಪ್ರಕರಣ ಒಂದೇ ದಾಖಲಿಸಿಸುವುದಿಲ್ಲ ಅಂಗಡಿಗೆ ನೀಡಿದಾ ಅನುಮತಿ ರದ್ದುಮಾಡಿ ಸೀಜ್ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ