ಕಿರಕುಳ ನೀಡಿದ ಮಗನನ್ನು ಕ್ಷಮಿಸಿದ ತಾಯಿ

ಬೆಂಗಳೂರು

          ಪೊರಕೆಯಲ್ಲಿ ಹೊಡೆದು ಕಿರಕುಳ ನೀಡಿದ ಮಗನನ್ನು ಕ್ಷಮಿಸಿದ ತಾಯಿ ಪೊಲೀಸರ ವಶದಲ್ಲಿದ್ದ ಆತನನ್ನು ಬಂಧ ಮುಕ್ತಗೊಳಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.

         ಎರಡು ದಿನಗಳ ಹಿಂದೆ ಬುದ್ದಿ ಮಾತು ಹೇಳಿದ ತಾಯಿಯನ್ನು ಪೊರಕೆಯಿಂದ ಹೊಡೆದು ಮಗ ಕಿರುಕುಳ ನೀಡುತ್ತಿರುವುದು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೃಶ್ಯ ಮಾದ್ಯಮಗಳಲ್ಲಿ ಪ್ರಸಾರಗೊಂಡಿತ್ತು ಇದನ್ನು ನೋಡಿದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಕೃತ್ಯವು ಜೆಪಿ ನಗರದಲ್ಲಿ ನಡೆದಿರುವುದನ್ನು ಪತ್ತೆಹಚ್ಚಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಮಗನನ್ನು ಪತ್ತೆ ಮಾಡಿ ಠಾಣೆಗೆ ಕರೆತಂದಿದ್ದರು.

        ಮಗನ ವಿಚಾರಣೆ ನಡೆಸಿ ನಂತರ ನಿನ್ನೆ ರಾತ್ರಿ ಠಾಣೆಗೆ ಕರೆಸಿದ ವೇಳೆ ಪೊಲೀಸರ ಮುಂದೆ ಗೋಗರೆದ ತಾಯಿ ನಾನು ನನ್ನ ಮಗನಿಗೆ ಬುದ್ಧಿ ಹೇಳುತ್ತೇನೆ ಇಷ್ಟಕ್ಕೆ ಇದು ಸಾಕು, ದಯಮಾಡಿ ಅವನನ್ನ ಬಿಟ್ಟು ಬಿಡಿ ಮನವಿ ಮಾಡಿಕೊಂಡಿದ್ದಾರೆ.ಅಮ್ಮ ಮನವಿ ಮಾಡಿದ್ದಕ್ಕೆ ಮಗನಿಗೆ ಎಚ್ಚರಿಕೆ ಕೊಟ್ಟು ಪೊಲೀಸರು ಕಳಿಸಿದ್ದಾರೆ ವಿಚಾರಣೆಯಲ್ಲಿ ಮಗ ಅಪ್ರಾಪ್ತ ಎಂದು ಗೊತ್ತಾಗಿದ್ದು ತಾಯಿ ಮನವಿ ಮೇರೆಗೆ ಆತನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿರುವ ಪೊಲೀಸರು ನಾಳೆ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಆತನನ್ನು ಹಾಜರು ಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link