ಮುಸ್ಲಿಮರು ಪಕ್ಷದಿಂದ ದೂರ ಉಳಿಯುತ್ತಿದ್ದಾರೆ : ಕೇರಳ ಬಿಜೆಪಿ ಅ‍ಭ್ಯರ್ಥಿ

ತಿರುವನಂತಪುರಂ:

      ಪಕ್ಷದ ಚುನಾವಣಾ ಕಾರ್ಯತಂತ್ರದಿಂದ ಅಸಮಾಧಾನಗೊಂಡಿರುವ ಕೇರಳದ ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿ ಎಂ ಅಬ್ದುಲ್ ಸಲಾಂ ಅವರು ಚುನಾವಣಾ ಸಮಯದಲ್ಲಿ ವಿವಾದಾತ್ಮಕ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಪ್ರದರ್ಶನ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಷಯಗಳ ಬಗ್ಗೆ ಜನರಿಗೆ ತನ್ನ ನಿಲುವನ್ನು ಸರಿಯಾಗಿ ತಿಳಿಸಲು ಅಸಮರ್ಥವಾಗಿದ್ದು ಪಕ್ಷದಿಂದ ಮುಸ್ಲಿಂರು ದೂರವಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.

    ಈ ಚುನಾವಣೆಯ ಸಮಯದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶಿಸಿರುವುದು ಮುಸ್ಲಿಂರು ಬಿಜೆಪಿಯಿಂದ ದೂರ ಸರಿಯುವಂತೆ ಮಾಡಿದೆ. ಭಾರತದಲ್ಲಿ 20 ಕೋಟಿಗೂ ಹೆಚ್ಚು ಮುಸ್ಲಿಂರಿದ್ದಾರೆ.ಪಾಲಕ್ಕಾಡ್‌ನಲ್ಲಿ ನಡೆದ ರೋಡ್‌ಶೋನಲ್ಲಿ ಪ್ರಧಾನಿಯವರೊಂದಿಗೆ ಹೋಗಲು ಅನುಮತಿ ನಿರಾಕರಣೆ ವಿವಾದವನ್ನು ಉಲ್ಲೇಖಿಸಿದ ಸಲಾಂ, ಈ ಘಟನೆಯು ಪಕ್ಷಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡಿದೆ ಎಂದು ಹೇಳಿದರು.

   ಬಿಜೆಪಿ ರಾಜ್ಯ ನಾಯಕತ್ವ ಇಂತಹ ಘಟನೆಯನ್ನು ತಪ್ಪಿಸಬಹುದಿತ್ತು. ಆದರೂ ನನ್ನ ಪಕ್ಷವನ್ನು ಸಮರ್ಥಿಸಿಕೊಂಡಿದ್ದೇನೆ ಅಧಿಕೃತ ಆಹ್ವಾನದ ಮೇರೆಗೆ ನರೇಂದ್ರ ಮೋದಿ ಅವರನ್ನು ಸೇರಲು ಪಾಲಕ್ಕಾಡ್ ತಲುಪಿದ ನಂತರ ಸಲಾಂ ಹೆಸರನ್ನು ಪಟ್ಟಿಯಿಂದ ಹೊರಗಿಡಲಾಗಿತ್ತು.

   ಈ ಘಟನೆಯ ನಂತರ, ವಿರೋಧ ಪಕ್ಷಗಳು ಸಲಾಂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಕಾರಣ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಪ್ರಚಾರ ಮಾಡುತ್ತಿದೆ.

   ಮುಸ್ಲಿಂ ಪ್ರಾಬಲ್ಯವಿರುವ ಮಲಪ್ಪುರಂ ಕ್ಷೇತ್ರದಲ್ಲಿ ಮತ ಗಳಿಸಲು ಈಗಿನ ಪ್ರಚಾರ ಸಾಕಾಗುವುದಿಲ್ಲ ಎಂದು ಸಲಾಂ ಹೇಳಿದ್ದಾರೆ. ನಾನು ಇದುವರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಅಥವಾ ಮೂರು ಸುತ್ತಿನ ಪ್ರಚಾರವನ್ನು ಪೂರ್ಣಗೊಳಿಸಿದ್ದೇನೆ. ಆದರೆ, ಇತರ ಪಕ್ಷಗಳಿಗೆ ಹೋಲಿಸಿದರೆ ನಮ್ಮ ಪ್ರಚಾರ ದುರ್ಬಲವಾಗಿದೆ. ಬಿಜೆಪಿಯ ಪ್ರಚಾರ ತಂಡವು ಉತ್ತಮ ತರಬೇತಿ ಪಡೆದಿಲ್ಲ ಮತ್ತು ಅಸಮರ್ಥವಾಗಿದೆ. ಅವರ ಬಳಿ ಸರಿಯಾದ ತಂತ್ರಗಾರಿಕೆ ಇಲ್ಲ ಎಂದು ಹೇಳಿದರು.

    ಕಳೆದ 39 ದಿನಗಳಲ್ಲಿ ನನ್ನನ್ನು ಬಿಜೆಪಿ ಬೆಂಬಲಿಗರ ಮನೆಗೆ ಕರೆದೊಯ್ಯಲಾಯಿತು. ಅವರು ಇತರ ಜನರ ಬಳಿಗೆ ಹೋಗಲು ಹೆದರುತ್ತಾರೆ. ಬಿಜೆಪಿಯೇತರ ಮತದಾರರನ್ನು ತಲುಪುವುದು ಅಗತ್ಯವಾಗಿದೆ. ಮಲಪ್ಪುರಂನ ಬಿಜೆಪಿ ಪಾಳಯವು ಬಿಜೆಪಿಯೇತರ ಹಿಂದೂಗಳು ಮತ್ತು ಮುಸ್ಲಿಮರನ್ನು ಸಂಪರ್ಕಿಸುವುದರಿಂದ ದೂರ ಸರಿಯುತ್ತಿದೆ ಎಂದು ಸಲಾಂ ಹೇಳಿದರು.

    ಈದ್ ಸಮಯದಲ್ಲಿ ನಾವು ಮುಸ್ಲಿಮರ ಮನೆಗಳಿಗೆ ಏಕೆ ಭೇಟಿ ನೀಡಬಾರದು ಎಂದು ಒಬ್ಬರು ನನ್ನನ್ನು ಕೇಳಿದರು. ಕ್ರಿಸ್‌ಮಸ್ ಸಂದರ್ಭದಲ್ಲಿ ಕ್ರೈಸ್ತರ ಮನೆಗಳಿಗೆ ಭೇಟಿ ನೀಡಿದ್ದೆವು. ಇವರ ಮನೆಗಳಿಗೆ ನಾನು ಭೇಟಿ ನೀಡಿದಾಗ ನನಗೆ ಬಿಜೆಪಿಯಲ್ಲಿ ಒಬ್ಬರೇ ಮುಸ್ಲಿಂ ಅಭ್ಯರ್ಥಿ ಏಕೆ ಎಂಬ ಪ್ರಶ್ನೆಗಳೇ ಸಾಕಷ್ಟು ಬಾರಿ ಎದುರಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap