ಅಕ್ರಮ ಸಂಬಂಧಕ್ಕಾಗಿ ಮಗುವನ್ನು ಬಲಿಕೊಟ್ಟ ತಾಯಿ …!!

ಬೆಂಗಳೂರು

       ಅನೈತಿಕ ಸಂಬಂಧವನ್ನು ನೋಡಿದ ಸ್ವಂತ ಮಗನನ್ನೇ ಪ್ರಿಯಕರನ ಜೊತೆ ಸೇರಿ ಕೊಲೆಗೈದು ಮೃತ ದೇಹವನ್ನು ತೋಟದಲ್ಲಿ ಗುಂಡಿ ತೋಡಿ ಹೂತು ಹಾಕಿದ್ದ ತಾಯಿ ಮತ್ತಾಕೆಯ ಪ್ರಿಯಕರನನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.

         ಕೊಲೆಯಾದ ಬಾಲಕನನ್ನು ಹಾರೋಹಳ್ಳಿ ಜಾಲಮಂಗಲದ ಪ್ರಜ್ವಲ್(14)ಎಂದು ಗುರುತಿಸಲಾಗಿದೆ, ಕೊಲೆಗೈದು ಮೃತದೇಹವನ್ನು ತೋಟದಲ್ಲಿ ಹೂತುಹಾಕಿ ಪರಾರಿಯಾಗಿದ್ದ ತಾಯಿ ವರಲಕ್ಷ್ಮಿ ಹಾಗೂ ಪ್ರಿಯಕರ ಕುಮಾರ್‍ನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

        ಪತಿ ಮೃತಪಟ್ಟಿರುವ ಆರೋಪಿ ವರಲಕ್ಷ್ಮಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚಿಗೆ ಕುಮಾರ್ ಜೊತೆಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಯಾರಿಗೂ ಗೊತ್ತಾಗದಂತೆ ಇವರಿಬ್ಬರು ಜಾಲಮಂಗಲ ಸಮೀಪದ ತೋಟವೊಂದರಲ್ಲಿ ಕಳೆದ ಮಾರ್ಚ್ 4ರಂದು ಕುಳಿತಿದ್ದರು.

ಅನೈತಿಕ ಸಂಬಂಧ

        ಈ ವೇಳೆ ಅಲ್ಲಿಗೆ ಬಂದ ಪ್ರಜ್ವಲ್ ತಾಯಿಯ ಜೊತೆಗೆ ಕುಮಾರ್ ನೋಡಿ ಓಡ ತೊಡಗಿದಾಗ ಆತನನ್ನು ಹಿಡಿದ ಕುಮಾರ್ ಹಾಗೇ ಬಿಟ್ಟರೆ ನಮ್ಮ ಸಂಬಂಧದ ಮನೆಯವರಿಗೆ ತಿಳಿಯುತ್ತದೆ ಎಂದು ಪ್ರಜ್ವಲ್ ಮೇಲೆ ಗಂಭೀರ ಹಲ್ಲೆ ಮಾಡಿದ್ದು ಅಸ್ವಸ್ಥಗೊಂಡು ಕೆಳಗೆಬಿದ್ದ ಪ್ರಜ್ವಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಇದರಿಂದ ಗಾಬರಿಗೊಂಡ ಆರೋಪಿಗಳು ತಕ್ಷಣವೇ ಪ್ರಜ್ವಲ್ ಮೃತದೇಹವನ್ನು ತೋಟದಲ್ಲಿ ಹೂತು ಅಲ್ಲಿಂದ ಪರಾರಿಯಾಗಿದ್ದರು.

       ಮೊಮ್ಮಗ ಪ್ರಜ್ವಲ್ ಎರಡು ದಿನ ಕಳೆದರೂ ಮನೆಗೆ ಬಾರದಿದ್ದಾಗ ಹುಡುಕಾಟ ನಡೆಸಿದ ಅಜ್ಜಿ ಜಯಮ್ಮ ಆತಂಕಗೊಂಡು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ಆರೋಪಿ ನಾಟಕ

        ಅಕ್ಕನ ಮನೆಯಲ್ಲಿ ಇದ್ದೇನೆ. ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದು ಸೊಸೆ ವರಲಕ್ಷ್ಮಿ ಹೇಳುತ್ತಿದ್ದಳು. ಆದರೆ ಕುಮಾರ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪ್ರಜ್ವಲ್‍ನ ತಮ್ಮ ಮನೆಗೆ ಬಂದು ಹೇಳಿದಾಗ ಸೊಸೆಯ ಕೃತ್ಯ ನನಗೆ ತಿಳಿಯಿತು ಎಂದು ಅಜ್ಜಿ ಜಯಮ್ಮ ದೂರಿದ್ದಾರೆ.

        ಆರೋಪಿಗಳನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಪ್ರಜ್ವಲ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link