ಪಾವಗಡ
ಪುರಸಭೆ ವ್ಯಾಪ್ತಿಯ ಎಂ.ಆರ್ ಲೇಔಟ್‍ನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಚರಂಡಿ ವ್ಯವಸ್ತಿತವಾಗಿ ನಿರ್ಮಾಣವಾಗದ ಕಾರಣ ಕೊಳಚೆ ನೀರು ನಿಂತು ದುರುವಾನೆಯಿಂದ ಅಕ್ಕ ಪಕ್ಕ ಮನೆಯ ಮಾಲೀ ಕರು ನರಕಯಾತನ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಲೇವಟ್‍ನಲ್ಲಿ ಚರಂಡಿ ನಿರ್ಮಾಣ ಮಾಡಲು ಅನುವು ಮಾಡಿಕೊಟ್ಟ, ಪುರಸಭೆ ಮುಖ್ಯಾಧಿಕಾರಿ ಮತ್ತು ಸಂಬಂದ ಪಟ್ಟ ಅಭಿಯಂತರರು ಗುತ್ತಿಗೆದಾರಿಗೆ ಪ್ಲಾನ್ ನೀಡದ ಕಾರಣ ಇಂತಹ ವ್ಯವಸ್ಥೆ ಅಗಿರ ಬಹುದೆಂದು ಇಲ್ಲಿನ ಸಾರ್ವಜನಿಕರು ದೂರಿದ್ದಾರೆ.
ಸರ್ಕಾರ ಲಕ್ಷಾಂತರ ಹಣ ಖರ್ಚು ಮಾಡಿ ಸ್ವಚ್ಚೆತೆ ಕಾಪಾಡಲು ಮೂಲ ಭೂತ ಸೌಕರ್ಯ ಕಲ್ಪಿಸಲು ಮುಂದಾದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ಪ್ರಾರಂಬದಲ್ಲಿ ಯೋಜನೆ ರೂಪಿಸಿಕೊಂಡು ಕಾಮಗಾರಿ ಪ್ರಾರಂಭಿಸಬೇಕು ಇವೆಲ್ಲವನ್ನು ಗಾಳಿಗೆ ತೂರಿ,ಗುತ್ತಿಗೆದಾರರ ಅನುಕೂಲಕ್ಕೋಸ್ಕರ ಈ ಕಾಮಗಾರಿಯನ್ನು ಮಾಡಿದ್ದು,ಇಲ್ಲಿ ವಾಸಿಸುವ ಮನೆಯ ಮಾಲೀಕರಿಗೆ ನರಕಯಾನವಾಗಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡೆಸಿದ್ದಾರೆ.
ಎಂ.ಆರ್.ಲೇವಟ್ 17 ನೇ ವಾರ್ಡ್‍ಗೆ ಸೇರಿದ್ದು,ಇಲ್ಲಿನ ಜನಪ್ರತಿನಿಧಿ ಗಳು ಬೇಟಿ ನೀಡಿ,ದುರುವಾಸನೆ ನರಕ ತಪ್ಪಿಸಲು ಇಲ್ಲಿ ವಾಸಿಸುವ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಪೆನುಗೊಂಡ ರಸ್ತೆ ಪಕ್ಕದ ಚರಂಡಿ ದುರಸ್ಥಿ ಮಾಡಲು ಚರಂಡಿ ಕಿತ್ತು ಸುಮಾರು ದಿನಗಳೇ ಕಳೆದರು ಇದುವರಿಗೂ ಚರಂಡಿ ನಿರ್ಮಾಣ ಮಾಡದೇ,ಕಿತ್ತ ಚರಂಡಿಯ ಮಣ್ಣು ಮತ್ತು ಹಳೇ ಕಾಂಕ್ರೀಟ್ ಎಂಟಗಳನ್ನು ರಸ್ತೆಗೆ ಹಾಕಿದ್ದು,ಈ ರಸ್ತೆಯಲ್ಲಿ ವಾಹನಗಳು ಮತ್ತು ಸಾರ್ವಜನಿಕರು ಹೆಚ್ಚಿನದಾಗಿ ಓಡಾಡುತ್ತಿದ್ದು,ಒಂದು ಸಲ ಟ್ರಾಫೀಕ್ ಜಾಮ್ ಅದರೆ 5 ನಿಮಿಷ ಕಾಲ ರಸ್ತೆ ತಡವಾಗುತ್ತಿದ್ದು,ಇದರ ಪಕ್ಕದಲ್ಲಿ ದೊಡ್ಡ ಚರಂಡಿ ಇದ್ದು,ವಾಹನ ಓಡಿಸುವ ಡೈವರ್‍ಗಳ ಪರಿಸ್ಥಿತಿ ಹೇಳತ್ತೀರದಾಗಿದ್ದು,ಇಂತಹ ಸಮಸ್ಯೆಗಳ ಪಟ್ಟಣದಲ್ಲಿ ಅಳುವಾರು.ಪುರಸಭೆ ಅಧಿಕಾರಿಗಳು ತಕ್ಷಣವೇ ನಾಗರೀಕರ ಸಮಸ್ಯೆಗಳಿಗೆ ಸ್ವಂದಿಸಿ ಅನುವು ಮಾಡಲು ಇವರ ಜವಾಬ್ದಾರಿಯಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.