ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ಈ ಮಾಸ ಮಾತುಕತೆ : ಒಂದು ಮುಕ್ತ ಸಂವಾದ

ಹಿರಿಯೂರು:

      ನಗರದ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ಈ ಮಾಸ ಮಾತುಕತೆ ಒಂದು ಮುಕ್ತ ಸಂವಾದ ಕಾರ್ಯಕ್ರಮ ನಡೆಯಿತು “ವಚನ ಸಾಹಿತ್ಯದಲ್ಲಿ ಸಾಮರಸ್ಯದ ನೆಲೆಗಳು.

       ಎನ್ನುವ ವಿಷಯ ಮಂಡಸಿ ಮಾತನಾಡಿದ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಎಂ. ಮಂಜಣ್ಣ ವಚನ ಚಳುವಳಿ ಒಂದು ಅದ್ಭುತ ಚಳುವಳಿ ಬಸವಾದಿ ಶರಣರು ನಡೆ ನುಡಿಯಲ್ಲಿ ಪರಿಶುದ್ಧತೆ ಹೊಂದಿದ್ದವರು ಸಮರಸ. ಸಮಕಳೆ . ಸಮಸುಖ. ಸಮರತಿ . ಸಮತತ್ವ . ವಚನ ಸಾಹಿತ್ಯದ ಆದ್ಯತೆ ಕಾಯಕನಿಷ್ಟೆ ದಾಸೋಹಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರು ಆಯ್ದಕ್ಕಿ ಲಕ್ಕಮ್ಮ ಸತ್ಯಕ್ಕ ಮಾದಾರ ಚನ್ನಯ್ಯರ ಶುದ್ದ ಭಕ್ತಿ ಅವರ ಕಾಯಕ ನಿಷ್ಟೆ ಅಪ್ರತಿಮವಾದುದು ಚನ್ನಯ್ಯನನ್ನು ಬಸವಣ್ಣ ಎನ್ನ ತಂದೆಯ ಸ್ವರೂಪಿ ಎಂದು ಬಣ್ಣಿಸಿದ್ದಾರೆ . ನುಡಿದಂತೆ ನಡೆದವರೇ ನಿಜಶರಣನು ಎಂದರು.

       ಕಾಯದಿಂದ ಕಾಯಕವಾಗಬೇಕು ಆದರೆ ಇಂದು ಯಂತ್ರದಿಂದ ಕಾಯಕ ವಾಗುತ್ತಿದೆ ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ಪರಿಕಲ್ಪನೆಗು ಇಂದಿನ ಕಾಯಕಕ್ಕು ಬಹಳ ವ್ಯತ್ಯಾಸ ವಿದೆ ಎಂದರು . ಬುದ್ದನ ಮೈತ್ರಿ . ಬಸವಣ್ಣನ ದಯೆ . ಕನಕನ ಕುಲದ ಪ್ರಶ್ನೆ . ಗಾಂಧಿಯ ಮನಪರಿವರ್ತನೆ ಅಂಶಗಳು ಪ್ರಸ್ತುತ ಅವಶ್ಯವಿದೆ ಎಂದರು.

       ಸಂಪತ್ತು ಇಂದಿಗೂ ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುತ್ತಿರುವುದು ವಿಪರ್ಯಾಸ ಜಾತಿವ್ಯವಸ್ಥೆ ಭ್ರಷ್ಟತೆ ಇನ್ನೂ ಜೀವಂತವಾಗಿದ್ದು ಅದು ನಮ್ಮಲ್ಲಿ ಸಾಮರಸ್ಯದ ಕೊರತೆಗೆ ಪ್ರಭಾವಿಸುತ್ತಿದೆ . ಸರ್ವರಿಗೂ ಸಮಪಾಲು ಸಮಬಾಳು ಒದಗಿಸಿಕೊಡುವಂತಾಗಬೇಕು ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರೆತರೆ ಅದು ಸಾರ್ಥಕ ವ್ಯವಸ್ಥೆ . ವಚನ ಸಾಹಿತ್ಯ ಮತ್ತು ಸಂವಿಧಾನ ನಿಜಕ್ಕೂ ಇವುಗಳ ತಳಹದಿಯ ಮೇಲೆ ಬಹುತ್ವ ಭಾರತ ನಿರ್ಮಾಣವಾಗಬೇಕು ಎಂದರು

      ಕಾರ್ಯಕ್ರಮದ ಆಶಯ ಭಾಷಣ ಮಾಡಿದ ಬಿ. ಇಡಿ ಕಾಲೇಜು ಪ್ರಾಚಾರ್ಯ ಎನ್. ಧನಂಜಯ್ ಮಾತನಾಡಿ ಶಿಕ್ಷಣ ಸಂಸ್ಥೆ ಗಳ ಕಾರ್ಯ ಬರೀ ಶಿಕ್ಷಣ ನೀಡುವುದಲ್ಲದೆ ಸಮಾಜಮುಖಿಯಾಗಿ ಒಂದಿಷ್ಟು ಚಿಂತನೆಗಳನ್ನು ನಡೆಸಬೇಕೆಂದರು. ವಚನ ಚಳುವಳಿಯ ಮುಖ್ಯ ಉದ್ದೇಶ ಸಾಹಿತ್ಯ ರಚನೆಯಾಗಿರದೇ ಅದೊಂದು ಸಮಾಜ ಸುದಾರಣೆ. ಆತ್ಮಾವಲೋಕನ . ಆಧ್ಯಾತ್ಮ ಸಾಧನೆ . ಅಕ್ಷರ ಜಾಗೃತಿ. ಮುಂತಾದ ಅನೇಕ ಸಾದನೆಗಳ ಹಂಬಲದಿಂದ ಮೈದಳೆದ ಬಹುದ್ದೇಶ ಚಳುವಳಿ ಭಾರತೀಯ ಸಾಹಿತ್ಯ ಪ್ರಕಾರಗಳಲ್ಲಿ ತನ್ನ ಹುಟ್ಟಿನಿಂದಲೇ ವಿಶೇಷ ಎನಿಸಿಕೊಂಡಿದ್ದು ವಚನ ಸಾಹಿತ್ಯ ಶತಮಾನಗಳಿಂದ ಶಿಕ್ಷಣದಿಂದ ವಂಚಿಸಲ್ಪಟ್ಟ ಶ್ರಮಿಕ ವರ್ಗದಿಂದಲೇ ವಚನಗಳು ರಚನೆಯಾಗಿದ್ದು ಗಮನಿಸಬೇಕಾದ ಅಂಶ ಎಂದರು 12 ನೇ ಶತಮಾನಕ್ಕೂ ಮುಂಚೆ ಕನ್ನಡದಲ್ಲಿ ಜನಸಾಮಾನ್ಯರ ತಿಳುವಳಿಕೆಗೆ ಸರಿ ಹೊಂದುವ ಮಟ್ಟದ ಸರಳ ಸಾಹಿತ್ಯದ ಕೊರತೆ ಎದ್ದು ಕಾಣುತಿತ್ತು ಅದರ ಕೊರತೆ ನಿವಾರಿಸಿದ್ದು ವಚನ ಸಾಹಿತ್ಯವೆಂದರು .

         ಪರಿವರ್ತನಾ ಚಿಂತಕ ಪ್ರೊ. ಸಿ. ಕೆ . ಮಹೇಶ್ ಅಧ್ಯಕ್ಷತೆ ವಹಿಸಿದ್ದರು ಸಂಸ್ಥೆಯ ಸಂಸ್ಥಾಪಕರಾದ ಡಾ. ವಿ. ಬಸವರಾಜ್ . ಪತ್ರಕರ್ತರಾದ ಎಂ. ರವೀಂದ್ರನಾಥ್ ರಾಜ್ಯ ಯುವಪ್ರಶಸ್ತೀ ಪುರಸ್ಕೃತ ಚಮನ್ ಶರೀಫ್ . ಜಾನಪದ ಪರಿಷತ್ ನ ಹರ್ತಿಕೋಟೆ ಮಹಾಸ್ವಾಮಿ. ಭೀಮಪ್ಪ. ಉಪಸ್ಥಿತರಿದ್ದರು ಉಪನ್ಯಾಸಕ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು ಪ್ರಥಮ ಬಿ.ಇಡಿ ವಿಧ್ಯಾರ್ಥಿ ಜಗನ್ನಾಥ್ ಸ್ವಾಗತಿಸಿದರು ಶೃತಿ ಪ್ರಾರ್ಥಿಸಿದರು ತಿಮ್ಮನಹಳ್ಳಿ ಲಿಂಗರಾಜು ಮತ್ತು ತಂಡ ವಚನ ಗಾಯನ ನಡೆಸಿಕೊಟ್ಟರು

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap