ಶಿರಾ:
ನಗರದ ಶ್ರೀರಾಮ ದೇವಸ್ಥಾನದ ಮುಂಭಾಗದ ರಸ್ತೆಯನ್ನು ನೂತನವಾಗಿ ಡಾಂಬರ್ ರಸ್ತೆ ನಿರ್ಮಿಸುವ ನೆಪದಲ್ಲಿ ಇದ್ದಂತಹ ಹಳೆಯ ರಸ್ತೆಯನ್ನು ಕಿತ್ತು ಹಾಕಿ ಸದರಿ ರಸ್ತೆಗೆ ಜಲ್ಲಿ ತುಂಬಿ 6 ತಿಂಗಳಾದರೂ ಡಾಬಂರ್ ರಸ್ತೆ ಮಾಡದೆ ನಗರಸಭೆಯು ನಿರ್ಲಕ್ಷ್ಯ ವಹಿಸಿದೆ ಎಂದು ಜ್ಯೋತಿ ನಗರ ಬಡಾವಣೆಯ ಸಾರ್ವಜನಿಕರು ದೂರಿದ್ದಾರೆ.
ನಗರದ ಜ್ಯೋತಿ ನಗರ ಬಡಾವಣೆಯಲ್ಲಿನ ಶ್ರೀರಾಮ ದೇವಸ್ಥಾನದ ಮುಂಭಾಗದ 3ನೇ ವಾರ್ಡಿನ ರಸ್ತೆ ತುಂಬಾ ಚೆನ್ನಾಗಿತ್ತಾದರೂ ನಗರೋತ್ಥಾನ ಯೋಜನೆಯ ನೆಪದಲ್ಲಿ ರಸ್ತೆಯನ್ನು ಕಿತ್ತು ಹಾಕಿದ ನಗರಸಭೆಯು ಡಾಂಬರ್ ರಸ್ತೆ ಮಾಡುವುದಾಗಿ ಹೇಳಿ ರಸ್ತೆಗೆ ಜಲ್ಲಿ ಕಲ್ಲುಗಳನ್ನು ತುಂಬಿ 6 ತಿಂಗಳು ಕಳೆದರೂ ಡಾಂಬರ್ ರಸ್ತೆ ನಿರ್ಮಿಸದೆ ವಾಹನ ಸವಾರರಿಗೂ, ಸಾರ್ವಜನಿಕರಿಗೂ ತೊಂದರೆ ನೀಡಿದ್ದು ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಸರಿ ಕಾಮಗಾರಿಗೆ ಸಂಬಂಧಿಸಿದಂತೆ ಪೂರ್ಣ ಬಿಲ್ ಕೂಡಾ ಪಾವತಿ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳಿದ್ದು ನಗರಸಭೆಯ ವೈಫಲ್ಯವನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಇದೇ ರಸ್ತೆಯ ರಂಗನಾಥ ನಗರಕ್ಕೆ ಹೊಂದಿಕೊಂಡಂತೆ ಇದ್ದ ಚರಂಡಿಯನ್ನು ಕಿತ್ತು ಹಾಕಿ 6 ತಿಂಗಳಾದರೂ ಚರಂಡಿ ದುರಸ್ಥಿ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
