ಹೂವಿನಹಡಗಲಿ :
ಶವ ಸಾಗಿಸುವ ಮುಕ್ತಿರಥ ವಾಹನವನ್ನು ಇಂದು ಕೌಶಲ್ಯಾಭಿವೃದ್ದಿ ಹಾಗೂ ಮುಜರಾಯಿ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕರವರು ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆಯ 14ನೇ ಹಣಕಾಸಿನ ಯೋಜನೆ ಅಡಿಯಲ್ಲಿ 11.85 ಲಕ್ಷ ರೂಗಳಿಗೆ ವಾಹನವನ್ನು ಖರೀದಿಸಲಾಗಿದ್ದು, ಉಚಿತವಾಗಿ ಸೇವೆಗೆ ಸಮರ್ಪಣೆಯಾಗಲಿದೆ ಎಂದು ಹೇಳಿದರು.
ಇತಿಹಾಸದಲ್ಲಿಯೇ ಪ್ರಥಮ ಎನ್ನುವಂತೆ ಹೂವಿನಹಡಗಲಿ ಪುರಸಭೆವತಿಯಿಂದ ಇಂತಹ ಒಂದು ಸೌಲಭ್ಯವನ್ನು ಒದಗಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ವಿಶೇಷವಾಗಿ ಹೂವಿನಹಡಗಲಿ ರುದ್ರಭೂಮಿಯ ಅಭಿವೃದ್ದಿಗಾಗಿ 1 ಕೋಟಿ ರೂ ಅನುದಾನವನ್ನು ನೀಡಿದ್ದು, ರಸ್ತೆ ನಿರ್ಮಾಣ ಹಾಗೂ ಬೋರ್‍ವೆಲ್ ಕೊರೆಸುವುದರ ಮೂಲಕ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು. ರಾತ್ರಿ ಸಂದರ್ಭದಲ್ಲಿಯೂ ಕೂಡಾ ಶವಸಂಸ್ಕಾರವನ್ನು ನೆರವೇರಿಸಲು ಅನುಕೂಲವಾಗುವ ರೀತಿಯಲ್ಲಿ ಹೈಮಾಕ್ಸ್ ದೀಪಗಳನ್ನು ಅಳವಡಿಸಲಾಗುವುದು ಎಂದರು.
ಸಂದರ್ಭದಲ್ಲಿ ತಹಶೀಲ್ದಾರ ರಾಘವೇಂದ್ರರಾವ್, ಪುರಸಭೆ ಮುಖ್ಯಾಧಿಕಾರಿ ವೀರಣ್ಣ, ಮುಖಂಡರಾದ ಟಿ.ಮಹಾಂತೇಶ, ಬ್ಯಾಲಹುಣ್ಸಿ ಬಸವನಗೌಡ, ಗಡಿಗಿ ಕೃಷ್ಣಾ ಪುರಸಭೆ ಸದಸ್ಯರಾದ ಸಜ್ರ್ಜಪ್ಪನವರ ಶಫಿ, ಸೊಪ್ಪಿನ ಮಂಜುನಾಥ, ಐಗೋಳ್ ಸುರೇಶ, ಚಂದ್ರನಾಯ್ಕ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ, ಮೈಲಾರಪ್ಪ, ಆರ್.ಐ. ನಾಗರಾಜ, ಹಾಗೂ ನೀಲಕಂಠ, ಮಲ್ಲಯ್ಯ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








