ಹಾವೇರಿ :
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಡಿ.ಆರ್.ಪಾಟೀಲ ಪರವಾಗಿ ಪ್ರಚಾರಕ್ಕಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೋ ಎಸ್.ಜಿ ಸಿದ್ದರಾಮಯ್ಯ ಹಾಗೂ ಚಲನಚಿತ್ರ ನಟರಾದ ಮುಖ್ಯಮಂತ್ರಿ ಚಂದ್ರುರವರು ಇಂದು (ದಿ,17) ಬೆಳ್ಳಿಗ್ಗೆ 10:30 ಕ್ಕೆ ಆಗಮಿಸಲಿದ್ದಾರೆ. ಇವರು ಹಾವೇರಿ ನಗರದ ಜಿ.ಪಿ ಸರ್ಕಲಿನಿಂದ ಪಾದಯಾತ್ರೆ ಮೂಲಕ ಮತಯಾಚನೆ ಮಾಡಲಿದ್ದಾರೆ. ಪಕ್ಷದ ಮುಖಂಡರು,ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಹರ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ ಪ್ರಕಟಣೆ ಕೋರಿದ್ದಾರೆ.