ಬ್ಯಾಡಗಿ:
ಮಾನ್ಯ ಉಚ್ಚ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರುವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆಗೆ ವಿ.ಎಂ.ಪೂಜಾರ ಅವರನ್ನು ಮುಖ್ಯಾಧಿಕಾರಿಯಾಗಿ ಮುಂದುವರೆಯುವಂತೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಆದೇಶಿಸಿದ್ಧಾರೆ.
ರಾಜ್ಯ ಸರ್ಕಾರ ಕಳೆದ ಸೆ.12 ರಂದು ಆದೇಶವೊಂದನ್ನು ಹೊರಡಿಸಿ ವಿ.ಎಂ.ಪೂಜಾರ ಅವರನ್ನು ವರ್ಗಾವಣೆ ಮೇರೆಗೆ ಸ್ಥಳೀಯ ಪುರಸಭೆಗೆ ಮುಖ್ಯಾಧಿಕಾರಿಯನ್ನಾಗಿ ನಿಯೋಜನೆ ಮಾಡಿತ್ತು, ಆದರೆ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಿ.ಎ.ನಾಗಲಾಪೂರ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು, ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸೆ.18 ರಂದು ಪೂಜಾರ ಅವರ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ (ಸ್ಟೇ) ನೀಡಿತ್ತು. ಹೀಗಾಗಿ ಕಳೆದ ಸೆ.25 ರಂದು ಮತ್ತೆ ಮುಖ್ಯಾಧಿಕಾರಿಯಾಗಿ ಬಿ.ಎ.ನಾಗಲಾಪೂರ ಅಧಿಕಾರ ವಹಿಸಿಕೊಂಡಿದ್ದರು.
ತಡೆಯಾಜ್ಞೆ ತೆರವು:ಕಳೆದ ಸೆ.25 ರಂದು ಮಾನ್ಯ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಬಿ.ಎ.ನಾಗಲಾಪೂರ ಅವರನ್ನು ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಿಂದ ತೆರವುಗೊಳಿಸಿ, ಮೊದಲಿದ್ದ ವಿ.ಎಂ.ಪೂಜಾರ ಅವರನ್ನು ಮುಖ್ಯಾಧಿಕಾರಿಯನ್ನಾಗಿ ನಿಯೋಜನೆ ಮಾಡಿ ಆದೇಶಿಸಿದ್ದಾರೆ. ಮತ್ತು ಮೊದಲಿದ್ದ ಬಿ.ಎ.ನಾಗಲಾಪೂರ ಅವರು ವಾರದೊಳಗಾಗಿ ಇಲಾಖೆಯ ಮುಖ್ಯಸ್ಥರಿಗೆ ವರದಿ ಮಾಡಿಕೊಳ್ಳಬೇಕು ಮತ್ತು ಒಂದೇ ವಾರದಲ್ಲಿ ನಾಗಲಾಪೂರ ಅವರಿಗೆ ಬೇರೊಂದು (ಪ್ಲೇಸ್‍ಮೆಂಟ್) ಸ್ಥಳಕ್ಕೆ ಮರು ವರ್ಗಾವಣೆ ಆದೇಶ ನೀಡುವಂತೆಯೂ ತಡೆಯಾಜ್ಞೆ ತೆರವು ಆದೇಶದಲ್ಲಿ ಸೂಚಿಸಿದೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ