ಬೀದಿಬದಿಯ ಮಳಿಗೆಗಳ ತೆರವುಗೊಳಿಸಿದ ಪುರಸಭೆ..!!

ಹರಪನಹಳ್ಳಿ

   ಪಟ್ಟಣದ ಸಿನಿಮಾ ಮಂದಿರ ಹಾಗೂ ಬಸ್ ನಿಲ್ದಾಣದ ಬಳಿಯಿದ್ದ ಬೀದಿ ಬದಿಯ ಅಂಗಡಿಗಳನ್ನು ಪುರಸಭೆ ಹಾಗೂ ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆಯಿಂದ ತೆರವುಗೊಳಿಸಿದರು.ವಾಹನ ಸಂಚಾರ ಪಾದಚಾರಿಗಳಿಗೆ ಸಾಕಷ್ಟು ತೆಲೆನೋಗಾಗಿ ಅತಿಕ್ರಮಿಸಿದ್ದ ಅಂಗಡಿಗಳು ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದರು.

    ಬಸ್ ನಿಲ್ದಾಣದಲ್ಲಿ ಬಸ್‍ಗಳು ಸಂಚರಿಸದಷ್ಟು ಅತಿಕ್ರಮಣವಾಗಿದ್ದಸ ಅಂಗಡಿಗಳ ತೆರವಿಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು, ವ್ಯಾಪಾರಿಗಳಿಗೆ ಪುರಸಭೆಯಿಂದ ಸಾಕಷ್ಟು ಬಾರಿ ನೋಟೀಸ್ ನೀಡಿದ್ದರೂ ಸಹ ತೆರವುಗೊಳಿಸಿರಲಿಲ್ಲ. ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಉಪ ವಿಭಾಗಾಧಿಕಾರಿ ಪ್ರಸನ್ನಕುಮಾರ್ ವಿ.ಕೆ. ಯವರು ಪುರಸಭೆಯ ಆಡಳಿತಾಧಿಕಾರಿಯಾಗಿರುವುದರಿಂದ ಕೂಡಲೇ ಕಾರ್ಯವೈಖರಿ ಚುರುಕುಗೊಳಿಸಿ ತೆರವಿಗೆ ಮುಂದಾಗಿ ಯಶಸ್ವಿಯಾಗಿದ್ದಾರೆ.

    ಉತ್ತಮ ಕೆಲಸ ಮಾಡಿದ ಉಪ ವಿಭಾಗಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸಿಸಿದ್ದಾರೆ.ತರಕಾರಿ ವ್ಯಾಪಾರಿಗಳಿಗೆ ಪಕ್ಕದಲ್ಲೆ ಇರುವ ಸಂತೆ ಮೈದಾನದಲ್ಲಿ ವ್ಯಪಾರ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಾಹನ ಸಂಚಾರ ಪಾದಚಾರಿಗಳಿಗೆ ಅನುಕೂಲವಾಗು ವಂತೆ ತೆರವಿಗೆ ಮುಂದಾಗಿರುವುದಾಗಿ ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ನಾಯ್ಕ್ ತಿಳಿಸಿದರು.ತೆರವು ಕಾರ್ಯಾಚರಣೆಯಲ್ಲಿ ಪಿಎಸ್‍ಐ ಶ್ರೀಧರ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಎಎಸ್‍ಐ ರುದ್ರಪ್ಪ, ಪೊಲೀಸ್ ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap