ಹಾನಗಲ್ಲ :
ಕಟ್ಟಿಗೆ ಒಡೆಯುವ ಕೊಡಲಿಯಿಂದ ಹೊಡೆದು ತಂದೆ ಮತ್ತು ಮಗನನ್ನು ಭೀಕರವಾಗಿ ಹತ್ಯೆಮಾಡಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ನಂತರ ಶರಣಾದ ಘಟನೆ ಹಾನಗಲ್ಲ ತಾಲೂಕ ಗುಡ್ಡದಮುತ್ತಳ್ಳಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಮಹಾಂತೇಶ ಕುರಬರ (40), ಮಗ ಚಂದ್ರು ಕುರಬ(16) ಹತ್ಯೆಗೀಡಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾಹಾಂತೇಶ ಪತ್ನಿ ಮಂಜವ್ವ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಸವರಾಜ ಕುರಬರ ಹತ್ಯೆಗೈದ ಆರೋಪಿಯಾಗಿದ್ದು, ರವಿವಾರ ತಲೆಮರಿಸಿಕೊಂಡಿದ್ದವನು, ಸೋಮವಾರ ಖುದ್ದಾಗಿ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಆರೋಪಿ ಬಸವರಾಜ, ಮಹಾಂತೇಶ ಕುರಬರ ಅವರ ಅಣ್ಣನ ಮಗನಾಗಿದ್ದಾನೆ. ಮೇಲ್ನೊಟಕ್ಕೆ ಈ ಘಟನೆಗೆ ಹಳೇಯ ವೈಷಮ್ಯ ಕಾರಣ ಎಂದು ತಿಳಿದು ಬಂದಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ