ಸಿಗರೇಟ್ ವಿಷಯಕ್ಕೆ ಓರ್ವನ ಹತ್ಯೆ!!!

ಬೆಂಗಳೂರು

         ಸಿಗರೇಟ್ ಖರೀಸಿದಿ ಹಣ ನೀಡದ ವಿಚಾರವಾಗಿ ಹಾಡಹಗಲೇ ಯುವಕರ ನಡುವೆ ಮಾರಾಮಾರಿ ನಡೆದಿದ್ದು ಬ್ಯಾಟ್ ಹಾಗೂ ಚಾಕು ಹಿಡಿದು ಓರ್ವನನ್ನು ಕೊಲೆ, ಮತ್ತೊಬ್ಬನ ಮೇಲೆ ಮಾರಣಾಂತಿವಾಗಿ ಹಲ್ಲೆ ಮಾಡಿರುವ ಭಯಾನಕ ಕೃತ್ಯ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆದಲ್ಲಿ ನಡೆದಿದೆ.

        ವಿಜಯನಗರದ ಮಹದೇವಯ್ಯ ಮೃತ ದುರ್ದೈವಿ. ರಾಜ್‍ದೀಪ್ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿನಯ್ ಕುಮಾರ್ ಮತ್ತು ಆತನ ಇಬ್ಬರು ಸಹಚರರು ಕೊಲೆಗೈದ ಆರೋಪಿಗಳಾಗಿದ್ದು ಇವರು ನಡೆಸಿರುವ ಕೃತ್ಯ ಮೊಬೈಲ್ ಕ್ಯಾಮಾರದಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ.

         ಈ ಘಟನೆಯು ಅಕ್ಟೋಬರ್ 4ರಂದು ನಡೆದಿದ್ದು, ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳೀಯರು ಆರೋಪಿ ವಿನಯ್ ಕುಮಾರ್ ನನ್ನು ಹಿಡಿದು, ಪೆÇಲೀಸರಿಗೆ ಒಪ್ಪಿಸಿದ್ದರು. ಕೊಲೆ ದೃಶ್ಯದ ಆಧಾರದ ಮೇಲೆ ಉಳಿದ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ

         ಕ್ರಿಕೆಟ್ ಆಡುತ್ತಿದ್ದ ಮಹದೇವಯ್ಯ ಸಿಗರೇಟ್ ತರುವಂತೆ ವಿನಯ್‍ಗೆ ಹೇಳಿದ್ದ. ಆದರೆ ಇದಕ್ಕೆ ವಿನಯ್ ಕುಮಾರ್ ನಿರಾಕರಿಸಿದ್ದ ಕೋಪಗೊಂಡ ಮಹದೇವಯ್ಯ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ನೋಡಿದ ವಿನಯ್ ಕುಮಾರ್ ಇಬ್ಬರು ಸ್ನೇಹಿತ ಮಹಾದೇವಯ್ಯ ಹಾಗೂ ಅವನ ಗೆಳೆಯ ರಾಜ್‍ದೀಪ್ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದಾರೆ.

       ಘಟನಾ ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಯುವಕರ ಹೊಡೆದಾಟ ನೋಡಿ ಅಲ್ಲಿಂದ ಅನೇಕರು ಕಾಲ್ಕಿತ್ತಿದ್ದರು.ಕೋಪಗೊಂಡಿದ್ದ ವಿನಯ್ ಕುಮಾರ್ ಮಹದೇವಯ್ಯನಿಗೆ ಚಾಕುನಿಂದ ಇರಿದಿದ್ದಾನೆ. ಇದೇ ವೇಳೆ ಮೂವರು ಆರೋಪಿಗಳು ಸೇರಿ, ಮಹದೇವಯ್ಯ ಹಾಗೂ ರಾಜ್‍ದೀಪ್ ತಲೆಗೆ, ಕಾಲುಗಳಿಗೆ ಬ್ಯಾಟ್‍ನಿಂದ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ಮಹದೇವಯ್ಯ ಅಸ್ವಸ್ಥಗೊಂಡು ಸ್ಥಳದಲ್ಲಿಯೇ ಬಿದ್ದಿದ್ದ.

ಜೀವ ಉಳಿಸಿಕೊಂಡ

      ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ರಾಜ್‍ದೀಪ್‍ಗೆ ಮೂವರು ಸೇರಿ ಥಳಿಸಿದ್ದಾರೆ. ಬೆನ್ನು, ಕಾಲಿಗೆ ಬಲವಾಗಿ ಹೊಡೆದಿದ್ದಾರೆ. ನೋವಿನಲ್ಲಿಯೇ ಅವರೊಂದಿಗೆ ಹೋರಾಡಿದ ರಾಜ್‍ದೀಪ್ ಅಲ್ಲಿಂದ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾನೆ.

      ಸ್ಥಳೀಯರು ಆರೋಪಿ ವಿನಯ್ ಕುಮಾರ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇತ್ತ ಚಾಕು ಇರಿತ ಹಾಗೂ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಮಹಾದೇವಯ್ಯನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹದೇವಯ್ಯ ಮೃತಪಟ್ಟಿದ್ದಾನೆ. ತನಿಖೆ ಚುರುಕುಗೊಳಿಸಿದ್ದ ಪೊಲೀಸರಿಗೆ ವಿಡಿಯೋ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap