ಹಾಡಹಗಲೇ ಬಾರ್‍ನಲ್ಲಿ ಪಿಟ್ಟನ ಕೊಲೆ….!!!!

ಬೆಂಗಳೂರು

           ಹಾಡಹಗಲೇ ಬಾರ್‍ನಲ್ಲಿ ರೌಡಿ ನಾಗರಾಜ್ ಅಲಿಯಾಸ್ ಪಿಟ್ಟನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳಲ್ಲಿ ಮೂವರನ್ನು ವಶಕ್ಕೆ ಪಡೆದು ಉಳಿದವರ ಬಂಧನಕ್ಕೆ ಬನ್ನೇರುಘಟ್ಟ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಪಾರ್ವತಿಪುರದ ರೌಡಿ ನಾಗರಾಜು ಅಲಿಯಾಸ್ ಪಿಟ್ಟ ನಾಗರಾಜು(28) ಮಂಗಳವಾರ ಮಧ್ಯಾಹ್ನ ಸಹಚರರೊಂದಿಗೆ ಬನ್ನೇರುಘಟ್ಟ ಬಳಿಯ ಎಂ.ಕೆ.ಬಾರ್‍ಗೆ ಪಾರ್ಟಿ ಮಾಡಲು ಬಂದಿದ್ದ ಕಂಠಪೂರ್ತಿ ಕುಡಿದ ಮತ್ತಿನಲ್ಲಿ ನಾಗರಾಜು ತನ್ನ ಸಹಚರರ ಜೊತೆಗೆ ಜಗಳಕ್ಕೆ ಇಳಿದು ಹಲ್ಲೆ ಮಾಡಲು ಮುಂದಾಗಿದ್ದಾನೆ.

           ಆಕ್ರೋಶಗೊಂಡ ಸಹಚರರು ನಾಗರಾಜು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ , ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಸುದ್ದಿ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಾಗ ಐದಾರು ಮಂದಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವ ಸುಳಿವು ಪತ್ತೆಯಾಗಿದೆ ನಾಳೆಯೊಳಗಾಗಿ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link