ಬೆಂಗಳೂರು
ಮಾರಿಯಮ್ಮ ಹಬ್ಬದ ಸಂಭ್ರಮದಲ್ಲಿ ಕುಡಿದ ಅಮಲಿನಲ್ಲಿ ಉಂಟಾದ ಮಾರಾಮಾರಿಯಲ್ಲಿ ಯುವಕನೊಬ್ಬ ಕೊಲೆಯಾಗಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ತಿಲಕ್‍ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಹೆಚ್‍ಬಿ ಕಾಲೋನಿಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ತಿಲಕ್‍ನಗರದ ಬಿಡಿಎ ಪ್ರದೇಶದ ರಾಜಶೇಖರ್ (22)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ. ಗಾಯಗೊಂಡಿರುವ ಮಾರ್ಕೋನಿ ಅಲಿಯಾಸ್ ಕಾರ್ತಿಕ್ ಹಾಗೂ ಮಣಿವೇಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಹೆಚ್‍ಬಿ ಕಾಲೋನಿಯಲ್ಲಿ ಮಾರಿಯಮ್ಮ ಊರ ಹಬ್ಬ ನಡೆಯುತ್ತಿದ್ದು, ಮಾರ್ಕೋನಿ, ರಾಜಶೇಖರ್ ಹಾಗೂ ಮಣಿವೇಲು ರಾತ್ರಿ 12ರ ವೇಳೆ ಕಂಠಪೂರ್ತಿ ಕುಡಿದು ವಿನೋದ್‍ಕರ್ ಎಂಬುವರ ಮನೆ ಬಳಿ ಹೋಗಿದ್ದಾರೆ.
ಮನೆಯಲ್ಲಿದ್ದ ವಿನೋದ್‍ಕರ್‍ನನ್ನು ರಾಜಶೇಖರ್ ಮನೆಯಂದ ಹೊರಗೆ ಕರೆತಂದು ನೀನೊಬ್ಬನೆ ಹಬ್ಬ ಮಾಡೋದೇನೋ ಎನ್ನುತ್ತ ಜಗಳ ತೆಗೆದಿದ್ದಾನೆ. ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಮನೆಗೆ ಹೋದ ವಿನೋದ್‍ಕರ್ ಚಾಕು ತೆಗೆದುಕೊಂಡು ಬಂದಿದ್ದಾನೆ.
ಹೊರಗಿದ್ದ ಮಾರ್ಕೋನಿ, ರಾಜಶೇಖರ್, ಮಣಿವೇಲು ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿ ರಾಜಶೇಖರ್ ಹೊಟ್ಟೆಗೆ ಇರಿದಿದ್ದಾನೆ. ಸುದ್ದಿ ತಿಳಿದು ಪೆÇಲೀಸರ ಹೊಯ್ಸಳ ಬರುತ್ತಿದ್ದ ಶಬ್ಧ ಕೇಳಿ ಎಲ್ಲರೂ ಪರಾರಿಯಾಗಿದ್ದಾರೆ.
ಚಾಕು ಇರಿತದ ಗಾಯದಿಂದ ಓಡಿ ಹೋದ ರಾಜಶೇಖರ್, ಸ್ವಲ್ಪ ದೂರ ಹೋದ ನಂತರ ಕುಸಿದು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಮಾರ್ಕೋನಿ ಹಾಗೂ ಮಣಿವೇಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೃತ್ಯವೆಸಗಿದ ವಿನೋದ್‍ಕರ್ ಹಾಗೂ ಆತನ ಬೆಂಬಲಕ್ಕೆ ನಿಂತ ಸಹೋದರರು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ತಿಲಕ್‍ನಗರ ಪೆÇಲೀಸರು ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಕೊಲೆಯಾದ ರಾಜಶೇಖರ್, ಪೇಯಿಂಟಿಂಗ್ ಕೆಲಸ ಮಾಡುತ್ತಿದ್ದು, ಹಬ್ಬದ ಹಿನ್ನೆಲೆಯಲ್ಲಿ ಕಂಠಪೂರ್ತಿ ಕುಡಿದಿದ್ದ ಎಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








