ಚಾಕುವಿನಿಂದ ಇರಿದು ಬರ್ಬರ ಕೊಲೆ…!!!

ಬೆಂಗಳೂರು

      ಸ್ನೇಹಿತನ ಮನೆಯಲ್ಲಿ ಪಾರ್ಟಿ ಮುಗಿಸಿ ಮನೆಗೆ ಬೈಕ್‍ನಲ್ಲಿ ಬರುತ್ತಿದ್ದ ವೆಲ್ಡಿಂಗ್ ಕೆಲಸಗಾರನೊಬ್ಬನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ ನಾಲ್ವರು ದುಷ್ಕರ್ಮಿಗಳಲ್ಲಿ ಇಬ್ಬರನ್ನು ಮೈಕೋಲೇಔಟ್ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.

       ಪುಟ್ಟೇನಹಳ್ಳಿಯ ಲಕ್ಷ್ಮೀ ಬಡಾವಣೆಯ ಯೂಸೂಫ್(25) ಶುಕ್ರವಾರ ಮಧ್ಯರಾತ್ರಿ 1ರ ವೇಳೆ ಸ್ನೇಹಿತನ ಮನೆಗೆ ಪಾರ್ಟಿಗೆ ಹೋಗಿ ವಾಪಸಾಗುವಾಗ ಮಾರ್ಗ ಮಧ್ಯೆ ಮೈಕೋಲೇಔಟ್‍ನ ಬಿಳೇಕಹಳ್ಳಿ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು

       ಕೃತ್ಯದಲ್ಲಿ ನಾಲ್ವರು ದುಷ್ಕರ್ಮಿಗಳು ಭಾಗಿಯಾಗಿರುವುದು ಪತ್ತೆಯಾಗಿದ್ದು ಅವರ ಸುಳಿವು ಆಧರಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಇನ್ನಿಬ್ಬರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಕೊಲೆಯಾದ ಯೂಸೂಫ್ ಹಾಗೂ ಕೃತ್ಯವೆಸಗಿದ ನಾಲ್ವರಲ್ಲಿ ಇಬ್ಬರು ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದು ತ್ರಿಕೋನ ಪ್ರೇಮ ಕಥೆಯೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕೆವ್ಯಕ್ತವಾಗಿದೆ.

        ಶಿವಮೊಗ್ಗದಲ್ಲಿ ಮನೆಕಳ್ಳತನ ಮಾಡಿದ್ದ ಯುಸೂಫ್ ಒಂದು ಬಾರಿ ಜೈಲಿಗೂ ಹೋಗಿದ್ದ ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿಕೊಂಡು ಬಂದಿದ್ದ ಕಾರಣ ತಂದೆ-ತಾಯಿ ಬೆಂಗಳೂರಿಗೆ ಕರೆ ತಂದು ಕೆಲಸಕ್ಕೆ ಸೇರಿಸಿದ್ದರು.ಆದರೂ ಆತನ ವರ್ತನೆಯಲ್ಲಿ ಸರಿ ಹೋಗಿರಲಿಲ್ಲ ಕೆಲಸ ಮಾಡುವ ಅಂಗಡಿ ಬಳಿ ಜಗಳ ನಡೆದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

      ಇದಲ್ಲದೇ ಯುಸೂಫ್ ಇತ್ತೀಚೆಗೆ ರಿಯಲ್ ಎಸ್ಟೇಟ್‍ಗೆ ಕೈ ಹಾಕಿ ಹಲವರ ವೈಷಮ್ಯ ಕಟ್ಟಿಕೊಂಡಿರುವುದು ಕಂಡುಬಂದಿದೆ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link