ಬ್ಯಾಡಗಿ:
ಉಗ್ರರ ಸದೆಬಡಿಯಲು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ನಿಲುವಿಗೆ ವಿಶ್ವದ ಯಾವುದೇ ಮುಸ್ಲಿಂ ರಾಷ್ಟ್ರಗಳು ಖಂಡಿಸಿಲ್ಲ ಮತ್ತು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ದಾಳಿ ಮಾಡಿದ ಮೇಲೂ ಸಹ ಪಾಕಿಸ್ತಾನದ ಪರವಾಗಿಯೂ ನಿಂತಿಲ್ಲ ಇದು ಮೋದಿಯವರ ತಾಕತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಮೋಟೆಬೆನ್ನೂರ ಗ್ರಾಮದ ಕೋಟೆಗುಡ್ಡದ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2014 ಲೋಕಸಭೆ ಚುನಾವಣೆಗೂ ಮುನ್ನ ಒಂದು ವೇಳೆ ನರೇಂದ್ರಮೋದಿ ಪ್ರಧಾನಿಯಾದಲ್ಲಿ ದೇಶದಲ್ಲಿ ಹಿಂದೂ-ಮುಸ್ಲಿಂ ರಕ್ತಕ್ರಾಂತಿಯಾಗಲಿದೆ ಕೆಲವರು ನಂಬಿದ್ದರು, ಆದರೆ ಮೋದಿಯವರ ‘ಸಬ್‍ಕಾ ಸಾಥ್ ಸಬ್ ವಿಕಾಸ್’ ತತ್ವದಡಿ ಅಭಿವೃದ್ಧಿ ಹಾಗೂ ಕಾರ್ಯಕ್ಷಮತೆಗೆ ವಿಶ್ವದ ಎಲ್ಲಾ ಮುಸ್ಲಿಂ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ ಎಂದರು.
ಕಾಂಗ್ರೆಸ್‍ನಿಂದ ಕೀಳುಮಟ್ಟದ ರಾಜಕಾರಣ: ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಬಾಲಾಕೋಟ್‍ನಲ್ಲಿ 300ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡೆದಿದ್ದಕ್ಕೆ ಸಾಕ್ಷಿ ಕೇಳುತ್ತಿವೆ, ಕಾಂಗ್ರೆಸ್‍ನಿಂದ ಇಂತಹ ಕೀಳುಮಟ್ಟದ ರಾಜಕಾರಣ ನಿರೀಕ್ಷಿಸಿರಲಿಲ್ಲ, ಬರುವ 2019 ಲೋಕಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ದೊರೆತಿದ್ದು ಸೋಲಿನ ಭಯದಿಂದ ಪಕ್ಷದ ಮುಖಂಡರು ಹತಾಶೆಯ ಮಾತುಗಳನ್ನಾಡುತ್ತಿದ್ದಾರೆ, ಅಧಿಕಾರ ಹಿಡಿಯುವುದಕ್ಕಾಗಿ ಮಹಾಘಟ ಬಂಧನ ಹೆಸರಲ್ಲಿ ಒಂದಾಗುತ್ತಿರುವ ವಿಪಕ್ಷಗಳಿಗೆ ಸೋಲಿನ ರುಚಿ ತೋರಿಸದೇ ಬಿಡುವುದಿಲ್ಲ ಎಂದರು.
ರೇವಣ್ಣಂದು ಪಶುವಿನ ಭಾಷೆ:ಭಾರತದಲ್ಲಿ ಮಹಿಳೆಯನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ ಆದರೆ, ಎಚ್.ಡಿ.ರೇವಣ್ಣ ಅಂತಹ ತಾಯಿಗೆ ಅಪಮಾನ ಮಾಡಿ ರುವಂತಹ ಸಚಿವ ಅಂಬರೀಷ್ ಪತ್ನಿ ಸುಮಲತಾ ಬಗ್ಗೆ ‘ಪಶುಗಳಿಗೆ ಬಳಸುವ ಭಾಷೆ’ ಬಳಸಿ ಹಗುರವಾಗಿ ಮಾತನಾಡಿದ್ದಾರೆ ಎಂದು ನೋವಿನಿಂದ ಹೇಳುತ್ತೇನೆ, ರೇವಣ್ಣ ಮಾಡಿದ ತಪ್ಪು ಜೆಡಿಎಸ್‍ಗೆ ಅರಿವಾಗಿದೆ, ಆದ್ದರಿಂದ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ, ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಕ್ಷಮೆ ಕೇಳಿದ್ದು ಇಲ್ಲಿಯವರೆಗೂ ರೇವಣ್ಣ ಕ್ಷಮೆ ಕೇಳಿಲ್ಲ ಎಂದ ಅವರು, ಇಂತಹ ದುರಹಂಕಾರಿ ರೇವಣ್ಣನ ಕುಟುಂಬಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ರಾಹುಲ್ 28 ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡಲಿ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿದೆ ಇದಕ್ಕೆ ದೇಶದಲ್ಲಿನ 22 ರಾಜ್ಯಗಳ ಫಲಿತಾಂಶವೇ ಸಾಕ್ಷಿ, ಆದ್ದ ರಿಂದ ರಾಹುಲ್ ಗಾಂಧಿ ಕೇವಲ ಹಾವೇರಿಗಷ್ಟೆ ಅಲ್ಲದೇ ರಾಜ್ಯದಲ್ಲಿನ ಎಲ್ಲ 28 ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಿ ನನ್ನ ದೇನೂ ಅಭ್ಯಂತರವಿಲ್ಲ ಎಂದು ಉತ್ತರಿಸಿದರು. ಸುಮಲತಾ ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದಲ್ಲಿ ರಾಷ್ಟ್ರ ಮತ್ತು ರಾಜ್ಯ ನಾಯಕರ ಜೊತೆ ಮಾತಾಡುವುದಾಗಿ ತಿಳಿಸಿದ ಅವರು, ಭಾರತೀಯ ಜನತಾ ಪಕ್ಷದ ಸಿದ್ದಾಂತಗಳನ್ನು ನಂಬಿ ಯಾರೇ ಬಂದರೂ ಪಕ್ಷ ಸ್ವಾಗತಿಸಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
