ಮುರುಘಾ ಮಠದೊಳಗೆ “ಮಠ” ಶೂಟಿಂಗ್

ಚಿತ್ರದುರ್ಗ:

      ನಿಮಗೆಲ್ಲ ಮಠ ಅಂದರೆ, ಭಯ ಭಕ್ತಿ, ಮತ್ತು ಪ್ರೀತಿ. ಹೌದು 12 ವರ್ಷಗಳ ಹಿಂದೆ ನವರಸನಾಯಕ ಜಗ್ಗೇಶ್ ಅಭಿನಯದ ಮಠ ಸಿನೆಮಾ ಒಂದು ಬಗೆಯ ಕ್ರಾಂತಿಯನ್ನು ಮಾಡಿತು, ಭರ್ಜರಿ ಹಿಟ್ ಸಿನಿಮಾ ಆಗಿ ಮೂಡಿಬಂತು. ಅದೇ ಮಠ ಹೆಸರಿನ ಸಿನೆಮಾ ಇದೀಗ ಮತ್ತೆ ಬರ್ತಾ ಇದೆ. ಆದರೆ ಇದು ಒಂದು ಮಠದ ಸ್ಟೋರಿಯಲ್ಲ ಬದಲಿಗೆ ಹತ್ತಾರು ಮಠಗಳ ಸ್ಟೋರಿ. ಇಂತಹ ಮಠ ಸಿನಿಮಾದ ಶೂಟಿಂಗ್ ಈಗ ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆಯುತ್ತಿದೆ. ಖುದ್ದು ಡಾ. ಶಿವಮೂರ್ತಿ ಮುರುಘಾ ಶರಣರೇ ಕ್ಯಾಮೆರಾ ಚಾಲನೆ ನೀಡಿ ಶೂಟಿಂಗ್ ಆರಂಭಿಸಿದರು.

       ಈ ವೇಳೆ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು ಮಠದ ಪರಿಕಲ್ಪನೆ, ಮಠದ ಮಾರ್ಗದರ್ಶನ ಹಾಗೂ ಶ್ರೇಯೋಭಿವೃದ್ದಿಯ ಕಾಯಕಕ್ಕೆ ಸದಾ ನಮ್ಮ ಬೆಂಬಲ ಇರುತ್ತದೆ. ನಾಯಕ ನಟ ಸಂತೋಷ್ ಅವರು ಸಾಹಸ ಮಾಡಿ ಮಠ ಮಾರ್ಗದರ್ಶಿ ಪುಸ್ತಕ ರಚಿಸಿದಾಗ ಅವರ ಮೇಲೆ ನಮಗೆ ಅಪಾರ ಪ್ರೀತಿ ಬಂತು. ಅವರು ನಮ್ಮ ಮಠದ ಭಕ್ತರು. ಈ ಚಿತ್ರ ಶತದಿನೋತ್ಸವ ಆಚರಿಸಲಿ ಎಂದರು.

      ನಿರ್ದೇಶಕರಾದ ರವೀಂದ್ರ ವೆಂಶಿ ಮಾತನಾಡಿ ಇದೊಂದು ವಿಭಿನ್ನ ವಿಶೇಷ ಚಿತ್ರವಾಗಿದೆ. ಮಠದೊಳಗಿನ ಅನೇಕ ಆಲೋಚನೆಗಳು ಇಲ್ಲಿ ಅನಾವರಣವಾಗಿವೆ. ಕುಟುಂಬ ಸಮೇತ ನೋಡುವ ಪ್ರಾಕ್ಟಿಕಲ ಚಿತ್ರ ಎಂದರು.ನಿರ್ದೇಶಕರಾದ ರವೀಂದ್ರ ವೆಂಶಿ ನಿರ್ದೇಶನದಲ್ಲಿ, ನಮ್ಮ ಜಿಲ್ಲೆಯ ಜೀವನ್ ಗೌಡ ಅವರ ಛಾಯಾಗ್ರಹಣದಲ್ಲಿ ಸಿನಿಮಾ ಸಿದ್ದವಾಗುತ್ತಿದೆ. ನಾಯಕ ನಟನಾಗಿ ತರಂಗ ಸಂತೋಷ, ನಾಯಕಿ ಪಾತ್ರದಲ್ಲಿ ಆಶ್ರಿತ ಮಲ್ಲೆನಗಡೆ ಹಾಗೂ ಸಾಧುಕೋಕಿಲ, ರಾಜು ತಾಳಿಕೋಟೆ, ಶರತ್ ಲೋಹಿತಾಶ್ವ. ಮಂಗಳೂರು ಮೀನಾನಾಥ್ ಇತರರು ನಟಿಸುತ್ತಿದ್ದಾರೆ. ಸಂಕಲನಕಾರ ರವಿಚಂದ್ರನ್ ಕೈಚಳಕದಲ್ಲಿದ್ರೆ, ನಿರ್ಮಾಪಕರಾಗಿ ರಮೇಶ್ ಆರ್. ಅವರು ಶ್ರಮಿಸುತ್ತಿದ್ದಾರೆ.

      ಮುಖಂಡ ಕೆಇಬಿ ಷಣ್ಮುಖಪ್ಪ, ಎ.ಜೆ.ಪರಮಶಿವಯ್ಯ ಸ್ವಾಮೀಜಿ ಪಾತ್ರಧಾರಿ ಸಿದ್ದರಾಜ ಎಸ್.ಎಸ್. ಅಸೋಸಿಯೇಟï ಡೈರೆಕ್ಟಟರ್ ಹರೀಶ್ ಕುಂದೂರ್ ಯುವಸೂರ್ಯ, ಗುಣವರ್ಧನ್ ಶೇಖರ್, ಮಂಜುನಾಥ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link