ಮಠಮಾನ್ಯಗಳಿಂದ ರಂಗಕಲೆಗೆ ಮನ್ನಣೆ..!

ಚಿತ್ರದುರ್ಗ

    ಮಠಮಾನ್ಯಗಳಿಂದ ಇತ್ತೀಚಿನ ದಿನಗಳಲ್ಲಿ ನಾಟಕ ಇನ್ನಿತರೆ ಕಲೆಗಳಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ ಎಂದು ಧಾರವಾಡದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರುಮುರುಘಾಮಠದಲ್ಲಿ ನಡೆಯುತ್ತಿರುವ ಜಮುರಾ ನಾಟಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ನಾನಾ ಭಾಗಗಳಲ್ಲಿ ಇಂದಿಗೂ ನಾಟಕ ಪ್ರದರ್ಶನಗಳು ಹೆಚ್ಚು ಹೆಚ್ಚು ಪ್ರದರ್ಶನ ಕಾಣುತ್ತಿವೆ. ನಾಟಕಗಳು ಸಮಾಜದಲ್ಲಿ ಪ್ರಭಾವ ಬೀರುವ ಮಾದ್ಯಮವೆಂದು ಹೇಳಿದರು

    ರಂಗಸಜ್ಜಿಕೆಗಳು ನಾಡಿನಲ್ಲಿ ಉಳಿದಾವೆ ಎಂದರೆ ಮುರುಘಾಮಠ ಮೊದಲಾದ ಮಠಮಾನ್ಯಗಳಿಂದ, ನಾಟಕದ ಬಗ್ಗೆ ಬಹಳ ಉತ್ಸುಕತೆ ಜನರಲ್ಲಿ ಇದೆ ಎಂದು ನುಡಿದರು.ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ತಂಜಾವೂರಿನ ರಂಗ ಘಟಕರಾದ ಶ್ರೀ ನಂಜುಂಡಸ್ವಾಮಿ ತೊಟ್ಟವಾಡಿ ಮಾತನಾಡಿ, ಮಠಗಳು ನಮ್ಮಂತಹ ಕಲಾವಿದರನ್ನು ರಕ್ಷಿಸುತ್ತವೆ. ರಂಗಭೂಮಿ ಯಾವತ್ತು ಸತ್ಯವನ್ನು ಹೇಳುತ್ತದೆ, ಸುಳ್ಳು ಹೇಳುವುದಿಲ್ಲ, ಮಠಗಳು ನಾಟಕ ಪರಂಪರೆಯನ್ನು ಉಳಿಸಬೇಕಿದೆ. ಮುಂದಿನ ದಿನಗಳಲ್ಲಿ ಬಹುಭಾಷ ನಾಟಕಗಳನ್ನು ಪ್ರದರ್ಶಿಸಬೇಕು ಎಂದು ನುಡಿದರು.

      ಸಮಾರಂಭದಲ್ಲಿ ಸನ್ಮಾನಿತರಾದ ಬೆಂಗಳೂರಿನ ರಂಗ ನಿರ್ದೇಶಕರಾದ ಶ್ರೀ ಕೃಷ್ಣಮೂರ್ತಿ ಕವತ್ತಾರ್ ಮಾತನಾಡಿ, ಮುರುಘಾಮಠ ಅನೇಕ ಕಲಾವಿದರನ್ನು ಬೆಳೆಸಿದೆ, ನಾನು ಸಹ ಇದೇ ನಾಟಕ ಶಾಲೆಯಲ್ಲಿ ಬೆಳೆದವನು ಎಂದರು.

     ಸಮಾರಂಭದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು, ಚಿತ್ರದುರ್ಗ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ. ವಿಶಾಲಕ್ಷಿ ನಟರಾಜ್, ಕಂಪ್ಲಿಯ ಅಭಿನವ ಪ್ರಭುಸ್ವಾಮಿಗಳು ಉಪಸ್ಥಿರಿದ್ದರು.ಗಿರೀಶ್ ಕಾರ್ನಾಡ್ ರಚನೆಯ ಶ್ರೀ ಬಿ.ಅರ್.ವೆಂಕಟರಮಣ ಐತಾಳ ನಿರ್ದೇಶನದ ರಾಕ್ಷಸ-ತಂಗಡಿ ಎಂಬ ನಾಟಕವನ್ನು ನೀನಾಸಮ್ ತಿರುಗಾಟ -2019 ರ ತಂಡವು ಪ್ರರ್ದಶಿಸಿತು.ಸಮಾರಂಭದಲ್ಲಿ ಜಮುರಾ ಕಲಾವಿದರು ಪ್ರಾರ್ಥಿತಿಸಿದರೆ, ವಿಶ್ವನಾಥ್ ಕೆ.ಎನ್ ಸ್ವಾಗತಿಸಿದರೆ, ಹಾಲಪ್ಪ ನಾಯಕ ನಿರೂಪಿಸಿದರೆ, ಕೆ.ಪಿ.ಗಣೇಶಯ್ಯ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap