ಬೆಂಗಳೂರು
ಬಿಜೆಪಿ ಸರ್ಕಾರ ರಚನೆಯಲ್ಲಿ ನನ್ನದು ಅಳಿಲು ಸೇವೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹೇಳಿದ್ದಾರೆ,ಇಂದು ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸರ್ಕಾರ ಬೀಳಿಸಿದ್ದು ನಾನೇ ಅಂತಾ ನಾನು ಎಲ್ಲಿಯೂ ಹೇಳಿಲ್ಲ. ಬೀಳಿಸುವುದರಲ್ಲಿ ನನ್ನ ಸಣ್ಣ ಪಾತ್ರವೂ ಇದೆ ಅಂತಾ ಹೇಳಿದ್ದೆ, ಈಗಲೂ ಅದೇ ಹೇಳುತ್ತೇನೆ ಎಂದರು.
ನಾನೂ ಕೂಡಾ ಬೇರೆ ಸಂಸ್ಕೃತಿಯಲ್ಲಿ ಬಂದವನೆ ಈಗ ಬಿಜೆಪಿಯಲ್ಲಿ ಇದ್ದೇನೆ ಅದೇ ರೀತಿ ಗೆದ್ದು ಬರುವ ಶಾಸಕರು ಕೂಡ ಪಕ್ಷದಲ್ಲಿ ಒಡನಾಟ ಇಟ್ಟುಕೊಳ್ಳುತ್ತಾರೆ ಎಂದರು.ಯಡಿಯೂರಪ್ಪ ಸರ್ಕಾರ ಮೂರೂವರೆ ವರ್ಷ ಪೂರ್ಣಗೊಳಿಸುವ ವಿಶ್ವಾಸ ನನಗಿದೆ. ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿದ ಶಾಸಕರು ಗೆಲ್ಲುವುದಿಲ್ಲ ಎಂಬ ಉದಾಹರಣೆಗೆ ಕರ್ನಾಟಕಕ್ಕೆ ಅನ್ವಯ ಆಗುವುದಿಲ್ಲ ಏಕೆಂದರೆ ಅಲ್ಲಿನ ರಾಜಕೀಯವೇ ಬೇರೆ ಇಲ್ಲಿನ ರಾಜಜಕೀಯವೇ ಬೇರೆ ಎರಡಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
