ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಮನವಿ

ದಾವಣಗೆರೆ:

       ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುರ್ಕಿ, ಬಾಡ, ಮಳಲಕೆರೆ, ಶ್ಯಾಗಲೆ, ಹೂವಿನಮಡು, ಗೋಣಿವಾಡ, ಕಾರಿಗನೂರು ಕ್ರಾಸ್, ಮತ್ತಿ ಗ್ರಾಮಗಳಿಗೆ ಭೇಟಿ ನೀಡಿದ ಜೆಡಿಎಸ್ ಮುಖಂಡರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

       ಜಿಲ್ಲಾ ಜೆ.ಡಿ.ಎಸ್. ಮುಖಂಡರಾದ ಅನೀಸ್ ಪಾಷಾ, ಹೆಚ್.ಸಿ.ಗುಡ್ಡಪ್ಪ, ಜಸ್ಟೀನ್ ಜಯಕುಮಾರ್, ಎಸ್. ಸಂಗೇಗೌಡ, ಗೋಣಿವಾಡ ಮಂಜುನಾಥ, ಬಿ.ದಾದಾಪೀರ, ಡಿ.ಶಿವಣ್ಣರವರು ವಿವಿಧ ಗ್ರಾಮಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರು ಜೊತೆಯಲ್ಲಿ ಚರ್ಚಿಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆ.ಡಿ.ಎಸ್. ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕುರ್ಕಿ ಪರವತಪ್ಪ, ಬಾಡದ ವೀರೇಶ್, ಎಸ್.ಹೆಚ್. ಪ್ರಕಾಶ್, ಶ್ಯಾಗಲೆ ರುದ್ರಸ್ವಾಮಿ, ಲೋಕಯ್ಯ, ಪ್ರಭು ಮತ್ತಿತರರು ಇದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link