ಚಂಚಲ ಮನಸ್ಸು ಸರಿಪಡಿಸಲು ಶಿಬಿರ ಸಹಕಾರಿ

0
17

ದಾವಣಗೆರೆ:

       “ವಿದ್ಯಾರ್ಥಿನಿಯರ ಚಂಚಲ ಮನಸ್ಸನ್ನು ಸರಿ ದಾರಿಗೆ ತರಲು ಜೀವನ ಕೌಶಲ್ಯದಂಥಹ ಶಿಬಿರಗಳು ಸಹಕಾರಿಯಾಗಿವೆ ಎಂದು ಬ್ರಹ್ಮಾಕುಮಾರಿ ಲೀಲಾಜಿ ತಿಳಿಸಿದರು.

       ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಶಿವಧ್ಯಾನ ಮಂದಿರದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಎನ್.ಎಸ್.ಎಸ್ ಘಟಕ, ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಎನ್.ಎಸ್.ಎಸ್. ಘಟಕ, ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಜೀವನ ಕೌಶಲ್ಯ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

        ಕೇವಲ ಮೊಬೈಲ್‍ನಲ್ಲಿ ಕಾಲಹರಣ ಮಾಡದೇ ನಿಮ್ಮನ್ನು ನೀವು ಅರಿತು ನಡೆಯಬೇಕು. ಕೇವಲ ಹುಡುಗಿರಿಗೆ ಮಾತ್ರವಲ್ಲದೇ ಹುಡುಗರಿಗೂ ಸಹ ತರಬೇತಿ ಕೊಡಬೇಕಿದೆ. ಇಂತಹ ಸುಂದರ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವೇ ಕಾರಣ ಎಂದರು.

         ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಕೆ. ಹೆಚ್. ಶೇಖರಪ್ಪ ಮಾತನಾಡಿ, ‘ಪರಿಪೂರ್ಣ ಜೀವನಕ್ಕೆ ಆಧ್ಯಾತ್ಮಿಕ ಮತ್ತು ಮಾನವೀಯ ಮೌಲ್ಯಗಳನ್ನು ಕುರಿತಾದ ಶಿಕ್ಷಣದ ಅವಶ್ಯಕತೆ ಇದೆ. ಶಿಬಿರಾರ್ಥಿಗಳು ಮೂಢನಂಬಿಕೆ, ಅಂಧಾನುಕರಣೆ ತೊರೆದು ತಮ್ಮನ್ನು ತಾವು ಅರಿತುಕೊಳ್ಳುವತ್ತ ಚಿಂತನೆ ಮಾಡುತ್ತಿರುವ ವಿಷಯವು ಸಂತಸ ತಂದಿದೆ. ಧ್ಯಾನದಿಂದ ಏಕಾಗ್ತೆ ಸಾಧಿಸಿ ಉತ್ತಮ ಸಾಧನೆಗೈಯುವಂತೆ ಶುಭ ಹಾರೈಸಿದರು ಮತ್ತು ಈಶ್ವರೀಯ ವಿಶ್ವ ವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

        ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳಾದ ಶ್ರೀಯುತ ಗಂಗಾಧರ್ ವರ್ಮಾರವರು ಮಾತನಾಡುತ್ತಾ ರಾಜಯೋಗರಿಂದ ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳುವ ಮಾಹಿತಿಯನ್ನು ನೀಡಿದರು. ಸಂಪೂರ್ಣ ಆರೋಗ್ಯಕ್ಕಾಗಿ ಧ್ಯಾನವೇ ಮದ್ದು ಎಂದರು.

          ಸೀತಮ್ಮ ಕಾಲೇಜಿನ ಪ್ರಾಂಶುಪಾಲ ಎನ್. ರಾಜು ಮಾತನಾಡಿ, ‘ಇಲ್ಲಿ ಕಲಿತುಕೊಂಡ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಜೀವನದಲ್ಲಿ ಒಳಿತು-ಕೆಡುಕು ಕುರಿತು ಚಿಂತಿಸುವ ಪ್ರಬುದ್ಧತೆಯನ್ನು ನೀವೆಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.

           ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾದ ಶ್ರೀಯುತ ಬಿ. ಪಾಲಾಕ್ಷಿಯವರು ಮಾತನಾಡುತ್ತಾ ‘ದೀಪದಿಂದ ದೀಪ ಹಚ್ಚಿ ಜಗವ ಬೆಳಗತುವಂತೆ ಒಳ್ಳೆಯ ವಿಚಾರಗಳನ್ನು ಅರಿತುಕೊಂಡು ಶಿಬಿರಾರ್ಥಿಗಳು ಪ್ರತಿಯೊಬ್ಬರೂ ಕಾಲೇಜಿನ ಇತರೆ ವಿದ್ಯಾರ್ಥಿನಿಯರಿಗೆ ಮಾದರಿಯಾಗವುಂತೆ ವರ್ತಿಸಲಿ ಎಂಬ ಕಿವಿಮಾತು ಹೇಳಿದರು.

          ಮೋತಿವೀರಪ್ಪ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಆರ್. ಲೋಕೇಶಪ್ಪ, ಬ್ರಹ್ಮಾಕುಮಾರಿ ಶಾಂತಕ್ಕ, ಓಹಿಲೇಶ್ವರ, ಅನ್ನಪೂರ್ಣ ಪಾಟೀಲ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here