ಗುಬ್ಬಿ
ತಾಲ್ಲೂಕಿನ ಇತಿಹಾಸ ಪ್ರಸಿದ್ದ ಚಿಕ್ಕೋನಹಳ್ಳಿ ಮಜರೆ ನಡುವಲಪಾಳ್ಯ ಗ್ರಾಮದ ಶ್ರೀ ಘಂಟೆ ಬಸವೇಶ್ವರಸ್ವಾಮಿಯವರಿಗೆ ನಾಳೆ (ಮಾ.24) ಅತ್ಯಾಕರ್ಷವಾದ ಬೆಳ್ಳಿ ಕವಚ ಮತ್ತು ಬೆಳ್ಳಿಮುಖವಾಡ ಧಾರಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇದರ ಅಂಗವಾಗಿ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿವೆ. ನಾಳೆ (ಮಾ.25) ಆರತಿ ಸೇವೆ ಮತ್ತು ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಭಕ್ತಾದಿಗಳು ಭಾಗವಹಿಸಲಿದ್ದು, ತಮ್ಮ ಇಷ್ಟಾರ್ಥ ಪೂಜೆ ಸಲ್ಲಿಸಲಿದ್ದಾರೆ ಎಂದು ದೇವಾಲಯ ಸಮಿತಿಯ ರಾಜಣ್ಣಗೌಡರು ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.
ದಾನಿಗಳಾದ ಗಂಗಮ್ಮ ಅವರು ನಿರ್ಮಿಸಿರುವ ಆಕರ್ಷಕವಾದ ಬೆಳ್ಳಿ ಕವಚವನ್ನು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮದ ನಂತರ ದೇವರಿಗೆ ಧಾರಣೆ ಮಾಡಲಾಗುವುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ