ಬಳ್ಳಾರಿ:
ಇಂದು ಚುನಾವಣಾ ಪ್ರಚಾರದ ಅಂಗವಾಗಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಎ.ದೇವದಾಸ್ ಅವರಪರ ಕೊರ್ಲುಗುಂದಿಯಲ್ಲಿ, ನಗರದಲ್ಲಿಬೃಹತ್ ಬಹಿರಂಗ ಸಭೆಜರುಗಿತು. ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದರಾಜ್ಯ ಕಾರ್ಯದರ್ಶಿಗಳಾದ ಕಾ.ಉಮಾ.ಕೆಅವರು ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು.ಈ ಸಭೆಯಲ್ಲಿ ನೆರೆದಿದ್ದ ನೂರಾರು ಸಂಖ್ಯೆಯಗ್ರಾಮಸ್ಥರು, ನಗರದ ನಾಗರೀಕರು ಅತ್ಯಂತ ಗಂಭೀರವಾಗಿ ಎಲ್ಲಾ ವಿಷಯಗಳನ್ನು ಆಲಿಸಿದರು.
ಕಾ.ಕೆ.ಉಮಾ ಅವರು ಮಾತನಾಡುತ್ತಾ “ ನಮ್ಮ ದೇಶದಲ್ಲಿ ಪ್ರತಿ ದಿನ ಪೌಷ್ಟಿಕಾಂಶದ ಕೊರತೆಯಿಂದ ದಿನಕ್ಕೆ 4000 ಮಕ್ಕಳು ಅಸುನೀಗುತ್ತಿವೆ . ಇತ್ತೀಚಿಗೆ ದೆಹಲಿಯಲ್ಲಿ ಒಬ್ಬ ತಾಯಿಯ ಮೂರು ಮಕ್ಕಳು ಹಸಿವೆಯಿಂದ ಸಾವೀಗೀಡಾದ ಘಟನೆ ಕರಳು ಕಿವುಚುವಂತದ್ದು . ಇನ್ನೊಂದೆಡೆ ರೈತರಿಗೆ ಜೀವನ ಅಸಹನೀಯವಾಗಿದೆ. ದೇಶದಲ್ಲಿ ಪ್ರತಿ ಅರ್ಧಗಂಟೆಗೆ ಒಬ್ಬರೈತ ಆತ್ಮ ಹತ್ಯೆಗೆ ಮೊರೆ ಹೋಗುತ್ತಿದ್ದಾನೆ.
ಕಳೆದ 25 ವರ್ಷಗಳಲ್ಲಿ 4 ಲಕ್ಷರೈತರುದೇಶದಲ್ಲಿಆತ್ಮ ಹತ್ಯೆಗೆ ಮೊರೆ ಹೋಗಿದ್ದಾರೆ.ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲದೆ, ರೈತ ಸಾಲಗಾರನಾಗಿದ್ದಾನೆ. ಕಳೆದ 60 ವರ್ಷ ಆಳಿದ ಕಾಂಗ್ರೆಸ್ ಸರ್ಕಾರ ‘ಗರೀಬಿ ಹಠಾವೋ’ ಅಂತಹ ಪೊಳ್ಳು ಘೋಷಣೆಗಳನ್ನು ನೀಡಿತೇ ವಿನಹ, ಜನರ ಸಂಕಷ್ಟಗಳನ್ನು ಯಾವರೀತಿಯಿಂದಲೂ ಪರಿಹರಿಸಲಿಲ್ಲ. ಇನ್ನು ಅಚ್ಛೆ ದಿನ್ ತರುವುದಾಗಿ ಬಣ್ಣ ಬಣ್ಣದ ಮಾತನಾಡಿ ದಮೋದಿ ಅವರು,ಯಾರಿಗಾಗಿ ಅಚ್ಛೆ ದಿನ್ ತಂದಿರುವುದಾಗಿದಯವಿಟ್ಟುಉತ್ತರಿಸಲಿ ?ನಮ್ಮ ಹೆಣ್ಣು ಮಕ್ಕಳಿಗೆ ಭದ್ರತೆಯಿಲ್ಲದೆ, ಅತ್ಯಚಾರ ದಂತ ಘಟನೆಗಳು ನಡೆಯುತ್ತಿರುವುದುಆಘಾತಕಾರಿಯಾಗಿದೆ.ರಾಯಚೂರಿನಲ್ಲಿಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಅತ್ಯಾಚಾರದ ಘಟನೆ ಅಂತಃಸಾಕ್ಷಿಯನ್ನೇ ಕಲಕುವಂತದ್ದು.
ಮೋದಿ ಅವರ ಬೇಟಿ ಬಚಾವೋ, ಬೇಟಿ ಪಢಾವೋಘೋಷಣೆಯಿಂದ ಹೆಣುಮಕ್ಕಳಿಗೆ ಯಾವ ಭದ್ರತೆಯೂದೊರಕಿಲ್ಲ. ಈ ಯೋಜನೆಯ 56% ಹಣ, ಕೇವಲ ಜಾಹಿರಾತಿಗಾಗಿಖರ್ಚಾಗಿದೆ. ಬಿಜೆಪಿ ಮತ್ತುಕಾಂಗ್ರೆಸ್ ಕೇವಲ ಆಕರ್ಷಣೀಯ ಘೋಷಣೆಗಳನ್ನು ನೀಡಿವೆವಿನಹ, ಜನತೆಯಜ್ವಲಂತ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಅಸಮಾನತೆ, ಅನಕ್ಷರತೆಇಂತಹಯಾವ ಸಮಸ್ಯೆಗಳನ್ನು ಗಂಭೀರವಾಗಿತೆಗೆದುಕೊಂಡಿಲ್ಲ.
ಈ ಪಕ್ಷಗಳು ಬೆರಳೆಣಿಕೆಯ ಉದ್ಯಮಿಗಳಾದ ಟಾಟಾ, ಬಿರ್ಲಾ, ಅಂಬಾನಿ, ಅದಾನಿಗಳ ಸೇವೆಯನ್ನುಮಾತ್ರಅತ್ಯಂತ ಮುತುವರ್ಜಿ ವಹಿಸಿ ಮಾಡಿವೆ. ಈ ಪಕ್ಷಗಳು ಸಾಮಾನ್ಯಜನರನ್ನು ಪ್ರತಿನಿಧಿಸಲುಯಾವಅರ್ಹತೆಯೂಇಲ್ಲ. ಆದ್ದರಿಂದ ಬಳ್ಳಾರಿಲ್ಲಿ ಕಳೆದ 30 ವರ್ಷಗಳಿಂದ ರೈತ-ಕಾರ್ಮಿಕರ, ವಿದ್ಯಾರ್ಥಿಯುವಜನರ, ಮಹಿಳೆಯರ ಸಂಕಷ್ಟಗಳ ವಿರುದ್ಧ ನಿರಂತರವಾಗಿಧ್ವನಿಯೆತ್ತಿರುವದುಡಿಯುವ ವರ್ಗದ ಪಕ್ಷ ಎಸ್.ಯು.ಸಿ.ಐ (ಸಿ). ಈ ಪಕ್ಷಕ್ಕೆ ಮತ ಹಾಕಿ.ಟ್ರ್ಯಾಕ್ಟರ್‍ಗುರ್ತಿಗೆ ಮತ ಹಾಕಿ. ಎ,ದೇವಾಸ್‍ಅವರನ್ನು ಪಾರ್ಲಿಮೆಂಟ್‍ಗೆ ಆರಿಸಿ ಕಳುಹಿಸಿ” ಎಂದುಕೊನೆಯಲ್ಲಿ ಮನವಿ ಮಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯವಹಿಸಿದ್ದರು . ಅಭ್ಯರ್ಥಿ ಎ.ದೇವದಾಸ್ , ರಾಜ್ಯ ನಾಯಕರಾದ ಕೆ.ಸೋಮಶೇಖರ್, ರೈತ ಕೃಷಿ ಕಾರ್ಮಿಕ ಸಂಘಟನೆಯ ಮುಖಂಡರಾದ ಹನುಮಪ್ಪ ಉಪಸ್ಥಿತರಿದ್ದರು.