3 ಗಂಟೆಗಳೊಳಗೆ ನಗರದ 4 ಕಡೆಗಳಲ್ಲಿ ಸರಗಳ್ಳತನ..!!

ಬೆಂಗಳೂರು

     ನಗರದಲ್ಲಿ ರೌಡಿ ಚಟುವಟಿಕೆಗಳಿಗೆ ಮಟ್ಟ ಹಾಕಿ ಅಪರಾಧ ಹತ್ತಿಕ್ಕಲು ನಗರ ಪೊಲೀಸ್ ಅಲೋಕ್ ಕುಮಾರ್ ಅವರು ಕೈಗೊಂಡಿರುವ ಕಠಿಣ ಕ್ರಮಗಳ ನಡುವೆಯೂ ಸೋಮವಾರ ಮತ್ತೆ ಸರಗಳ್ಳರ ಹಾವಳಿ ತಲೆ ಎತ್ತಿ ಕೇವಲ 3 ಗಂಟೆಗಳೊಳಗೆ ನಗರದ 4 ಕಡೆಗಳಲ್ಲಿ ಸರಗಳ್ಳತನ ನಡೆದಿದ್ದು ಮಹಿಳೆಯಲ್ಲಿ ಆತಂಕ ಉಂಟಾಗಿದೆ.

     ಮಲ್ಲೇಶ್ವರಂನಿಂದ ಮಧ್ಯಾಹ್ನ 12.30 ರಿಂದ ವೈಯಾಲಿಕಾವಲ್‍ನಿಂದ ಆರಂಭಗೊಂಡಿರುವ ಸರಗಳವು ಅಲ್ಲಿಂದ ವಿಜಯನಗರ, ಪರಪ್ಪನ ಅಗ್ರಹಾರ ಸೇರಿ ಪ್ರತ್ಯೇಕ 4 ಕಡೆಗಳಲ್ಲಿ ಸರಗಳ್ಳರು ಕೇವಲ 3 ಗಂಟೆಗಳೊಳಗೆ ನಾಲ್ವರು ಮಹಿಳೆಯರ ಸರ ಕಸಿದು ಪರಾರಿಯಾಗಿದ್ದಾರೆ ಒಂದೇ ಗ್ಯಂಗ್‍ನ ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ.

ವೈಯಾಲಿಕಾವಲ್‍ನಲ್ಲಿ ಶುರು

      ಮಲ್ಲೇಶ್ವರಂನ ಈಜುಕೊಳ ಬಡಾವಣೆಯ 12ನೇ ಕ್ರಾಸ್‍ನಲ್ಲಿ ಯಶೋಧಮ್ಮ (63) ಅವರು ಮಧ್ಯಾಹ್ನ 12.30ರ ವೇಳೆ ಹತ್ತಿರದ ಅಂಗಡಿಗೆ ಹೋಗಿ ಸಾಮಾನು ತೆಗೆದುಕೊಂಡು ಬರುವಾಗ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಅವರ ಕತ್ತಿನಲ್ಲಿದ್ದ 30 ಗ್ರಾಂ ಮಾಂಗಲ್ಯಸರ ಕಸಿದು ಪರಾರಿಯಾಗಿದ್ದಾರೆ.

     ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿ ಸರ ಕಸಿದು ಕ್ಷಣಾರ್ಧದಲ್ಲಿ ಪರಾರಿಯಾದ ದೃಶ್ಯ ಕೃತ್ಯ ನಡೆದ ಸ್ಥಳದಲ್ಲಿ ಹಾಕಿದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈಯಾಲಿಕಾವಲ್ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.

ಕ್ಷಣಾರ್ಧದಲ್ಲಿ ಕಸಿತ

     ಮಲ್ಲೇಶ್ವರಂನ ಈಜುಕೊಳ ಬಡಾವಣೆಯಿಂದ 18ನೇ ಕ್ರಾಸ್‍ನ ಅಮ್ಮಣ್ಣಿ ಕಾಲೇಜ್‍ನ ಬೆಂಗಳೂರು ಒನ್ ಬಳಿಗೆ ಕೇವಲ 10 ನಿಮಿಷಗಳಲ್ಲಿ (12.40) ಬಂದಿರುವ ದುಷ್ಕರ್ಮಿಗಳು, ಕಂದಾಯ ಕಟ್ಟಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಧುಮತಿ (55) ಅವರ ಕತ್ತಿನಲ್ಲಿದ್ದ 60 ಗ್ರಾಂ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದಾರೆ.

     ವೈಯಾಲಿಕಾವಲ್‍ನ 1ನೇ ಕ್ರಾಸ್‍ನ 3ನೇ ಮುಖ್ಯರಸ್ತೆಯ ಮಧುಮತಿ ಬೆಂಗಳೂರು ಒನ್‍ನಲ್ಲಿ ಕಂದಾಯ ಕಟ್ಟಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಕೃತ್ಯ ನಡೆದಿದೆ. ಮಲ್ಲೇಶ್ವರಂ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯನಗರದಲ್ಲಿ ಕೃತ್ಯ

       ವಿಜಯನಗರ ಮಲ್ಲೇಶ್ವರಂನಿಂದ ಪರಾರಿಯಾದ ದುಷ್ಕರ್ಮಿಗಳು ವಿಜಯನಗರದ ಹಂಪಿ ನಗರದ 11ನೇ ಕ್ರಾಸ್‍ಗೆ ಮಧ್ಯಾಹ್ನ 1.15ಕ್ಕೆ ಬಂದು ಧ್ಯಾನ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಜಗದಾಂಭ (66) ಎಂಬುವರ ಕತ್ತಿನಲ್ಲಿದ್ದ 40 ಗ್ರಾಂ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದಾರೆ.

      ಕತ್ರಿಗುಪ್ಪೆಯ ಜಗದಾಂಭ ಅವರು ಹೊಸಹಳ್ಳಿಯ ಬಳಿ ಧ್ಯಾನ ಮಾಡಲು ಬರುತ್ತಿದ್ದು, ಧ್ಯಾನ ಮುಗಿಸಿಕೊಂಡು ಮನೆಗೆ ಹಂಪಿ ನಗರ ಮಾರ್ಗವಾಗಿ ನೇರಳೆಹಣ್ಣು ಖರೀದಿಸಿ ತಿನ್ನುತ್ತ ನಡೆದುಕೊಂಡು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪರಪ್ಪನ ಅಗ್ರಹಾರದಿಂದ ಪರಾರಿ

      ವಿಜಯನಗರದಿಂದ ಪರಪ್ಪನ ಅಗ್ರಹಾರ ಸಿಂಗಸಂದ್ರದ ಬಳಿಗೆ ಮಧ್ಯಾಹ್ನ 3.50ರ ವೇಳೆ ಬಂದಿರುವ ದುಷ್ಕರ್ಮಿಗಳು ನಡೆದುಕೊಂಡು ಹೋಗುತ್ತಿದ್ದ ಚಂದ್ರಮ್ಮ (55) ಎಂಬುವರ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದಾರೆ.

    ಚಂದ್ರಮ್ಮ ಅವರು ಸಿಂಗಸಂದ್ರದ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುವಾಗ ಈ ದುರ್ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ದುಷ್ಕರ್ಮಿಗಳಿಗೆ ತೀವ್ರ ಶೋಧ ನಡೆಸಿದ್ದಾರೆ.

ಒಂದೇ ಗ್ಯಾಂಗ್‍ನ ಕೃತ್ಯ

     ನಾಲ್ಕು ಕಡೆಗಳಲ್ಲಿ ನಡೆದಿರುವ ಸರಗಳವು ಕೃತ್ಯವನ್ನು ಒಂದೇ ಗ್ಯಾಂಗ್‍ನ ಇಬ್ಬರು ನಡೆಸಿ ಪರಾರಿಯಾಗಿದ್ದು, ಹೊರ ರಾಜ್ಯದ ಗ್ಯಾಂಗ್‍ನವರಿರಬಹುದು ಎಂದು ಶಂಕಿಸಲಾಗಿದೆ.ಡ್ಯೂಪ್ ಬೈಕ್‍ನಲ್ಲಿ ಹೆಲ್ಮೆಟ್ ಧರಿಸಿ ಬಂದಿರುವ ಇಬ್ಬರು ಸರಗಳ್ಳರು, 4 ಕಡೆಗಳಲ್ಲಿ ಸರಗಳವು ನಡೆಸಿ ಪರಾರಿಯಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಸರಗಳವು ಮಾಡಿ, ಹೊಸೂರು ರಸ್ತೆ ಮೂಲಕ ತಮಿಳುನಾಡಿಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link