ನಗರಸಭಾ ಚುನಾವಣೆಗೆ ತಂಪೆರೆದ ಸೊನೆ ಮಳೆ

ತಿಪಟೂರು :

   ಇಂದು ಬೆಳ್ಳಂಬೆಳಗ್ಗೆ ಬಂದ ತುಂತುರುಮಳೆಗೆ ನಗರಸಭಾ ಚುನಾವಣೆಗೆ ಶುಭಸೂಚಕವಾಗಿ ಬಂದ ತುಂತುರುಮಳೆ ನೆನ್ನೆಇದ್ದ ಚುನಾವಣಾಕಾವನ್ನು ಸ್ವಲ್ಪಮಟ್ಟಿಗೆ ತಣಿಸಿ ಇಂದು ಶಾಂತರೀತಿಯಿಂದ ಮತದಾನಮಾಡಲು ಮತದಾರರಿಗೆ ಅನುವುಮಾಡಿಕೊಟ್ಟಂತೆ ಕಾಣುತ್ತಿತ್ತು.

     ನಗರಸಭಾ ಚುನಾವಣೆ ನಡೆಯುತ್ತಿರುವ 31 ವಾರ್ಡ್‍ಗಳಿಂದ 48 ಮತಗಟ್ಟೆಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಮತದಾನಮಾಡಲು ಅಧಿಕಾರಿವರ್ಗದವರು ಮತ್ತು ಕಾರ್ಮಿಕರುಗಳು ಬೇಗನೆ ಬಂದು ಮತಚಲಾಯಿಸಿದ್ದರಿಂದ 9 ಗಂಟೆಯವರೆಗೆ ಕೇವಲ 8.38% ಮತಚಲಾವಣೆಯಾಗಿ, 9 ರಿಂದ ಸ್ವಲ್ಪ ಚುರುಕುಗೊಂಡು 11 ಗಂಟೆವೇಳೆಗೆ ಶೇಕಡ 22.46%, 11 ರಿಂದ 1 ಗಂಟೆ ವೇಳೆಗೆ 39.3ರವರೆಗೆ ಇದ್ದ ಮತಚಲಾವಣೆ ಇದ್ದಕ್ಕಿದ್ದಂತೆ ಬಿರುಸುಗೊಂಡು 3 ಗಂಟೆಯ ವೇಳೆಗೆ ಶೇ 53.13ಕ್ಕೆ ಬಂದಿತು ಅಂತಿಮವಾಗಿ ಇದ್ದು 45258 ಮತಗಳಲ್ಲಿ 33155 ಶೇಕಡ 73.26 ಮತಚಲಾವಣೆಯಾಗಿ ಕೆಲಮತಗಟ್ಟೆಗಲ್ಲಿ 80% ಮತದಾನವಾಯಿತು.

      ಇವೆಲ್ಲದರ ನಡುವೆ ಪ್ರಜ್ಞಾವಂತ ಮತದಾರರನ್ನು ಕಾಡುವ ಪ್ರಶ್ನೆ ಎಂದರೆ ನಾವೇಕೆ ಮತದಾನ ಮಾಡಿದೆವು ಮಿಕ್ಕ ಮತದಾರರು ಮತಗಟ್ಟೆಗೆ ಏಕೆ ಬರಲಿಲ್ಲ ಮತಗಟ್ಟೆಬಾರದ 12103 ಮತದಾರರು ಚುನಾವಣೆಗಳಿದಂದ ಬೇಸತ್ತಿದ್ದಾರೆಯೇ? ಅಥವಾ ನಮಗೇಕೆ ಊರ ಉಸಾಬರಿ ಎಂಬ ಉಢಾಫೆಯೇ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

      ರಂಜಾನ್‍ಮಾಸದ ಉಪವಾಸವಿರುವುದರಿಂದ ಮುಸ್ಲಿಂ ಮತದಾರರು ಮಾತ್ರ ಚುರುಕಿನಿಂದ ಮತದಾನಮಾಡುತ್ತಿದ್ದು ಗಾಂದಿನಗರದ ಶ್ರೀ ರಂಗನಾಥ ಐ.ಟಿ.ಐ ಮತಗಟ್ಟೆ ಸಂಖ್ಯೆ 20 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾವಣೆ ಮಾಡುತ್ತಿದ್ದು ಕಂಡುಬಂದಿತು.

       ತಾಲ್ಲೂಕು ಪಂಚಾಯಿ ಕಛೇರಿ ಮತಗಂಟೆ ಸಂಖ್ಯೆ 5 ರಲ್ಲಿ ಮದ್ಯಾಹ್ನ 3 ರ ನಂತರ ಮತದಾನ ಚುರುಕುಗೊಂಡು ಹೆಚ್ಚಿನ ಜನರು ಮತಚಲಾಯಿಸಲು ಬಂದಿದ್ದರಿಂದ 5 ಗಂಟೆಗೆ ಮುಂಚೆಬಂದಿದ್ದವರನ್ನು ಕಾಂಪೌಂಡ್ ಒಳಗೆ ಕರೆದುಕೊಂಡು ಟೋಕನ್ ವಿತರಿಸಿ ಮತದಾನ ಮಾಡಿಸಿದರು.

     ಎಲ್ಲಾ ಮತಗಟ್ಟೆಗಳಲ್ಲು ಮತದಾನ ಆರಂಭವಾಗಿದ್ದು ಇದುವರೆಗೂ ಯಾವದೇ ಗೊಂದಲವಿಲ್ಲದೆ ಶಾಂತಿಯುತವಾಗಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು. ಆದರು ಕೆಲವು ಮತಗಟ್ಟೆಗಳ 100 ಮೀಟರ್ ಅಂತರದಲ್ಲಿ ಮತಪ್ರಚಾರಮಾಡಬಾರದೆಂಬ ನಿಯಮವಿದ್ದರು ಅಭ್ಯರ್ಥಿಗಳ ಹಿಂಬಾಲಕರು ಕೆಲವು ಮತಗಟ್ಟೆಗಳ ಬಳಿ ಪ್ರಚಾರಮಾಡುತ್ತಿದ್ದುದು ಕಂಡುಬಂದಿತು.

ಮತಟಗಟೆಗಳಿಗೆ ಅಧಿಕಾರಿಗಳ ಭೇಟಿ :

    ಉಪವಿಭಾಗಾಧಿಕಾರಿ ಮತ್ತು ನಗರಠಾಣಾ ಸರ್ಕಲ್ ಇನ್ಸ್‍ಪೆಕ್ಟರ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮತಗಟ್ಟೆಗಳ ವೀಕ್ಷಣೆಮಾಡಿ ಮಾಹಿತಿ ಪಡೆದರು.

      5 ಗಂಟೆಗೆ ಮತದಾನ ಕೊನೆಯಾಗಿದ್ದಕ್ಕೆ ಕೆಲವಡೆ ಬೇಸರ : ಲೋಕಸಭಾ ಮತ್ತು ವಿದಾನಸಭಾ ಚುನಾವಣೆಗಳಲ್ಲಿ ಸಂಜೆ 6 ರವರಗೂ ಮತದಾನಕ್ಕೆ ಅವಕಾಶವಿದ್ದು ಮೊನ್ನೆತಾನೆ ನಡೆದ ಲೋಕಸಭಾ ಚುನಾವಣೆಯು 5 ಗಂಟೆ ನಂತರ ಮತಹಾಕಿದವರು ಇಂದು ಬಂದು ಬೇಸರಮಾಡಿಕೊಂಡಿದ್ದಲ್ಲದೇ ಕೆಲವು ಮತಗಟ್ಟೆಗಳಲ್ಲಿ ಅಧಿಕಾರಿಗಳು, ಅಭ್ಯರ್ಥಿಗಳು ಮತ್ತು ಕಾರ್ಯಕರ್ತರನಡುವೆ ಮಾತಿನ ಚಕಮಕಿ ನಡೆಯಿತು.

      ಮತಗಟ್ಟೆ ಸಂಖ್ಯೆ 28 ರಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ನಿಗಧಿತ ಅವದಿಗಿಂತ 8 ನಿಮಿಷ ಮೊದಲೆ ಇ.ವಿ.ಎಂ ಲಾಕ್‍ಮಾಡಿದ ಪರಿಣಾಮವಾಗಿ ಅಂತಿಮವಾಗಿ ಸಂಯಕ್ಕೆ ಸರಿಯಾಗಿ ಬಂದ 3 ಜನ ಮತದಾರರು ಮತದಾನದಿಂದ ವಂಚಿತರಾದರು ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಸಿ.ನಾಗೇಶ್ ಅಧಿಖಾರಿಗಳನ್ನು ತರಾಟೆಗೆ ತೆಗೆದುಕೊಂಡು ಸರಿಯಾದ ಸಮಯಕ್ಕೆ ಉಪವಿಭಾಗಾಧಿಕಾರಿ ಮತ್ತು ದಂಡಾಧಿಕಾರಿಗಳು ಬಂದು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮತದಾನಕ್ಕೆ ಅವಕಾಶಮಾಡಿಕೊಡಲಾಯಿತು. ಇ.ವಿ.ಎಂ. ಯಂತ್ರವನ್ನು ಲಾಕ್‍ಮಾಡಿದ್ದರಿಂದ ಹೊಸ ಇ.ವಿ.ಎಂ. ತರಿಸಿ ಮತದಾನಕ್ಕೆ ಅವಕಾಶಕಲ್ಪಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap