ತಿಪಟೂರು :
ನಗರಭೆಗೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾದ ಹಿನ್ನೆಲೆಯಲ್ಲೇ ನಗರಸಭೆಯ ಚುನಾವನೆ ಘೊಷಣೆಯಾಗಿರುವುದು ಕೆಲವರಿಗೆ ಹೊಸದಾಗಿ ಜನನಾಯಕರಾಗಲು ಹೊರಡುವ ಮೊದಲಮೆಟ್ಟಿಲನ್ನೇರಲು ಸಂತಸ ತಂದಿದೆ.ಲೋಕಸಭೆ ಚುನಾವಣೆ ಮುಗಿದು ಜನಪ್ರತಿನಿಧಿ ಗಳು ಯಾವಪಕ್ಷಕ್ಕೆ ಬಹುಮತಬರುತ್ತದೆ ನಮ್ಮ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ ದೊರೆಯುತ್ತದೆ ಎಂದು ಲೆಕ್ಕಾಚಾರಾಹಾಕುತ್ತಿರುವಾಗಲೇ ಇನ್ನೊಂದು ಚುನಾವಣೆಗೆ ಸಿದ್ದವಾಗಬೇಕಿದೆ.
ತಿಪಟೂರು ನಗರಸಭೆಯಲ್ಲಿ 31 ವಾರ್ಡ್‍ಗಳಿದ್ದು ಇವುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮೇ 9ರಂದು ಅಧಿಸೂಚನೆ ಹೊರಡಿಸುತ್ತಾರೆ. ಮೇ 16 ನಾಮಪತ್ರಸಲ್ಲಿಕೆಗೆ ಕಡೆದಿನ ಮತ್ತು ಮೇ 17ರಂದು ನಾಮಪತ್ರ ಪರಿಶಿಲನೆ, ಮೇ 20 ನಾಮಪತ್ರ ಹಿಂಪಡೆಯಲು ಕಡೇ ದಿನ, ಮೇ 29 ರ ಬೆಳಗ್ಗೆ 7 ರಿಂದ ಸಂಜೆ 5ರವರಗೆ ಮತದಾನ, ಮೇ 31ರಂದು ಬೆಳಗ್ಗೆ ಚುನಾವಣ ಮತಗಳ ಏಣಿಕೆ ಮತ್ತು ಫಲಿತಾಂಶಪ್ರಕಟವಾಗಲಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ