ಹಗರಿಬೊಮ್ಮನಹಳ್ಳಿ
ತಾಲೂಕಿನ ಹಂಪಾಪಟ್ಟಣದ ಶ್ರೀನಗರೇಶ್ವರ ದೇವಸ್ಥಾನದ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ವಿಜಯನಗರ ವಿಭಾಗೀಯ 2ನೇ ಸಮ್ಮೇಳನವನ್ನು ಜ.26 ಮತ್ತು 27ರಂದು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಮಾಜಿ ಉಪಾಧ್ಯಕ್ಷ ಶ್ರೀನಾಥ್ ಪೊರ್ಮ್ ತಿಳಿಸಿದರು.
ಹಗರಿಬೊಮ್ಮನಹಳ್ಳಿಯ ಶ್ರೀ ಕನ್ನಿಕಾಪರಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಶ್ರೀವಾಸವಿ ಮತ್ತು ಶ್ರೀನಗರೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಜ.26ರ ಬೆಳಗ್ಗೆ 8ಗಂಟೆಗೆ ಗಂಗಾ ಸ್ವೀಕಾರ, ಗಣಪತಿ ಪೂಜಾ, ಪುಣ್ಯಾಹ ವೃತ್ವಿಗ್ವರ್ಣ ಸಂಕಲ್ಪ ದೇವಾತಾ ಸ್ಥಾಪನೆ, ಜಪಧಿಗಳು ಶ್ರೀಗಣಪತಿಗೆ ಸುಗಂದೋಧಕ, ಆಂಜನೇಯಸ್ವಾಮಿಗೆ ಮಧು ಅಭಿಷೇಕ, ಶ್ರೀವಾಸವಿ ದೇವಿಗೆ ಶ್ರೀಸೂಕ್ತದಿಂದ ಹರಿದ್ರೋದಕ, ಶ್ರೀ ಸತ್ಯನಾರಾಯಣನಿಗೆ ಪುರುಷಸೂಕ್ತದಿಂದ ಕ್ಷೀರಾಭಿಷೇಕ, ಶ್ರೀ ನಗರೇಶ್ವರನಿಗೆ ಏಕಾದಶ ದ್ರವ್ಯದಿಂದ 11ರುದ್ರಾಭಿಷೇಕ. ಬೆಳಗ್ಗೆ 8.45ರಿಂದ 51 ಸುಮಂಗಲಿಯರ ಕಲಶ ಮೆರವಣಿಗೆ ಹಾಗೂ ಸಾಮೂಹಿಕ ಕುಂಕುಮಾರ್ಚನೆ ಇರುತ್ತದೆ.
ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯಾಧ್ಯಕ್ಷ ಎಸ್.ಎಸ್.ಶಭರೀಶ್ ಇರವರಿಂದ ವಿಜಯನಗರ ವಿಭಾಗೀಯಯ 2ನೇ ಸಮ್ಮೇಳನ ಸಮಾರಂಭದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಾ||ಟಿ.ಎ.ಶರವಣ, ಶಾಸಕ ಎಸ್.ಭೀಮಾನಾಯ್ಕ, ನಿಕಟಪೂರ್ವ ರಾಜ್ಯಾಧ್ಯಕ್ಷ ಜಿ.ವಿ.ಕೋಟೇಶ್ವರ, ತಹಸೀಲ್ದಾರ ವಿಜಯಕುಮಾರ್, ಆ.ವೈ.ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷ ಡಿ.ವಿ.ಸತ್ಯನಾರಾಯಣ, ಆ.ವೈ.ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಪೆಂಡಕೂರ್, ತಾ.ಪಂ.ಸದಸ್ಯ ಬುಡ್ಡಿಬಸವರಾಜ್, ಆ.ವೈ.ಮ. ಮಾಜಿ ಅಧ್ಯಕ್ಷ ಈಶ್ವರ ಶೆಟ್ಟಿ ಇನ್ನಿತರ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಧ್ಯಾಹ್ನ 12.30ಕ್ಕೆ ನಡೆಯುವ ಪ್ರಥಮ ಅಧಿವೇಶನದಲ್ಲಿ ವಾಮದೇವ ಮಹಾಂತ ರಾಜದೇಶಿಕೇಂದ್ರ ಶಿವಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲ್ಲಿದ್ದಾರೆ. “ಸಂಸ್ಕಾರ ಮತ್ತು ಯುವಜನತೆ’. ವಿಷಯವಾಗಿ ಉಪನ್ಯಾಸ ನಡೆಯುವುದು. ನಂತರ ನಾನಾ ಅಧಿವೇಶನಗಳ ಜೊತೆಗೆ ಮಧ್ಯಾಹ್ನ 3ಗಂಟೆಗೆ ‘ಮನೆಮದ್ದು’ ವಿಷಯವಾಗಿ ಸಂಪನ್ಮೂಲ ವ್ಯಕ್ತಿಗಳಾದ ಪ್ರಕ್ರೀತಿ ವೈಧ್ಯ ಡಾ| ಹನುಮಂತಪ್ಪ ಇವರಿಂದ ಉಪನ್ಯಾಸ ಇರುತ್ತದೆ.
ಹಂಪಾಪಟ್ಟಣದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀ ಕನ್ನಿಕಾಪರಮೇಶ್ವರಿಯ ಭಾವೈಕ್ಯತಾ ಮೆರವಣಿಗೆ ಗ್ರಾಮದಲ್ಲಿ ಸಂಭ್ರಮ, ಸಡಗರದಿಂದ ಅದ್ಧೂರಿಯಾಗಿ ನಡೆಯುವುದು ಎಂದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಂಘದ ಅಧ್ಯಕ್ಷ ಆರ್.ಜಿ.ಬಸವರಾಜ, ಯುವಜನ ಸಂಘದ ಅಧ್ಯಕ್ಷ ಪಿ.ಗುರುರಾಜ, ಕಾರ್ಯದರ್ಶಿ ಜಿ.ಶ್ರೀನಿವಾಸ, ಸಮಾಜದ ಮುಖಂಡರಾದ ಆರ್.ವಿ.ಬಸವರಾಜ, ಕೆ.ವೆಂಕಟಾಚಲಪತಿ, ಬಿ.ನಾಗರಾಜ, ಕೆ.ಶ್ರೀನಿವಾಸ, ಕೆ.ಮನೋಹರ, ಸಂಜೀವ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ