ಚಿತ್ರದುರ್ಗ
ಶ್ರೀ ಮುರುಘಾಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ವರ್ತಮಾನದ ಬಿಕ್ಕಟ್ಟುಗಳನ್ನು ಕುರಿತು ಪತ್ರಿಕೆಗಳಿಗೂ ಬರೆಯುತ್ತಾರೆ, ಪ್ರತಿಕ್ರಿಯಿಸುತ್ತಾರೆ. ಕಾವ್ಯ, ವಚನ, ವಿಚಾರ, ವಿಮರ್ಶೆ, ನಾಟಕ, ರೂಪಕ, ಪ್ರವಾಸ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಕೃಷಿಮಾಡಿ 63ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿರುವ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಇದೀಗ ಅವನ್ನು 20 ಶೀರ್ಷಿಕೆಗಳ ಅಡಿಯಲ್ಲಿ ಸಮಯೋಚಿತವಾದ ಚಿಂತನೆಗಳ ರೂಪದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಈ ಪ್ರಯತ್ನವೇ ಡಾ. ಶಿವಮೂರ್ತಿ ಮುರುಘಾ ಶರಣರ ಪುಸ್ತಕೋತ್ಸವ, 20 ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಜುಲೈ 13, 2019ರ ಶನಿವಾರ ಸಂಜೆ 5.30ಕ್ಕೆ. ಸ್ಥಳ : ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.
ಬಸವಕೇಂದ್ರ ಬೆಂಗಳೂರು, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಬೆಂಗಳೂರು ಇವರುಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ಸಾನ್ನಿಧ್ಯ : ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು, ಶೂನ್ಯಪೀಠಾಧ್ಯಕ್ಷರು, ಮುರುಘಾಮಠ, ಚಿತ್ರದುರ್ಗ. ಕೇಂದ್ರ ಸಾಹಿತ್ಯ ಅಕಾಡೆಮಿಯ ಈಗಿನ ಅಧ್ಯಕ್ಷರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಪುಸ್ತಕಗಳ ಲೋಕಾರ್ಪಣೆ ಮಾಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಡಾ. ಸ.ಚಿ.ರಮೇಶ್, ಕುಲಪತಿಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಡಾ. ಬೈರಮಂಗಲ ರಾಮೇಗೌಡ ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಎಂ.ತಿಮ್ಮಯ್ಯ ಅಧ್ಯಕ್ಷರು, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಬೆಂಗಳೂರು ಇವರು ಭಾಗವಹಿಸಲಿದ್ದಾರೆ.
ಲೋಕಾರ್ಪಣೆಗೊಳ್ಳಲಿರುವ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ 20 ಕೃತಿಗಳು : 1) ಬಸವತತ್ತ್ವ ವಿಶ್ವತತ್ತ್ವ, 2) ಲಿಂಗಾಯತ ಸ್ವತಂತ್ರಧರ್ಮ-ಒಂದು ಅಧ್ಯಯನ, 3) ಸಮ ಸಮಾಜ, 4) ವೃತ್ತಿಧರ್ಮ, 5) ಕಾಲಧರ್ಮ, 6) ವ್ಯಕ್ತಿತ್ವ ವಿಕಸನ, 7) ಸಾಮಾಜಿಕ ಸ್ಪಂದನ, 8) ಬೌದ್ಧಿಕಯಾನ, 9) ಅಂತರ್ಯಾನ, 10) ಚೆನ್ನುಡಿ, 11) ಜಾಗೃತಿಯಾನ, 12) ಮಹಾಬೆರಗು, 13) ಜ್ಞಾನಾಂಜನ, 14) ಸಾಹಸಮಯ ಈ ಜೀವನ, 15) ಧಾರ್ಮಿಕ ಜೀವನ, 16) ಜಾಗೃತೀಕರಣ, 17) ಸ್ವಾಭಿಮಾನ ಜಾಗೃತಿ, 18) ಮೌಢ್ಯವಿರೋಧಿ ಆಂದೋಲನ, 19) ಬದುಕನ್ನು ಕಟ್ಟಿಕೊಳ್ಳಿರಿ, 20) ಗೌರವದ ನಡೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
