ಹಗರಿಬೊಮ್ಮನಹಳ್ಳಿ
ಮನುಷ್ಯನಿಗೆ ಸಾಮಾನ್ಯವಾಗಿ ಕಷ್ಟಗಳು ಎದುರಾಗುತ್ತಾವೆ. ಯಾರು ಯೇಸುವಿನಲ್ಲಿ ನಂಬಿಕೆ ಇಟ್ಟವರನ್ನು ಕಾಯುತ್ತಾನೆ ಎಂದು ಪುಣ್ಯ ಕ್ಷೇತ್ರ ನಂದಿಪುರದ ಚರಂತೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಚಿಂತ್ರಪಳ್ಳಿಯಲ್ಲಿ ನವ ಜೀವನ ಕಲ್ವಾರಿ ಮಿನಿಸ್ಟ್ರಿಯಿಂದ ಹಮ್ಮಿಕೊಳ್ಳಲಾಗಿದ್ದ ಎಲ್.ಜಿ.ಎಫ್ ಮಹಿಮಾ ಪ್ರಾರ್ಥನಾಲಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಲೋಕಕಲ್ಯಾಣಕ್ಕಾಗಿ ಸಿಲುಬೆಗೇರಿದ ಯೇಸು, ತಮ್ಮ ಕೊನೇ ಕ್ಷಣದಲ್ಲಿಯೂ ತಪ್ಪು ಮಾಡುವವರನ್ನು ಕ್ಷಮಿಸು ದೇವನೇ ಎಂದು ಪ್ರಾರ್ಥಿಸಿದ್ದಾರೆ. ಇದರಿಂದ ಪ್ರತಿಯೊಬ್ಬರಿಗೆ ಒಳೆತನ್ನುಮಾಡುವ ಮನಸ್ಸು ಹೊಂದಿರಬೇಕು ಎಂದರ್ಥ. ಆ ನಿಟ್ಟಿನಲ್ಲಿ ನಾವು ನೀವೆಲ್ಲ ಬೇರೆಯವರಿಗೆ ಒಳೆಯದನ್ನು ಬಯಸಬೇಕು ಎಂದು ಕರೆ ನೀಡಿದರು.
ನಂತರ ಹಾಲಸ್ವಾಮಿ ಮಠದ ಶಿವಯೋಗಿ ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ನ್ಯಾಯಯುತಮಾರ್ಗದಲ್ಲಿ ಸಾಗಬೇಕು. ದೇಶಕ್ಕೆ ನಾವು ಏನನ್ನಾದರೂ ಒಳ್ಳೆಯದನ್ನು ಬಯಸಬೇಕು, ಪ್ರತಿಯೊಬ್ಬರಲ್ಲೂ ಒಳ್ಳಯದನ್ನು ಮಾಡುವ ಮೂಲಕ ಅವರಲ್ಲಿ ದೇವರನ್ನು ಕಾಣಬೇಕು ಎಂದು ಯೇಸು ಬಯಸಿದ್ದರು. ಅದರಂತೆ ನಾವೆಲ್ಲರೂ ಒಳ್ಳೆಯ ಸಮಾಜ, ಸ್ವಚ್ಛಂದ ಪರಿಸರ ನಿರ್ಮಾಣಮಾಡಲು ಪ್ರಯತ್ನಿಸೋಣವೆಂದರು.
ಫಾಸ್ಟರ್ ಗಾರ್ಬೆಯಲ್, ಮೌಲಾನಿ ಭಾಷೀರ್‍ಸಾಬ್ ಮಾತನಾಡಿದರು. ಬಣಕಾರ ಗೋಣೆಪ್ಪ, ಫಾಸ್ಟರ್ ವಾಯಸ್ ಡ್ಯಾನಿಯಲ್, ಕಾಂತರಾಜ್, ಫಾಸ್ಟರ್ ಸಂತೋಸ್, ಫಾಸ್ಟರ್ ರವಿಕುಮಾರ್, ಫಾಸ್ಟರ್ ಆನಂದ್ ಸೇರಿದಂತೆ ಇತರರು ಇದ್ದರು.
ಫಾಸ್ಟರ್ ಎಲ್.ಹನುಮೇಶ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಬೆನ್‍ಜೀ ಮಿನ್, ವೇಣುಗೋಪಾಲ ನಿರ್ವಹಿಸಿದರು.