120 ಪಾರ್ಕ್‍ಗಳ ಜಾಗ ಗುರುತಿಸಿ ನಾಮಫಲಕ : ಲಕ್ಷ್ಮೀನರಸಿಂಹರಾಜು

ತುಮಕೂರು
    ತುಮಕೂರು ನಗರದ ಎಲ್ಲ 35 ವಾರ್ಡ್‍ಗಳ ವ್ಯಾಪ್ತಿಯಲ್ಲಿರುವ ಒಟ್ಟು 120 ಉದ್ಯಾನವನಗಳನ್ನು ಗುರುತಿಸಿ, ಅವುಗಳ ಅಳತೆ ಮತ್ತು ವಿಸ್ತೀರ್ಣ ಹಾಗೂ ಚಕ್ಕುಬಂದಿ ಇರುವ ನಾಮಫಲಕವನ್ನು ಪ್ರತಿಯೊಂದ ಉದ್ಯಾನವನದೊಳಗೆ ಅಳವಡಿಸಬೇಕೆಂಬ ಮಹತ್ವದ ತೀರ್ಮಾನವೊಂದನ್ನು ತುಮಕೂರು ಮಹಾನಗರ ಪಾಲಿಕೆಯು ತೆಗೆದುಕೊಂಡಿದೆ. 
    ಈ ವಿಷಯವನ್ನು ತುಮಕೂರು ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (ಜೆಡಿಎಸ್) “ಪ್ರಜಾಪ್ರಗತಿ”ಗೆ ತಿಳಿಸಿದ್ದಾರೆ. “ಇತ್ತೀಚೆಗೆ ಸ್ಥಾಯಿ ಸಮಿತಿ ಸಭೆ ನಡೆದಾಗ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಎಲ್ಲ 35 ವಾರ್ಡ್ ವ್ಯಾಪ್ತಿಯಲ್ಲಿರುವ 120 ಉದ್ಯಾನವನಗಳನ್ನು ಮೊದಲಿಗೆ ಗುರುತಿಸಬೇಕು. ಅವುಗಳ ಅಳತೆ ಮತ್ತು ವಿಸ್ತೀರ್ಣ ಗೊತ್ತು ಮಾಡಬೇಕು.
    ಇದರ ವಿವರ ಹಾಗೂ ಚಕ್ಕುಬಂದಿ ವಿವರ ಇರುವ ನಾಮಫಲಕವನ್ನು ಎಲ್ಲ ಉದ್ಯಾನವನಗಳಲ್ಲೂ ಅಳವಡಿಸಬೇಕು ಎಂದು ಸ್ಥಾಯಿ ಸಮಿತಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನಕ್ಕೆ ಬರಲಾಯಿತು” ಎಂದು ಅವರು ಮಾಹಿತಿ ನೀಡಿದ್ದಾರೆ.  “ಈ ವಿಷಯಕ್ಕೆ ಇತ್ತೀಚೆಗೆ ನಡೆದಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಅನುಮೋದನೆ ದೊರೆತಿದೆ. ಇನ್ನೇನಿದ್ದರೂ ಈ ತೀರ್ಮಾನ ಅನುಷ್ಠಾನವಾಗಬೇಕಿದೆ ಯಷ್ಟೇ” ಎಂದು ಲಕ್ಷ್ಮೀನರಸಿಂಹರಾಜು ಹೇಳಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link