ನಮ್ಮ ಕಷ್ಠಗಳಿಗೆ ನಾವೇ ಪರಿಹಾರ ಹುಡುಕಿಕೊಳ್ಳಬೇಕು : ಡಾ.ಸುಭಾಷಚಂದ್ರ ಬಸವರೆಡ್ಡಿ

ತಿಪಟೂರು:

         ನಮ್ಮ ಕಷ್ಟಗಳಿಗೆ ನಮ್ಮ ಹತ್ತಿರವೇ ಪರಿಹಾರವಿರುತ್ತದೆ ಅದಕ್ಕೆ ಸೂಕ್ತ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕು, ಆಗ ಮಾತ್ರ ಏನನ್ನಾದರು ಸಾಧಿಸಲು ಸಾಧ್ಯ ಎಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಷಚಂದ್ರ ಬಸವರೆಡ್ಡಿ ತಿಳಿಸಿದರು.

          ನಗರದ ಕಲ್ಪತರು ಮಹಾವಿದ್ಯಾಲಯದ ಸಭಾಂಗಣದಲ್ಲಿ ವಾಣಿಜ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲಿ ಶಕ್ತಿ ಹುಡುಗಿರುತ್ತದೆ. ಅದನ್ನು ಎಚ್ಚರಗೊಳಿಸಿ ಶ್ರಮವಹಿಸಿದಾಗ ಮಾತ್ರವೇ ಎಲ್ಲವನ್ನು ಸಾಧಿಸಲು ಸಾಧ್ಯವಾಗುತ್ತದೆ. ಶಿಕ್ಷಕ ವಿದ್ಯಾರ್ಥಿಯ ಮಾರ್ಗದರ್ಶಕನಾಗಿದ್ದು, ವಿದ್ಯಾರ್ಥಿಗಳು ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಾಗ ಮಾತ್ರವೇ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯ.

        ನಮ್ಮ ಮನಸ್ಸು, ದೇಹವನ್ನು ನಾವೇ ಸ್ವಾಧೀನದಲ್ಲಿ ಇಟ್ಟುಕೊಂಡಾಗ ದಿನವಿಡಿ ಸಂತೋಷದಿಂದ ಜೀವಿಸಲು ಸಾಧ್ಯವಾಗುತ್ತದೆ. ಭಾರತವು ಜ್ಞಾನ, ಶಿಕ್ಷಣ, ಆಲೋಚನಾ ಶಕ್ತಿಯಲ್ಲಿ ಶ್ರೀಮಂತವಾದ ದೇಶವಾಗಿದ್ದು ನಮ್ಮ ಸಂಸ್ಕøತಿಯಿಂದಲೇ ಇಡೀ ವಿಶ್ವದಲ್ಲಿ ಹೆಸರುವಾಸಿಯಾಗಿದ್ದೇವೆ. ಅಂತಹ ಸಂಸ್ಕøತಿಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ಕೈಚಲ್ಲದೇ ಎಲ್ಲವನ್ನು ಬಳಸಿಕೊಂಡು ಜ್ಞಾನ ವೃದ್ಧಿ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಇದರಿಂದಾಗಿ ಒಂದಲ್ಲ ಒಂದು ದಿನ ಶ್ರಮಕ್ಕೆ ತಕ್ಕ ಪ್ರತಿಫಲವೂ ತಾನಿರುವ ಜಾಗಕ್ಕೆ ಹುಡುಕಿಕೊಂಡು ಬರುತ್ತದೆ.

         ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಕೆ.ಕುಮಾರಸ್ವಾಮಿ ಮಾತನಾಡಿ ವಿದ್ಯಾಥಿಗಳು ಇಂದಿನ ಅಗತ್ಯತೆಗಳಿಗೆ ಅನುಗುಣವಾಗಿ ಶಿಕ್ಷಣವನ್ನು ಪಡೆಯುವ ಜೊತೆಗೆ ತಾಂತ್ರಿಕವಾಗಿಯೂ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕು. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಫರ್ಧೆ ಹೆಚ್ಚಾಗಿದ್ದು ವಿಶೇಷ ಜ್ಞಾನವಿದ್ದರೆ ಮಾತ್ರ ಅವಕಾಶಗಳನ್ನು ಪಡೆಯಲು ಸಾಧ್ಯ. ಜೀವನದಲ್ಲಿ ಒಂದೇ ವೃತ್ತಿಗೆ ಹೆಚ್ಚಿನ ಆದ್ಯೆತ ನೀಡುವ ಬದಲು ಹಲವು ವಿಷಯಗಳಲ್ಲಿ ಜ್ಞಾನ ಪಡೆಯುವುದು ಉತ್ತಮವಾದದ್ದು ಎಂದು ತಿಳಿಸಿದರು.

         ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿ.ಮಾಲತಿ ಮಾತನಾಡಿ ವಿದ್ಯಾರ್ಥಿಗಳು ಪದವಿಯ ನಂತರ ಸ್ನಾತಕೋತ್ತರ ಪದವಿಯ ನಂತರದಲ್ಲಿ ತಮ್ಮ ಮನಸ್ಸು, ಆಲೋಚನೆಯನ್ನು ನಿಕ್ರಿಯಗೊಳಿಸದೇ ಸದಾಕಾಲ ಆಲೋಚಿಸು, ಕಾರ್ಯನಿರ್ವಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಇದಿರಂದ ಜೀವನದಲ್ಲಿ ಉತ್ಸಾಹ ಹೆಚ್ಚಾಗುವ ಜೊತೆಗೆ ಯಾವುದೇ ಕೆಲಸಕ್ಕೂ ಸಿದ್ಧವಾಗುವ ಮನೋಗುಣ ಬೆಳವಣಿಗೆಯಾಗುತ್ತದೆ ಎಂದರು.ಸಮಾರಂಭದಲ್ಲಿ ವಾಣಿಜ್ಯ ವಿಭಾಗದ ಪ್ರೊ.ಲತಾ, ದಿಲೀಪ್.ಎಂ.ಷಾ, ಕನ್ನಡ ವಿಭಾಗದ ಮುಖ್ಯಸ್ಥ ಕಾಂತರಾಜು, ದಿಲೀಪ್ ಕುಮಾರ್, ಜ್ಯೋತಿ, ವೀಣಾ, ಚಂದ್ರಶೇಖರ್, ವಿಶ್ವನಾಥ್, ಯೋಗನಂದ ಸೇರಿದಂತೆ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap