ಮದ್ಯ, ಮಾದಕ ವಸ್ತುಗಳ ನಿಷೇಧಕ್ಕೆ ಒತ್ತಾಯ

ದಾವಣಗೆರೆ:

        ಮದ್ಯ, ಮಾದಕ ವಸ್ತುಗಳನ್ನು ಜವಾಬ್ದಾರಿಯುತ ಸರ್ಕಾರಗಳು ನಿಷೇಧಿಸಬೇಕೆಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಆಗ್ರಹಿಸಿದರು.

        ಇಲ್ಲಿನ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿಶ್ವಧರ್ಮ ಮತ್ತು ಭಾವೈಕ್ಯ ಸಮಿತಿಯಿಂದ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಅಲ್ಲದೆ, ಗಣೇಶೋತ್ಸವದಲ್ಲಿ ಮದ್ಯ ಸೇವಿಸಿ ಡಿಜೆ ಹಾಡಿಗೆ ಕುಣಿಯುವುದು ಸಂಸ್ಕೃತಿಯೂ, ಧರ್ಮವೂ ಅಲ್ಲ. ಯುವಕರಿಗೆ ಧರ್ಮದ ಬಗೆಗಿನ ಕಲ್ಪನೆಯನ್ನು ತಿಳಿಹೇಳಬೇಕು. ಅಲ್ಲದೆ, ಯುವಕರಿಗೆ ಉತ್ತಮವಾದ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಬೇಕೇ ಹೊರತು, ಅವರನ್ನು ಪ್ರಚೋದಿಸಬಾರದು ಎಂದರು.

         ಸಸ್ಯಾಹಾರಿಯಾದ ಹಿಟ್ಲರ್ ಅತ್ಯಂತ ಕ್ರೂರಿಯಾಗಿದ್ದ. ಆದರೆ, ಮಾಂಸಾಹಾರ ಸೇವಿಸುತ್ತಿದ್ದ ಮದರ್ ಥೆರೆಸಾರವರು ಜೀವದಯಾ ಪರವಾದ ಮನಸ್ಸು ಹೊಂದಿದ್ದರು. ಹೀಗಾಗಿ ಮನುಷ್ಯನಿಗೆ ತಿನ್ನುವ ಆಹಾರಕ್ಕಿಂತ ಸಂಸ್ಕಾರ ಮುಖ್ಯವಾಗಿದೆ ಎಂದು ನುಡಿದರು.
ದೇಹದ ರಚನೆಯೇ ಅದ್ಭುತ. ಮನಸ್ಸು ಅದನ್ನಾಳುವ ದೊರೆ. ಜ್ಞಾನ ಅಂತರಂಗದ ಸೂರ್ಯ ಇದನ್ನು ಅರ್ಥ ಮಾಡಿಕೊಂಡು ಕೆಟ್ಟ ಆಲೋಚನೆಗಳನ್ನು ಬಿಡಬೇಕು. ಅದಕ್ಕೆ ವಿವೇಕ ಎಂಬ ಕಡಿವಾಣ ಹಾಕಬೇಕಾಗಿದೆ ಎಂದು ಹೇಳಿದರು.

         ಎಲ್ಲವನ್ನೂ ಸಾಧಿಸಲು ಪ್ರೇರಣೆ ನೀಡುವ ಶಿವಯೋಗ ಎಂಬ ಸುಂದರ ವ್ಯಾಖ್ಯಾನ ನೀಡಿದ್ದು ಲಿಂಗಾಯತ ಧರ್ಮ. ಇದು ವೈಜ್ಞಾನಿಕ ಧರ್ಮ. ಯೋಗದಲ್ಲಿ ದೈಹಿಕ ಯೋಗ, ಮಾನಸ ಯೋಗ ಎಂಬ ಹಲವು ಪ್ರಕಾರಗಳಿವೆ. ಇದಕ್ಕೆ ಶಿವಯೋಗ ನೀಡಿದ್ದು ಬಸವಣ್ಣ. ನಮ್ಮ ಮನಸ್ಸಿನ ಕಲ್ಮಶಗಳನ್ನು ತೊಡದು ಹಾಕಿ ಇಷ್ಟಲಿಂಗ ಪೂಜೆ ಮೂಲಕ ಶಿವಯೋಗ ಸಾಧಿಸಬೇಕು. ಶಿವಯೋಗಕ್ಕೆ ಏಕಾಗ್ರತೆ ಅಗತ್ಯ ಎಂದರು.

           ಅಹಂಕಾರ ಅಳಿಯದೆ ಓಂಕಾರ ಸಾಧ್ಯವಿಲ್ಲ. ನಾನೆಂಬುದು ಅಹಂಕಾರ ನೀನೆಂಬುದು ಮಾಯೆ ಎಂದು ಶರಣರು ಹೇಳಿದ್ದಾರೆ. ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದ ಬಸವಣ್ಣನಿಗೆ ಗರ್ವವಿರಲಿಲ್ಲ. ಈ ರೀತಿಯ ಮನಸ್ಸು ನಮ್ಮದಾಗಬೇಕು ಎಂದು ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link