ನರ್ಮದಾ ರೆಸಿಡೆನ್ಸಿ ಉದ್ಗಾಟನೆ

ಬ್ಯಾಡಗಿ:

      ಬ್ಯಾಡಗಿಯಂತಹ ವಿಶ್ವ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಗೆ ವಸತಿ ನಿಲಯಗಳು (ಲಾಡ್ಜಿಂಗ್ ಸೌಕರ್ಯಗಳು) ಅತೀ ಆವಶ್ಯಕವಾಗಿವೆ, ವ್ಯಾಪಾರದ ಉದ್ದೇಶದಿಂದ ಆಗಮಿಸುವವರಿಗೆ ತಂಗಲು ಅವಶ್ಯಕವಾಗಿದ್ದು, ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ನರ್ಮದಾ ರೆಸಿಡೆನ್ಸಿ ಇಂತಹದ್ದೊಂದು ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಹಾವೇರಿ ಜಿಲ್ಲಾಧಿಕಾರಿ (ಅಬಕಾರಿ ಇಲಾಖೆ) ಆರ್.ನಾಗಸೇನಾ ವಿಶ್ವಾಸ ವ್ಯಕ್ತಪಡಿಸಿದರು.

       ಪಟ್ಟಣದ ಸ್ಟೇಶನ್ ರಸ್ತೆಯಲ್ಲಿ ರೂ.1.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ನರ್ಮದಾ ರೆಸಿಡೆನ್ಸಿ ಇದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ವ್ಯಾಪಾರೀ ಕೇಂದ್ರಗಳಿಗೆ ಸುಸಜ್ಜಿತವಾದ ವಸತಿ ನಿಲಯಗಳು ವರ್ಷದ 12 ತಿಂಗಳು ಕಾಲ ಅವಶ್ಯವಿದೆ, ಅವುಗಳನ್ನು ವಂಚಿತ ವ್ಯಾಪಾರಸ್ಥರು ಇಲ್ಲಿಯವರೆಗೂ ದೂರದ ಊರುಗಳಿಗೆ ತೆರಳುವುದು ಅನಿವಾರ್ಯವಾಗಿತ್ತು, ನಿತ್ಯವೂ ಅವರುಗಳ ಓಡಾಟಕ್ಕೆ ಪ್ರತ್ಯೇಕ ವಾಹನದ ವ್ಯವಸ್ಥೆ ಇನ್ನಿತರ ಅವಶ್ಯಕತೆಗಳನು ಸ್ಥಳೀಯ ವರ್ತಕರು ಕಲ್ಪಿಸಿಕೊಡಬೇಕಾಗಿತ್ತು ಎಂದರು.

       ಉತ್ತಮ ನಿರ್ವಹಣೆಯಿರಲಿ: ಮಾಜಿ ಶಾಸಕ ಸುರೇಶಗೌಡ ಮಾತನಾಡಿ, ನರ್ಮದಾ ರೆಸಿಡೆನ್ಸಿ ಸಾರ್ವಜನಿಕ ಸೇವೆಗೆ ಲಭ್ಯವಾಗಿದ್ದು ಬಹಳ ಸಂತೋಷದ ಸಂಗತಿ, ವರ್ತಕರ ಸಂಘದ ಅಧ್ಯಕ್ಷನಾದ ಬಳಿಕ ವ್ಯಾಪಾರಸ್ಥರ ಅನುಕೂಲಕ್ಕಾಗಿ ಸಂಘದ ವತಿಯಿಂದ ಹತ್ತಾರು ರೂಮುಗಳಿರುವ ಅತಿಥಿಗೃಹವನ್ನು ಆರಂಭಸಿದ್ದೇವೆ, ಅವುಗಳ ನಿರ್ವಹಣೆಯಲ್ಲಿ ಆಗುತ್ತಿರುವ ಸಮಸ್ಯೆಗಳು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಪ್ರತಿಯೊಂದು ವಸತಿ ನಿಲಯಗಳಲ್ಲೂ ಜನರು ಕೊಡುವ ಹಣಕ್ಕಿಂತಲೂ ಅಲ್ಲಿನ ಸ್ವಚ್ಚತೆಗೆ ಪ್ರಮುಖ್ಯತೆಯನು ಪಡೆದುಕೊಳ್ಳಲಿದೆ ಎಂದರು.

          ಎಲ್ಲೆಂದರಲ್ಲಿ ಮಲಗುತ್ತಿದ್ದ ರೈತರಿಗೆ ಅನುಕೂಲ: ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮೆಣಸಿನಕಾಯಿ ಮಾರಾಟಕ್ಕೆಂದು ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳಿಂದ ಆಗಮಿಸುತ್ತಿದ್ದ ರೈತರಿಗೆ ಸ್ಥಳೀಯ ಎಪಿಎಂಸಿಯಲ್ಲಿ ರೈತಭವನ ಸೇರಿದಂತೆ ಇನ್ನಿತರ ಸೌಕರ್ಯಗಳಿಲ್ಲ ಹೀಗಾಗಿ ಎರಡ್ಮೂರು ದಿನಗಳು ತಂಗುವ ಅವರುಗಳು ಮಾರಾಟದ ಅಂಗಡಿ ಮಾಲೀಕರು ಸೇರಿದಂತೆ ಚೀಲಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಮಲಗುತ್ತಿದ್ದ ದೃಶ್ಯಗಳಿವೆ, ಆದರೆ ನರ್ಮದಾ ರೆಸಿಡೆನ್ಸಿ ಆರಂಭದಿಂದ ರೈತರಿಗೂ ಸಹ ಸ್ವಲ್ಪ ಮಟ್ಟಿನ ಅನುಕೂಲವಾಗಲಿದೆ ಎಂದರು.

       ಈ ಸಂದರ್ಭದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ವಿಧಾನಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ, ವರ್ತಕರಾದ ಎಸ್.ಡಿ.ಶಿರೂರ, ವಿ.ವಿ.ಹಿರೇಮಠ, ಮಂಜಣ್ಣ ಎಲಿ, ಶಿವಬಸಪ್ಪ ಕುಳೇನೂರ, ಶಂಕ್ರಣ್ಣ ಮಾತನವರ, ಮುತ್ತಯ್ಯ ಹಿರಮೇಠ, ನಾಗರಾಜ ಬಳ್ಳಾರಿ ಸೇರಿದಂತೆ ಲಾಡ್ಜಿಂಗ್ ಮಾಲೀಕ ಆರ್.ನಾಗರಾಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link