ಹಾನಗಲ್ಲ :
ಓದು ಮನುಷ್ಯನನ್ನು ಪರಿಪೂರ್ಣತೆಯಡೆಗೆ ಕೊಂಡ್ಯೊಯ್ಯುವ ಶಕ್ತಿ ವಾಹಕವಾಗಿದ್ದು ಬಾಲ್ಯದಲ್ಲಿಯೇ ಉತ್ತಮ ಪುಸ್ತಕದ ಓದಿಗೆ ಪ್ರೋತ್ಸಾಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಕರೆ ನೀಡಿದರು.
ಸೋಮವಾರ ಹಾನಗಲ್ಲಿನ ಶಾಖಾ ಸಾರ್ವಜನಿಕ ಗ್ರಂಥಾಲಯದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ಆಯೋಜಿಸಿದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪುಸ್ತಕ ಅಣ್ಣಾ ಹಜಾರೆಯಂತಹ ಹೋರಾಟಗಾರರಿಗೆ ಸ್ಪೂರ್ತಿಯಾಗಿದೆದ. ಇತಿಹಾಸದ ಜ್ಞಾನ, ಸಾಮಾಜಿಕ ಕಳಕಳಿಗಾಗಿ, ವೈಚಾರಿಕತೆಯ ಅಗತ್ಯಕ್ಕಾಗಿ, ಉತ್ತಮ ಅಭಿರುಚಿಗಾಗಿ ಬೇಕೇ ಬೇಕು. ನಮ್ಮೊಳಗೆ ಉತ್ತಮ ಸಂಸ್ಕಾರವನ್ನು ನೀಡುವಂತಹ ಗ್ರಂಥಗಳು ನಮ್ಮ ಒಳ್ಳೆಯ ಸ್ನೇಹಿತರು ಎಂಬುದನ್ನು ನೆನಪಿಸಿ, ಜೀವನದ ಆಳ ಅನುಭವ, ಸಾಹಿತ್ಯದ ಅಭಿವ್ಯಕ್ತಿಗಳು ಈ ಮೂಲಕ ನಮ್ಮ ಬದುಕಿಗೆ ಮಾರ್ಗದರ್ಶಿಯಾUಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶೇಖಣ್ಣ ಮಹಾರಾಜಪೇಟೆ, ಇಂದಿನ ಯುವಕರು, ಮಕ್ಕಳಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಉತ್ತಮ ಹವ್ಯಾಸವನ್ನು ನಾಳಿನ ಸಂಸ್ಕøತಿಯಲ್ಲಿರಿಸಲು ಈಗಲೇ ಮಕ್ಕಳಾದಿಯಾಗಿ ಎಲ್ಲರೂ ಪುಸ್ತಕ ಜ್ಞಾನಕ್ಕೆ ಹೋಗಲೇಬೇಕು. ಹಾನಗಲ್ಲ ಗ್ರಂಥಾಲಯದ ಅತ್ಯುತ್ತಮ ಕಟ್ಟಡದಲ್ಲಿ ಇನ್ನೂ ಅತ್ಯುತ್ತಮ ಪುಸ್ತಕಗಳು ದೊರೆಯುವಂತಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಎಸ್.ಬಳ್ಳಾರಿ, ಗ್ರಂಥಾಲಯ ನಮ್ಮ ದಿಕ್ಸೂಚಿ ಇದ್ದಂತೆ. ನಮ್ಮ ಸ್ಥಾನ ಮಾನವನ್ನು ಹೆಚ್ಚಿಸುವ, ಅರಿಯುವ, ಅರಗಿಸಿಕೊಳ್ಳಲು ಗ್ರಂಥಾಲಯ ಸಹಕಾರಿ, ದುರಭ್ಯಾಸಗಳ ವ್ಯಾಧಿ ಬಿಟ್ಟು ಓದುವ ಹಾದಿಗೆ ನಾವೆಲ್ಲಿ ಬರಬೇಕು. ಮಕ್ಕಳಿಗೆ ಮೊದಲು ಈ ಸಂಸ್ಕಾರಕ್ಕೆ ಆದ್ಯತೆ ನೀಡಲೇಬೇಕು ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಹಾವೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ವೀರೇಶ ಹಿತ್ತಲಮನಿ, ಅತಿಥಿಗಳಾಗಿದ್ದರು. ಗ್ರಂಥಾಲಯ ಇಲಾಖೆಯ ಎಪ್.ಎಚ್.ವಡ್ಡರ, ಪ್ರಕಾಶ ಕುಲಕರ್ಣಿ, ಕೆ.ಎಚ್.ಮುನಿಯಣ್ಣನವರ, ಬಿ.ಕೆ.ಮಹಾರಾಜ, ಎಂ.ಎಚ್.ದೊಡ್ಡದೇವರ, ಎಂ.ಎಸ್.ಜಂಗಮಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ