ಹೊಸಪೇಟೆ
ನಗರದ ಪ್ರತಿಷ್ಠಿತ ವಿನಾಯಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಸುವ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ 2018-19 ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಬಿ. ವಿ. ವಿಭಾ 582 (97%) ಅಂಕಗಳಿಸಿ ಬಳ್ಳಾರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ ಹಾಗು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಆರ್ಯ ಕೆ. ಆರ್ 580 (96.66%) ಅಂಕಗಳಿಸಿ ಬಳ್ಳಾರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಇದರಂತೆ ದೀಪ್ತಿ ಕೇಶವನಾಯ್ಕ್ 96.16%, ರೋಹಿಣಿ ಆರ್.ಧರೆನ್ನವರ್ 95.15% ಕೂಡ ಕಾಲೇಜಿನ ಟಾಪರ್ಗಳಾಗಿದ್ದಾರೆ.
ನಮ್ಮ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಒಟ್ಟು 47 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. 106 ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಉಳಿದ 14 ವಿದ್ಯಾರ್ಥಿಗಳು ಸಾಧಾರಣ ಪಾಸಾಗಿದ್ದಾರೆ. ಒಟ್ಟು ವಿಜ್ಞಾನ ವಿಭಾಗದ ಶೇಕಡವಾರು ಫಲಿತಾಂಶ 92 % ಆಗಿರುತ್ತದೆ.
ಹಾಗು ವಾಣಿಜ್ಯ ವಿಭಾಗದಲ್ಲಿ ಒಟ್ಟು 30 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ವಾಣಿಜ್ಯ ವಿಭಾಗದ ಶೇಕಡವಾರು ಫಲಿತಾಂಶ 96 % ಆಗಿರುತ್ತದೆ. ಎಂದು ತಿಳಿಸಲು ಹೆಮ್ಮೆಯ ವಿಷಯವಾಗಿದೆ.ವಿಧ್ಯಾರ್ಥಿಗಳ ಈ ಸಾಧನೆಗೆ ಪೋಷಕರು, ಪ್ರ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗು ಆಡಳಿತ ಮಂಡಳಿಯವರು ಅಭಿನಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








