ಹಾನಗಲ್ಲ :
ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮತದಾನ ನಮ್ಮೆಲ್ಲರ ಜನ್ಮಸಿದ್ಧ ಹಕ್ಕಾಗಿದೆ. ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ನಮ್ಮ ಸಂವಿಧಾನದ ಮಹತ್ವವನ್ನು ಉಳಿಸಿಕೊಳ್ಳಬೇಕು ಎಂದು ಹಿರಿಯ ವಿಭಾಗದ ಸಿವಿಲ್ ನ್ಯಾಯಾದಿಶರಾದ ಬಾಳಪ್ಪ ಅಣ್ಣಪ್ಪ ಜರಗು ಕರೆ ನೀಡಿದರು.
ಶುಕ್ರವಾರ ತಾಲೂಕು ತಹಶೀಲ್ದಾರ ಸಭಾಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಶಿಕ್ಷಣ ಇಲಾಖೆ, ಪುರಸಭೆ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಪ್ರಗತಿ ಹಾಗೂ ಸುಭದ್ರ ಭಾರತ ನಿರ್ಮಾಣಕ್ಕಾಗಿ ಆಸೆ ಆಮಿಷಕ್ಕೊಳಗಾಗದೆ, ಜಾತಿರಾಜಕಾರಣಕ್ಕೆ ಒಳಗಾಗದೇ, ದೇಶವನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋಗುವಂತಹ ಒಬ್ಬ ಶ್ರೇಷ್ಠ ವಿದ್ಯಾವಂತ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕು ನಮ್ಮದಾಗಿದೆ.
ಇಂದು ದೇಶ ಯುವಕರಿಂದ ತುಂಬಿದ್ದು, ಯುವಕರು ತಪ್ಪದೆ ಮತದಾನ ಮಾಡುವ ಮೂಲಕ ಉತ್ತಮ ಜನಪ್ರತಿನಿಧಿ ಆಯ್ಕೆಗೆ ಸಹಕರಿಸಬೇಕು. ಮತದಾನದ ವಯೋಮಿತಿಯನ್ನು 18 ವರ್ಷಕ್ಕೆ ಮಿತಿಗೊಳಿಸಿದಾಗ ಅತಿ ಹೆಚ್ಚು ಪ್ರಮಾಣದ ಮತದಾನವಾಗುತ್ತಿದೆ. ಯುವಕರು ಮತದಾನದಲ್ಲಿ ಪಾಲ್ಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಆಮಿಷಗಳಿಗೆ ಒಳಗಾಗದೆ ದೇಶದ ಹಿತಕ್ಕಾಗಿ ಮತದಾನ ಮಾಡುತ್ತಿದ್ದೇನೆ ಎಂಬ ಸ್ಪಷ್ಟ ನಿಲುವು ಪ್ರಾಮಾಣಿಕತೆ ನಮ್ಮದಾಗಿರಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ತಹಶೀಲ್ದಾರ ಎಂ.ಗಂಗಪ್ಪ, ಮತದಾನ ಪವಿತ್ರವಾದ ಒಂದು ಪ್ರಕ್ರಿಯೇ. ಇದು ನಮ್ಮ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಬೆಳವಣಿಗೆಗೆ ಎಲ್ಲರೂ ಒಟ್ಟಾಗಿ ಶ್ರಮಿಸಿ ದೇಶದ ಹಿತವನ್ನು ಕಾಯುವ ನಮ್ಮ ಸರಕಾರವನ್ನು ಆಯ್ಕೆ ಮಾಡುವ ಪವಿತ್ರ ಕಾರ್ಯ. ಮತದಾನದ ಸಂದರ್ಭದಲ್ಲಿ ನಾವು ದೇಶದ ಹಿತವನ್ನು ಕಣ್ಣೆದುರಿಗಿಟ್ಟುಕೊಂಡು ಮತದಾನ ಮಾಡಬೇಕು. ನಮ್ಮ ಪರಿಸರದ ಯಾರೊಬ್ಬರು ಮತದಾನದಿಂದ ಹೊರಗುಳಿಯದಂತೆ ಜವಾಬ್ದಾರಿ ವಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜೆಎಂಎಫ್‍ಸಿ ಕಿರಿಯ ಸಿವಿಲ್ ನ್ಯಾಧೀಶರಾದ ಎಫ್.ವಿ.ಕೆಳಗೇರಿ ಪ್ರತಿಜ್ಞಾವಿಧಿ ಬೋಧಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ, ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ಭಜಕ್ಕನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನಬಸಪ್ಪ ಹಾವಣಗಿ, ಮಹ್ಮದ ಶರೀಫ ಹಾನಗಲ್ಲ ಕಾರ್ಯಕ್ರಮದಲ್ಲಿದ್ದರು.
ಪ್ರಶಸ್ತಿ :ಹಾನಗಲ್ಲ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಮತಗಟ್ಟೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸುಭಾಸ ಹೊಸಮನಿ(ಅಜಗುಂಡಿಕೊಪ್ಪ), ಶಂಕರ ಜಿ.ಕೆ(ಯತ್ತಿನಹಳ್ಳಿ) ಇವರಿಗೆ ಅತ್ಯುತ್ತಮ ಬಿಎಲ್‍ಓ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಹುಮಾನ :
ಪ್ರಜಾಪ್ರಭುತ್ವ ಮತ್ತು ಮತದಾನದ ಮಹತ್ವ ಕುರಿತ ಭಾಷಣ ಸ್ಪರ್ಧೆಯಲ್ಲಿ ಲಕ್ಷ್ಮೀ ಕಾಗದನವರ, ಮೇಘಾ ಹಾವಣಗಿ, ಸವಿತಾ ಕಿವುಡನವರ, ಚರ್ಚಾಸ್ಫರ್ದೆಯಲ್ಲಿ ಸಂತೋಷ ಹರಿಜನ, ಲಕ್ಷ್ಮೀ ಕಾಗದನವರ, ಸವಿತಾ ಕಿವಡೇರ ಆಶುಭಾಷಣದಲ್ಲಿ ಆಂಜನೇಯ ಅಯ್ಯಪ್ಪನವರ, ಮೇಘಾ ಹಾವಣಗಿ, ಮಧು ಹಾವಣಗಿ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.
ವಿದ್ಯುನ್ಮಾನ ಮತಯಂತ್ರ ಶಿಕ್ಷಣ ಸ್ಪರ್ಧೆಯ ಪ್ರಬಂಧ ಸ್ಪರ್ಧೆಯಲ್ಲಿ ಸುಷ್ಮಾ ನರಗುಂದ, ಸುಮಾ ಕ್ಷೌರದ, ಪ್ರಗತಿ ಹುನಗಿನಹಳ್ಳಿ, ಭಿತ್ತಿಚಿತ್ರ ಸ್ಪರ್ಧೆಯಲ್ಲಿ ರಜನಿ ಉಳ್ಳಾಗಡ್ಡಿ, ಬಾಬು ಎಸ್, ಲಾಂಬೋರ, ರಸಪ್ರಶ್ನೆ ಸ್ಪರ್ಧೆಯಲ್ಲಿ ಸಹನಾ ಹಳೆಕೋಟಿ, ವೇದಶ್ರೀ ಕರಗುದರಿ, ಕೃಷ್ಣ ಕೋಕೇರ್ ಬಸವರಾಜ ತಹಶೀಲ್ದಾರ, ಇಂಗ್ಲೀಷ ಪ್ರಬಂಧ ಸ್ಫರ್ದೆಯಲ್ಲಿ ಪವನ ಗುಡಗುಡಿ ಅವರಿಗೆ ಬಹುಮಾನ ನೀಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ