ಕೊಟ್ಟೂರು
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಪರಿಸರವನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಅಪಾಯಕ್ಕೆ ಈಡಾಗಬೇಕಾಗುತ್ತದೆ ನ್ಯಾಯಾದೀಶರಾದ ಮುರುಘೇಂದ್ರಯ್ಯ ತುಬಾಕಿ ಎಂದು ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ, ವಿವಿದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಬುದುವಾರ ಆಚರಿಸಲಾಯಿತು.
ನ್ಯಾಯಾದೀಶರಾದ ಮುರುಘೇಂದ್ರಯ್ಯ ತುಬಾಕಿ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಜಾಗತೀಕ ತಾಪಮಾನ ಏರುತ್ತಿರುವುದಕ್ಕೆ ಕಾರಣ ಪರಿಸರವೇ ಕಾರಣ. ಆದ್ದರಿಂದ ಪ್ರತಿಯೊಬ್ಬರು ಪ್ರತಿ ವರ್ಷಕ್ಕೆ ಒಂದು ಗಿಡ ನೆಟ್ಟು, ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ಅಪಾಯಕ್ಕೀಡಗಾದಂತೆ ರಕ್ಷಿಸುವುದು ನಮ್ಮ ಕರ್ತವ್ಯ. ಇದು ಒಂದೇ ದಿವಸಕ್ಕೆ ಸೀಮಿತಗೊಳಿಸದೇ ಪ್ರತಿದಿನವು ಪರಿಸರ ದಿನಾಚಣರೆಯನ್ನು ಆಚರಿಸೋಣ ಎಂದು ಹೇಳಿದರು.
ತಹಶೀಲ್ದಾರ ಅನಿಲ್‍ಕುಮಾರ್ ಮಾತನಾಡಿ ಪರಿಸರ ಸಂರಕ್ಷಣೆಯಿಂದ ಉತ್ತಮ್ಮ ಆರೋಗ್ಯವನ್ನು ಹೊಂದಲು ಸಾಧ್ಯ. ಪರಿಸರವನ್ನು ನಾವು ಕಾಪಾಡಿದರೆ, ನಮ್ಮನ್ನು ಪರಿಸರ ಕಾಪಾಡುತ್ತದೆ. ಈ ವರ್ಷ ನಾವು ಕೊಟ್ಟೂರಿನ ಎಲ್ಲಾ ಬಡವಾಣೆ, ಶಾಲೆ, ಕಾಲೇಜುಗಳಲ್ಲಿ 1000 ಸಸಿ ನೆಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಪರಿಸರ ಮಾಲಿನ್ಯ ಉಪನಿರ್ದೇಶಕರಾದ ಬಿ.ಆರ್. ನಂಜುಂಡಪ್ಪ ಮಾತನಾಡಿ ಪ್ರತಿ ಬಡಾವಣೆಯಲ್ಲಿ ಮನೆಯ ಮುಂದುಗಡೆ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುವುದರಿಂದ ಜಾಗತೀಕ ತಾಪಮಾನ ಕಡಿಮೆಗೊಳಿಸಬಹುದು. ಹಬ್ಬ ಮತ್ತು ಶುಭ ಸಂಭ್ರಮಚಾರಣೆ ಸಂದರ್ಭದಲ್ಲಿ ಅದರ ಸವಿ ನೆನಪಿಗಾಗಿ ಗಿಡಗಳನ್ನು ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎ.ರೇಣುಕಮ್ಮ, ಗಾಳೆಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ್ ಚೆನ್ನಪ್ಪನವರ್, ಜೆ.ಸಿ.ಐ ಅದ್ಯಕ್ಷ ಗುರುಬಸವರಾಜ್, ಜೆ.ಸಿ.ಐ ಜಗದೀಶ್ಚಂದ್ರಭೋಸ್, ಪ.ಪಂ ಸದಸ್ಯರಾದ ಕೆ.ಎಸ್.ವೀಣಾ ವಿವೇಕಾಂದ ಗೌಡ, ಕೆ.ಶೈಲಜ ರಾಜು, ಹೆಚ್.ಅಂಜಿನಮ್ಮ, ವಿರೂಪಾಕ್ಷಿ, ಜಗದೀಶ್, ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಹಾಗೂ ಕಾಲೇಜ್ ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು.