ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನೆಹರು ಓಲೇಕರ್‌…!

ಹಾವೇರಿ:

      ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ನೆಹರು ಓಲೇಕಾರ ಅವರು ಜಿಲ್ಲಾಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.

      ಯಲವಿಗಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಅತೀವೃಷ್ಠಿಯಿಂದ ಹಾನಿಯಾದ ರೈತರಿಗೆ ಇನ್ನು ಪರಿಹಾರ ಹಣ ನೀಡಿಲ್ಲ ಎಂದು ಸಭೆಯಲ್ಲಿ ಜಿ.ಪಂ.ಸದಸ್ಯೆ ಚವ್ಹಾಣ ವಿಯಷ ಪ್ರಸ್ತಾಪಿಸುತ್ತಿದ್ದಂತೆ ಶಾಸಕ ನೆಹರು ಓಲೇಕಾರ ಅವರು ಜಿಲ್ಲಾಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕರು ಏರುಧ್ವನಿಯಲ್ಲಿ ಬೆಳೆ ವಿಮಾ ಪರಿಹಾರ, ಬೆಳೆ ನಷ್ಟ ಪರಿಹಾರದ ವಿಚಾರದಲ್ಲಿ ಅಧಿಕಾರಿಗಳು ಮಾಡುವ ನಿರ್ಲಕ್ಷ್ಯ ತನದಿಂದ ಸರಕಾರಕ್ಕೆ ಶಾಸಕರಿಗೆ ಕೆಟ್ಟ ಹೆಸರು ಬರುತ್ತೇ.

       ಈ ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದಾಗ ನಿಮ್ಮ ನಿರ್ಲಕ್ಷತನದಿಂದ ಜಿಲ್ಲಾಧಿಕಾರಿ ಕಚೇರಿಗೆ ಸಗಣಿ ಹೊಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ನಾವು ಅಧಿಕಾರಲ್ಲಿ ಇದ್ದೇವಿ. ನೀನು ಮಾಡುವ ನಿರ್ಲಕ್ಷತನಕ್ಕೆ ಜನ ನಮಗೆ ಸಗಣಿ ಹೊಡೆಯುವಂತ ಪರಿಸ್ಥಿತಿ ನಿರ್ಮಾಣ ಮಾಡಬೇಡಿ.

        ಕೃಷಿ ಸಚಿವರು ನಮ್ಮ ಜಿಲ್ಲೆಯರೇ ಇದ್ದಾರೆ. ಅವರ ಎದುರಿಗೆ ನಮ್ಮ ಜಿಲ್ಲೆಯಲ್ಲಿನ ಕೃಷಿ ಸಂಬಂಧಿಸಿದ ಯೋಜನೆಗಳ ಮಾಹಿತಿ ನೀಡಿ. ಸಚಿವರು ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸುತ್ತಾರೆ. ಅದನ್ನು ಸಗಣಿ ಹೊಡೆಸಿಕೊಳ್ಳುವ ಕೆಲಸ ಮಾಡಬೇಡಿ ಎಂದು ತರಾಟೆ ತೆಗೆದುಕೊಂಡರು. ಶಾಸಕರ ಆಕ್ರೋಶವನ್ನು ಗಮನಿಸಿದ ಸಚಿವ ಬಿ.ಸಿ.ಪಾಟೀಲ ಅವರು ಏಷ್ಟು ರೈತರಿಗೆ ಪರಿಹಾರ ಕೊಟ್ಟಿದ್ದೀರಿ, ಏಷ್ಟು ಪರಿಹಾರ ಕೊಡುವುದು ಬಾಕಿ ಎಂಬ ಬಗ್ಗೆ ಮತ್ತೊಮ್ಮೆ ಸಭೆ ಕರೆದು ಸಂಪೂರ್ಣ ವರದಿ ನೀಡಿ. ಸರಕಾರದ ಮಟ್ಟದಲ್ಲಿ ನಾನು ಸರಿಮಾಡುವ ಪ್ರಯತ್ನ ಮಾಡುವೆ. ಕೃಷಿ ಸಚಿವನಾಗಿ ನಾನು ಇರುವ ತನಕ ಜಿಲ್ಲೆಯ ರೈತರಿಗೆ ಯಾವ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದರು.

Recent Articles

spot_img

Related Stories

Share via
Copy link