ತುರುವೇಕೆರೆ
ಅನಾರೋಗ್ಯ ಸಮಸ್ಯೆಯಿಂದ ಬಾಲಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ಪಟ್ಟಣದಲ್ಲಿ ನಡೆದಿದೆ.
ಮೃತ ಬಾಲಕ ಪಟ್ಟಣದ ದೇವೇಗೌಡ ಬಡಾವಣೆಯ ಗೋವಿಂದಪ್ಪನವರ ಪುತ್ರ ಷಾಮವೇಲು (14). ಮೃತ ಬಾಲಕ ಒಂಬತ್ತನೇ ತರಗತಿ ಓದಿದ್ದು, ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ ಮನೆಯವರು ಬಂದು ನೋಡಿದಾಗ ಷಾಮವೇಲು ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.