ತುಮಕೂರು
ನಗರದ 4ನೇ ವಾರ್ಡ್‍ನ ಆಯಿಲ್ ಮಿಲ್ ರಸ್ತೆಯಲ್ಲಿರುವ ನಾಗರಿಕರ ವತಿಯಿಂದ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಹೊದಿಕೆ, ಚಾಪೆ, ಸೀರೆ, ಉಲ್ಲನ್ ಟೋಪಿ, ಒಳ ಉಡುಪು, ಸ್ಯಾನಿಟರಿ ನ್ಯಾಪ್ಕಿನ್ ಮುಂತಾದ ವಸ್ತುಗಳನ್ನು ರೆಡ್‍ಕ್ರಾಸ್‍ಸಂಸ್ಥೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡಿನ ಪಾಲಿಕೆ ಸದಸ್ಯ ಹೆಚ್.ಎಂ. ದೀಪಶ್ರೀ, ಪ್ರಜಾಪ್ರಗತಿ ಉಪಸಂಪಾದಕರಾದ ಮಧುಕರ್, ವಾರ್ಡಿನ ಮುಖಂಡರಾದ ಶ್ರೀನಿವಾಸ್, ಸತೀಶ್, ಮಹೇಶ್‍ಬಾಬು, ರಮೇಶ್, ವಿಜಯಕುಮಾರ್, ಸುನಿಲ್, ಸುರೇಶ್, ಮೋಹನ್, ಕಲ್ಯಾಣಕುಮಾರ್, ಆನಂದ್, ಶಿವಕುಮಾರ್, ರಫಿವುಲ್ಲಾ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
