ಹುಳಿಯಾರು:
ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಹುಳಿಯಾರು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಳವಡಿಸಿದ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವು ಮಾಡಲಾಯಿತು. ಸರ್ಕಾರದ ಸಾಧನೆಗಳು, ಯೋಜನೆಗಳು, ಮಾಹಿತಿಗಳನ್ನು ವಿವರಿಸುವ ಪ್ಲೆಕ್ಸ್ ಗಳು, ಜನಪ್ರತಿನಿಧಿಗಳ, ರಾಜಕೀಯ ಮುಖಂಡರುಗಳ ಭಾವಚಿತ್ರವಿರುವ ಎಲ್ಲಾ ಪ್ಲೆಕ್ಸ್, ಬ್ಯಾನರ್ ತೆರವು ಮಾಡಲಾಯಿತು.
ಬಸ್ ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಲ್ಲಿದ್ದ, ನಾಡಕಛೇರಿ ಬಳಿಯ ನೀರಿನ ಘಟಕದಲ್ಲಿದ್ದ ರಾಜಕಾರಣಿಗಳ ಫ್ಲಕ್ಸ್, ಪೊಲೀಸ್ ಠಾಣೆ ಸರ್ಕಲ್, ಬಸ್ ನಿಲ್ದಾಣ, ರಾಮಗೋಪಾಲ್ ಸರ್ಕಲ್‍ಗಳಲ್ಲಿ ಜಾತ್ರೆ, ಹುಟ್ಟುಹಬ್ಬ, ಧಾರ್ಮಿಕ ಸಭೆ ಸೇರಿದಂತೆ ವಿವಿಧ ಸಭೆ ಸಮಾರಂಭದ ಫ್ಲಕ್ಸ್‍ಗಳು ತೆರವಾದವು.
ಒಟ್ಟಾರೆ ಪಟ್ಟಣದ ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ರಾರಾಜಿಸುತ್ತಿದ್ದ ಹತ್ತಾರು ಫ್ಲೆಕ್ಸ್ ಗಳು, ಬ್ಯಾನರ್ ಗಳು ಚುನಾವಣೆ ಘೋಷಣೆಯಾದ ಕೂಡಲೇ ಮೂಲೆ ಸೇರಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
