ಹೊಸ ಬಸವಣ್ಣ ದೇವಸ್ಥಾನ ಉದ್ಘಾಟನೆ

ಶಿಗ್ಗಾವಿ:

        ದೇವಸ್ಥಾನಗಳು, ಭಾರತೀಯ ಸಂಸ್ಕಾರ, ಸಂಸ್ಕೃತಿ, ಜ್ಞಾನವೃದ್ದಿಸುವ ಹಾಗೂ ಧರ್ಮ ಜಾಗೃತಿ, ಜ್ಞಾನಾರ್ಜನೆ ಮೂಡಿಸುವ ಕೇಂದ್ರಗಳಾಗಬೇಕು ಎಂದು ಗಂಜೀಗಟ್ಟಿ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

         ಪಟ್ಟಣದಲ್ಲಿ ಸೋಮವಾರ ಪತ್ರಿ ಬಸವಣ್ಣ ದೇವಸ್ಥಾನ ಸೇವಾ ಸಮಿತಿ ವತಿಯಿಂದ ನಡೆದ ಪತ್ರಿ ಬಸವಣ್ಣ ದೇವಸ್ಥಾನ ಉದ್ಘಾಟನೆ,ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

          ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಧರ್ಮವಿದ್ದಲ್ಲಿ ಶಾಂತಿ, ನೆಮ್ಮ ಕಾಣಬಹುದು. ಹೀಗಾಗಿ ಧರ್ಮದ ದಾರಿಯಲ್ಲಿ ನಡೆದಾಗ ಮಾತ್ರ ಭವಿಷ್ಯದಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ. ತಂದೆ,ತಾಯಿ ಪೂಜಿಸುವ ಮೂಲಕ ಬದುಕನ್ನು ಪಾವನ ಮಾಡಿಕೊಳ್ಳಿರಿ ಎಂದರು.

          ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ದೇವಸ್ಥಾನ ನಿರ್ಮಾಣ, ಧರ್ಮ ಸಮಾರಂಭಗಳು ಸರ್ವರನ್ನು ಒಂದುಗೋಡಿಸುವ ಕಾರ್ಯ ಮಾಡುತ್ತಿವೆ. ಅದರಿಂದ ಸೇವಾ ಭಾವನೆ, ಪರೋಪಕಾರದ ಗುಣಗಳು ಬೆಳೆದು ಬರಲು ಸಾಧ್ಯವಾಗಿದೆ. ಅಂತಹ ಮನೋಭಾವನೆ ಪ್ರತಿಯೊಬ್ಬರಲ್ಲಿ ಮೂಡಲಿ ಎಂದರು.

           ಡಾ.ಪದ್ಮಾವತಿ ಮಾತನಾಡಿದರು. ಪ್ರಾಚಾರ್ಯ ಬಿ.ಎಫ್.ಹೊಸಮನಿ, ಪತ್ರಿ ಬಸವಣ್ಣ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಳಿಂಗಪ್ಪ ಕೋನಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಆರ್.ಆರ್.ದೇಶಪಾಂಡೆ, ವಿರೂಪಾಕ್ಷಗೌಡ್ರ ಪಾಟೀಲ, ಶಿವಾಜಿರಾವ್ ಸಿಂಧೆ, ಮಂಜು ತಿಮ್ಮಾಪುರ, ಉದಯಶಂಕರ ಹೊಸಮನಿ, ಪಿ.ವಿ.ತೆಂಬದಮನಿ, ಬಸಲಿಂಗಪ್ಪ ಕುನ್ನೂರ, ರಾಜು ಕೆಂಬಾಬಿ, ಎಸ್.ಡಿ.ಪಾಟೀಲ, ಸುಮಂಗಲಾ ವಿರಕ್ತಮಠ, ಮಾಲತೇಶ ಕಂಕನವಾಡ, ವೀರಭದ್ರಪ್ಪ ಹೊಸಮನಿ, ಶಿವಾನಂದ ತೋಟಪ್ಪನವರ, ನಾಗರಾಜ ಹಾನಗಲ್, ಶಾಂತಪ್ಪ ಅಕ್ಕಿ, ಅಶೋಕ ಈಳಿಗೇರ,ಗಂಗಾಧರ ಅಕ್ಕಿ, ವೀರಪ್ಪ ರೂಗಿಶೆಟ್ಟರ, ಚಂದ್ರಪ್ಪ ಶಿರೂರ, ಎ.ಬಿ.ಪಾಟೀಲ, ಚನ್ನಬಸಪ್ಪ ನೇಮಣ್ಣವರ, ನಾಗರಾಜ ಉಪಾರ, ಸರ್ಯಕಾಂತ ಕಾಟೇಗರ, ಈರಣ್ಣ ಕುಲಕರ್ಣಿ, ನೀಲಮ್ಮ ಹರಿಗೊಂಡ ಮತ್ತಿತರರು ಇದ್ದರು. ಇದೇ ವೇಳೆ ದೇವಸ್ಥಾನಕ್ಕೆ ಸೇವೆ ಸಲ್ಲಿಸಿದವರನ್ನು ಸಮಿತಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link