ನವಜಾತ ಶಿಶುವಿನ ಶ್ರವಣ ಪರೀಕ್ಷಾ ಕೇಂದ್ರ ಆರಂಭ

ಬಳ್ಳಾರಿ

          ಹುಟ್ಟಿನಿಂದ 3 ತಿಂಗಳ ಒಳಗಿನ ವಯಸ್ಸಿನ ನವಜಾತ ಶಿಶುಗಳಿಗೆ ಆರಂಭದಲ್ಲಿಯೇ ಶ್ರವಣ ತೊಂದರೆಯನ್ನು ಪತ್ತೆಹಚ್ಚಿ ಭವಿಷ್ಯದಲ್ಲಿ ಮಕ್ಕಳನ್ನು ಕಿವುಡ ಮತ್ತು ಮೂಕರಾಗದಂತೆ ತಡೆಗಟ್ಟಲು ಬಸಮ್ಮ ಹಿಯರಿಂಗ್ ಪೌಂಡೇಶನ್ ಬಳ್ಳಾರಿ ಮತ್ತು ಲಯನ್ಸ್ ಕ್ಲಬ್ ಇವರ ಸಹಕಾರದೊಂದಿಗೆ ಜಿಲ್ಲಾ ಆಸ್ಪತ್ರೆ ಬಳ್ಳಾರಿಯ ನವಜಾತ ಶಿಶು ಆರೈಕೆ ಘಟಕದಲ್ಲಿ ನವಜಾತ ಶಿಶುವಿನ ಶ್ರವಣ ಪರೀಕ್ಷಾ ಕೇಂದ್ರವನ್ನು ಆರಂಭಿಸಲಾಯಿತು.

         ಬಳ್ಳಾರಿ ನಗರದವರಾದ ಡಾ.ಶ್ರೀಶೈಲ್ ಬಿ. ಪ್ರಸ್ತುತ ಇಂಗ್ಲೆಂಡ್‍ನಲ್ಲಿ ಕಿವಿ, ಮೂಗು, ಗಂಟಲು ತಜ್ಞರಾಗಿದ್ದು ತಮ್ಮ ತಾಯಿಯವರ ಸ್ಮರಣಾರ್ಥವಾಗಿ ಬಸಮ್ಮ ಹಿಯರಿಂಗ್ ಪೌಂಡಶೇನ್ ಅನ್ನು ಸ್ಥಾಪಿಸಲಾಗಿದ್ದು ತಾವು ಪಡೆದ ತರಬೇತಿಯನ್ನು ಇಲ್ಲಿಯ ಮಕ್ಕಳ ತಜ್ಞರಿಗೆ ನೀಡಿ ಸುಸಜ್ಜಿತ ಪರೀಕ್ಷಾ ಯಂತ್ರವನ್ನು ಘಟಕದಲ್ಲಿ ಅಳವಡಿಸಿದ್ದಾರೆ. ಬಸಮ್ಮ ಹಿಯರಿಂಗ್ ಪೌಂಡೇಶನ್‍ನ ಅಧ್ಯಕ್ಷರಾದ ಬಸವರಾಜ್ ಬಿ. ಹಾಗೂ ಲಯನ್ಸ್ ಕ್ಲಬ್‍ನ ಅರವಿಂದ ಪಾಟೀಲ್ ರವರು ಈ ಘಟಕಕ್ಕೆ ಗುರುವಾರ ಚಾಲನೆ ನೀಡಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶಿವರಾಜ್ ಹೆಡೆ ಅವರು ಮಗುವು ಜನಿಸಿದ 3 ತಿಂಗಳ ಒಳಗಡೆ ಕಿವಿ ಕೇಳಿಸದಿರುವ ತೊಂದರೆಯನ್ನು ಪತ್ತೆ ಹಚ್ಚಿದಲ್ಲಿ ಹಾಗೂ ಸೂಕ್ತ ಚಿಕಿತ್ಸೆಯನ್ನು ನೀಡಿದಲ್ಲಿ ಕಿವುಡ ಮತ್ತು ಮೂಕರಾಗುವುದನ್ನು ತಪ್ಪಿಸಲು ಸಾಧ್ಯವಿದೆ. ಮಕ್ಕಳಿಗೆ ಹುಟ್ಟಿನಿಂದಲೇ ಕಿವಿ ಕೇಳದೆ ಇರುವುದನ್ನು ಪತ್ತೆಹಚ್ಚದಿದ್ದಲ್ಲಿ ಮುಂದೆ ಮಾತನಾಡಲು ಬಾರದೇ ಹೋಗುವ ಸಾಧ್ಯತೆಗಳು ಹೆಚ್ಚು ಈ ದಿಸೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭವಾಗಿರುವ ಘಟಕÀವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

         ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸರೆಡ್ಡಿಯವರು ಒಂದು ಸಾವಿರ ಮಕ್ಕಳಲ್ಲಿ ಕನಿಷ್ಟ 5 ರಿಂದ 6 ಮಕ್ಕಳು ಶ್ರವಣ ತೊಂದರೆಯಲ್ಲಿ ಇರುವವರು ಕಂಡು ಬರುತ್ತಾರೆ ಪ್ರಸ್ತುತ ನಮ್ಮ ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಅಳವಡಿಸಿದ್ದು ನಮ್ಮ ಭಾಗದ ಜನತೆಗೆ ಬಹುದೊಡ್ಡ ಕೊಡುಗೆ ಎಂದರು.

       ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸುವ ಎಲ್ಲಾ ನವಜಾತ ಶಿಶುಗಳಿಗೂ ತಪಸಾಣೆ ಮಾಡಲಾಗುವುದು ಅಲ್ಲದೇ ಶ್ರವಣದೋಷ ಕಂಡು ಬಂದ ಮಕ್ಕಳಿಗೆ ಬೆಂಗಳೂರಿನಲ್ಲಿ ಕಾಕ್ಲಿಯರ್ ಇಂಪ್ಲಾಂಟ್‍ನ್ನು ಅಳವಡಿಸಲು ಕಳಿಸಿಕೊಡುವ ವ್ಯವಸ್ಥೆಯನ್ನು ಪೌಂಡೇಶನ್ನು ಮೂಲಕ ಕೈಗೊಳ್ಳಲಾಗುವುದು ಎಂದರು.

        ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ರಾಜಶೇಖರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಜಯಲಕ್ಷ್ಮಿ ಆರ್., ಆರ್‍ಎಂಒ ಡಾ.ಸೌಭಾಗ್ಯವತಿ,ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ರವೀಂದ್ರನಾಥ ಎಮ್.ಹೆಚ್, ಮಕ್ಕಳ ತಜ್ಞರುಗಳಾದ ಡಾ.ವೀರ ಶಂಕರ್, ಡಾ.ಬಾಲು ವೆಂಕಟೇಶ್, ಡಾ.ಬಸವ ಪ್ರಭು, ಡಾ. ಸುನೀಲ್, ಇಎನ್‍ಟಿ ತಜ್ಞರಾದ ಡಾ.ಅನಿಲ್‍ರೆಡ್ಡಿ, ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ಮೌನೇಶ್, ಡಾ.ಲಕ್ಷ್ಮಿಕಾಂತ್ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ತಂಬಾಕು ಸಲಹೆಗಾರರಾದ ದುರುಗೇಶ್ ಮಾಚನೂರ್, ಹಿರಿಯ ಶುಶ್ರೂಷಕಿ ರೋಹಿಣಿ, ರಾಜಶೇಖರ್, ಮಾರೆಪ್ಪ ಸೇರಿದಂತೆ ಸಿಬ್ಬಂದಿ ವರ್ಗದವರು, ತಾಯಂದಿರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link