ಅಹಿಂದ 6ನೇ ವಾರ್ಡ್ ಘಟಕ ಉದ್ಘಾಟನೆ.

ಹೊಸಪೇಟೆ:

         ದೇಶ, ರಾಜ್ಯ ಕಟ್ಟಿ ಆಳಿದ ಅಹಿಂದ ಸಮುದಾಯಗಳು ಇಂದು ಎಲ್ಲಾ ರಂಗಗಳಲ್ಲೂ ಹಿಂದುಳಿದಿವೆ. ಹೀಗಾಗಿ ಈ ಸಮುದಾಯಗಳನ್ನು ಮೇಲಕ್ಕೆತ್ತುವ ಕೆಲಸವನ್ನು ಈ ಸಮುದಾಯದ ಯುವಕರು ಮಾಡಬೇಕಾಗಿದೆ ಎಂದು  ಮಂಜುನಾಥ ಹೇಳಿದರು.

           ನಗರದ ಹಂಪಿ ರಸ್ತೆಯ ಸುಣ್ಣದ ಭಟ್ಟಿಯ ಪೀರಲ ಮಸೀದಿಯಲ್ಲಿ ಸೋಮವಾರ ಆಯೋಜಿಸಿದ್ದ 6ನೇ ವಾರ್ಡ್ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ದೇಶ, ರಾಜ್ಯ, ಹಾಗು ಪ್ರಖ್ಯಾತ ಸಾಮ್ರಾಜ್ಯಗಳನ್ನು ಕಟ್ಟಿ ಆಳಿದ ಅಹಿಂದ ಸಮುದಾಯಗಳು ಇಂದು ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ದೇಶಕ್ಕೆ ಈ ಸಮುದಾಯಗಳು ಅಪಾರ ಕೊಡುಗೆಯನ್ನು ನೀಡಿವೆ. ಹೀಗಾಗಿ ಅವನ್ನು ಮೇಲಕ್ಕೆತ್ತುವ ಕೆಲಸ ಆಗಬೇಕಿದೆ ಎಂದರು.ಅಹಿಂದ ತಾಲೂಕು ಅಧ್ಯಕ್ಷ ಕುಬೇರ ಮಾತನಾಡಿ, ಸಂಘಟನಾ ಕೊರತೆಯಿಂದ ಈ ಸಮುದಾಯಗಳು ಮುಖ್ಯವಾಹಿನಿಗೆ ಬಂದಿಲ್ಲ. ಶೇ.52ರಷ್ಟಿರುವ ಈ ಸಮುದಾಯಗಳು ಜಾಗೃತಿಗೊಂಡರೆ ಏನು ಬೇಕಾದರೂ ಸಾಧಿಸಬಹುದು ಎಂದರು.

       ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ವೀರಸ್ವಾಮಿ, ನಗರಸಭಾ ಸದಸ್ಯೆ ನೂರ್ ಜಹಾನ್. ಅಹಿಂದ ಉಪಾಧ್ಯಕ್ಷ ಖಾದರ್ ಭಾಷಾ, ವೆಂಕಪ್ಪ, ಕೇಶವ, ರಮೇಶ, ರಫೀಕ್, ಪಂಪಣ್ಣ, ಬಸವರಾಜ ಇದ್ದರು.ಇದೇ ವೇಳೆ 6ನೇ ವಾರ್ಡ್ ಘಟಕ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

          ಅಧ್ಯಕ್ಷ ಇರ್ಷದ್, ಗೌರವಾಧ್ಯಕ್ಷ ಸಲೀಂ, ಉಪಾದ್ಯಕ್ಷರಾಗಿ ಗೋಪಾಲ, ವಿ.ನಾಗರಾಜ, ಪುಷ್ಪ, ರಫೀಕ್, ಕಾರ್ಯದರ್ಶಿಗಳಾಗಿಕೆ.ಶೇಕ್ಷಾವಲಿ, ಜಾರ್ಫ ಸಾದಿಕ್, ಸಂ. ಕಾರ್ಯದರ್ಶಿಯಾಗಿ ಮೆಹಬೂಬ ಭಾಷಾ, ಗಣೇಶ, ಜಿಲಾನ್, ಸಹ ಕಾರ್ಯದರ್ಶಿಯಾಗಿ ಅಶೋಕ, ರಘು, ಹುಸೇನ್, ನಿಜಾಮ್ ಆಯ್ಕೆಯಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link