ಬೆಂಗಳೂರು:
ಅನಧಿಕೃತ ಜಾಹೀರಾತು ಹಾವಳಿ ವಿರುದ್ಧ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಿತು.
ನಗರದಲ್ಲಿಅನಧಿಕೃತ ಜಾಹೀರಾತು ಹಾವಳಿ ವಿರುದ್ಧ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯು ಹಂಗಾಮಿ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯ ಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರು,ರಾಜ್ಯಸರ್ಕಾರದ ಪರ ವಾದಿಸಿ ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ.ಅಲ್ಲದೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿರುವುದರಿಂದ ಹೊಸ ಜಾಹೀರಾತು ನೀತಿ ಮತ್ತು ಉಪ ನಿಯಮಗಳನ್ನ ಇನ್ನೂ ಅಂತಿಮಗೊಳಿಸಲಾಗಿಲ್ಲ .ಮಾ.22ರಂದು ಬೈಲಾವನ್ನು ಅಂತಿಮಗೊಳಿಸಿ ನ್ಯಾಯಪೀಠಕ್ಕೆ ಸಲ್ಲಿಸಲಾ ಗುವುದು ಎಂದು ತಿಳಿಸಿದರು.
ನ್ಯಾಯಪೀಠವು ಪ್ರತಿಕ್ರಿಯಿಸಿ ಹೊಸ ಜಾಹೀರಾತು ಬೈಲಾ ಜಾರಿಗೆ ಸಂಬಂಧಿಸಿದಂತೆ 1ವರ್ಷ ಕಾಲಾವಕಾಶವನ್ನು ತೆಗೆದುಕೊಂಡಿದ್ದಿರಾ. ಆದರೂ ಇನ್ನು ಬೈಲಾವನ್ನು ನಿಮ್ಮಿಂದ ಪೂರ್ಣಗೊಳಿಸಲಾಗಿಲ್ಲ.ಮಾ.22ರಂದು ಯಾವುದೇ ನೆಪವನ್ನು ಹೇಳದೆ ಬೈಲಾ ಜಾರಿಯನ್ನು ಅಂತಿಮಗೊಳಿಸಿ ನ್ಯಾಯಪೀಠಕ್ಕೆ ಸಲ್ಲಿಸಬೇಕೆಂದು ಅಡ್ವೊಕೇಟ್ ಜನರಲ್‍ಗೆ ಹೈಕೋರ್ಟ್‍ಸೂಚನೆ ನೀಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
