ಬಿಎಂಟಿಸಿಯಿಂದ “ನಮ್ಮ ಬಸ್” ಲಾಂಚನ ಬಿಡುಗಡೆ..!

ಬೆಂಗಳೂರು

     ನಗರದಲ್ಲಿ ಸಮೂಹ ಸಾರಿಗೆಯನ್ನು ಬಲಗೊಳಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್‌ಗಳು, ಪ್ರತ್ಯೇಕ ಪಥದಲ್ಲಿ ನವೆಂಬರ್ ೧ ರಿಂದ ಸಂಚರಿಸಲಿದ್ದು, ಈ ಬಸ್‌ಗಳಿಗೆ ‘ನಿಮ್ಮ್ ಬಸ್‘ ಎಂದು ಹೆಸರಿಟ್ಟು ಲಾಂಛನ ಅನಾವರಣ ಮಾಡಲಾಗಿದೆ.ಬೈಯಪ್ಪನಹಳ್ಳಿ- ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಿಸಿದ್ದು ಪ್ರಾಯೋಗಿಕವಾಗಿ ಈಗಾಗಲೇ ಬಸ್ ಸಂಚಾರ ಆರಂಭಗೊಂಡಿದ್ದು ಇದಕ್ಕೆ ನಿಮ್ಮ ಬಸ್ ಎಂದು ಹೆಸರಿಡಲಾಗಿದೆ.

     ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದ ೧೨ ಪ್ರಮುಖ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಾಣ ಮಾಡಲಾಗಿತ್ತಿದ್ದು, ನವೆಂಬರ್ ೧ ರಿಂದ ಈ ಪಥದಲ್ಲಿ ಬಸ್ ಸಂಚಾರ ಆರಂಭಿಸಲಿದೆ.

    ಬಿಎಂಟಿಸಿ ವೋಲ್ವೊ ಬಸ್ ಬದಲು ವಿದ್ಯುತ್ ಚಾಲಿತ ಬಸ್‌ಗಳು ಸಂಚರಿಸಲಿವೆ. ೩.೫ ಮೀಟರ್ ಪ್ರತ್ಯೇಕ ಮಾರ್ಗವನ್ನು ಬಸ್‌ಗಳಿಗಾಗಿ ನಿರ್ಮಣ ಮಾಡಲಾಗಿದ್ದು, ಬೇರೆ ವಾಹನಗಳು ಸಂಚರಿಸದಂತೆ ಕ್ರಮ ಕೈಗೊಳ್ಳಲಾಗಿದೆ.ಕೆಆರ್‌ಪುರಂ ಟಿನ್ ಫ್ಯಾಕ್ಟರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ತನಕ ೧೮.೫ ಕಿ.ಮೀ. ಉದ್ದದ ಬಸ್ ಪಥವನ್ನು ನಿರ್ಮಾಣ ಮಾಡಿದ್ದು, ಉಳಿದ ೧೧ ಮಾರ್ಗಗಳಲ್ಲಿ ಪ್ರತ್ಯೇಕ ಪಥವನ್ನು ಶೀಘ್ರದಲ್ಲೇ ನಿರ್ಮಾಣ ಮಾಡಲು ಮುಂದಾಗಿದೆ.

     ಬೆಂಗಳೂರು ಮಹಾನಗರದಲ್ಲಿ ೬,೫೦೦ ಬಿಎಂಟಿಸಿ ಬಸ್‌ಗಳಿದ್ದು, ೬ ಸಾವಿರ ಬಸ್‌ಗಳು ಪ್ರತಿನಿತ್ಯ ರಸ್ತೆಗಿಳಿಯುತ್ತಿವೆ. ಸಂಚಾರದಟ್ಟಣೆ ಹಿನ್ನೆಲೆಯಲ್ಲಿ ಸಮಯಕ್ಕೆ ತಲುಪುವುದು ಕಷ್ಟಕರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಾಣ ಮಾಡಲಾಗಿದೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link